ಮದಕರಿ ಸಿನಿಮಾ ಯಾರೂ ಮಾಡಿದರೂ ಬೆಂಬಲ

ಚಿತ್ರದುರ್ಗ

     ಮದಕರಿನಾಯಕ ಸಿನಿಮಾವನ್ನು ಯಾರೆ ಮಾಡಲಿ ಅದಕ್ಕೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ನಾಯಕ ಸಮಾಜದ ಮುಖಂಡ ಅಜಂನಪ್ಪ ಸಮಾಜದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

      ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ಬಗ್ಗೆ ಕಳಕಳಿ ಇರುವವರು ಪೇಸ್‍ಬುಕ್ ವಾಸ್ಟಪ್‍ನಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿನಾಯಕ ಸಮುದಾಯವನನ್ನು ಅವಮಾನಿಸುತ್ತಿದ್ದಿರಾ ನಾಯಕ ಸಮುದಾಯದ ಮೇಲೆ ಕಾಳಜಿ ಇದ್ದರೆ ಸಮುದಾಯದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಗಿ ಎಂದು ಹೇಳಿದರು.

      ಸುದೀಪ್ ಆಗಲಿ ದರ್ಶನ್ ಅಗಲಿ ಮಾಡಲಿ. ನಿರ್ಮಾಪಕರು ಅವರಿಗೆ ಯಾರೂ ಸುಕ್ತ ಎಂದು ಅನಿಸುತ್ತಾರೋ ಅವರನ್ನು ಹಾಕಿಕೊಂಡು ಸಿನಿಮಾ ಮಾಡ್ತಾರೆ ನಟ ಸುದೀಪ್ ಕೂಡ ಇದರ ಬಗ್ಗೆ ದರ್ಶನ್ ಮಾಡಲಿ ಎಂದು ಹೇಳಿದ್ದಾರೆ. ಅದರೆ ಸಮುದಾಯದ ಕೆಲವರು ಯಾಕೆ ಇದಕ್ಕೆ ಬಣ್ಣ ಬಳಿದು ಮಾತನಾಡುತ್ತಿದ್ದರಾ ಇದು ಸರಿಯಲ್ಲ ಇದರಿಂದ ಸಮಾಜ ಮತ್ತು ಜನಾಂಗ ಹಾಗು ಕಲಾವಿದರಿಗೆ ಪೆಟ್ಟು ಬೀಳಲಿದೆ ಎಂದು ತಿಳಿಸಿದರು.

      ಯಾರೂ ಜಾತಿಗೆ ಕಟ್ಟು ಬಿದ್ದು ಸಿನಿಮಾ ಮಾಡುವುದನ್ನು ನಿಲ್ಲಿಸುವ ಹಾಗೆ ಮಾಡಬೇಡಿಮದಕರಿನಾಯಕ ಅಷ್ಟೆ ಅಲ್ಲದೆ ಹಲವಾರು ಕಥೆಗಳಿವೆ ಅವುಗಳ ಚಿತ್ರ ಮಾಡಿದ್ರೆ ಚಿತ್ರದುರ್ಗದ ಜನತೆ ನೋಡುತ್ತೆವೆ.ಅಂಜಿನಪ್ಪ ತಿಳಿಸಿದರು.ಗೋಷ್ಟಿಯಲ್ಲಿ ಬಿ.ಟಿ.ಜಗದೀಶ್, ರಾಜಣ್ಣ, ಸಂತೋಷ ಅಣ್ಣಪ್ಪ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link