ಅಪರಿಚಿತರ ಕರೆ-ಸಂದೇಶಕ್ಕೆ ಪ್ರತಿಕ್ರಯಿಸಬೇಡಿ

ದಾವಣಗೆರೆ:

        ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ವೈಯಕ್ತಿಕ ವಿಚಾರವನ್ನು ತಿಳಿದು, ಬ್ಲಾಕ್‍ಮೇಲ್ ಮಾಡುವವರಿರುತ್ತಾರೆ. ಹೀಗಾಗಿ ಅಪರಿಚಿತರ ಕರೆ, ಸಂದೇಶಗಳಿಗೆ ಯಾರೂ ಸಹ ಪ್ರತಿಕ್ರಯಿಸಬಾರದು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ನಾಗಶ್ರೀ ಕಿವಿಮಾತು ಹೇಳಿದ್ದಾರೆ.

        ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಅದು ಇನ್ನಷ್ಟು ಹೆಚ್ಚಾಗಿದೆ. ಫೇಸ್‍ಬುಕ್, ವಾಟ್ಸಾಫ್ ಬಳಕೆಯಿಂದಲೂ ದೌರ್ಜನ್ಯವಾದ ಉದಾಹರಣೆಗಳಿವೆ. ಆದ್ದರಿಂದ ಸಾಮಾಜಿಕ ಜಾಲತಾಣ ಬಳಸುವಾಗ ಮಹಿಳೆಯರು ಎಚ್ಚರ ವಹಿಸಬೇಕು ಹಾಗೂ ಅಪರಚಿತರೊಂದಿಗೆ ಸ್ನೇಹ, ವ್ಯವಹಾರ ಮಾಡಬಾರದು ಎಂದು ಸಲಹೆ ನೀಡಿದರು.

      ಬಾಲ್ಯವಿವಾಹ ಕಾನೂನು ಬಾಹೀರವಾದದೆಂದು ಗೊತ್ತಿದ್ದರೂ ಸಹ ಇಂದಿನ ಯುವ ಜನಾಂಗ ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ-ಪ್ರೇಮಗಳಿಗೆ ಸಿಲುಕಿ ಬಾಲ್ಯ ವಿವಾಹಕ್ಕೊಳಗಾಗಿ ತೊಂದರೆ ಅನುಭವಿಸುತ್ತಾರೆ. ಬಾಲ್ಯ ವಿವಾಹವಾದವರ ಮೇಲೂ ಹಾಗೂ ಅಪ್ರಾಪ್ತರ ಮೇಲೆ ಲೈಂಗೀಕ ದೌರ್ಜ ನಡೆಸುವವರ ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

      ಇಂದಿನ ಆಧುನಿಕ ಯುಗದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಿರಂತರವಾಗಿ ಹೆಚ್ಚುತ್ತಿವೆ. ದಿನನಿತ್ಯ ಮಾಧ್ಯಮಗಳಲ್ಲಿ ಅಂತಹ ಪ್ರಕರಣ ವರದಿಯಾದರೂ, ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚಿನ ಅನ್ಯಾಯ ಮಹಿಳೆಯರ ಮೇಲೆ ನಡೆಯುತ್ತಿದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಅಂತಹ ಪ್ರಕರಣಗಳು ಹೊರಗೆ ಬರುವುದೇ ಇಲ್ಲ. ಹಾಗಾಗದಂತೆ ಮಹಿಳೆಯರು ದೌರ್ಜನ್ಯ, ಅನ್ಯಾಯದ ವಿರುದ್ಧ ದನಿ ಎತ್ತಬೇಕು ಎಂದು ಕರೆ ನೀಡಿದರು.

       ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕೆಳ ಹಂತದಲ್ಲೇ ಮುಚ್ಚಿ ಹಾಕುವ ಪ್ರಯತ್ನಗಳಾಗುತ್ತವೆ. ಮಹಿಳೆಯರು ಸಹ ತಮ್ಮ ಕಷ್ಟ, ಸಮಸ್ಯೆ ನುಂಗಿಕೊಂಡು ಜೀವನ ಸಾಗಿಸುತ್ತಾರೆ. ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಕಾನೂನು ಅರಿವಿನ ಕೊರತೆಯಿಂದಾಗಿ ಮಹಿಳೆಯರು ಅವುಗಳ ಪ್ರಯೋಜನ ಪಡೆಯಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ನೊಂದ ಮಹಿಳೆಯರಿಗೆ ಕಾನೂನು ರಕ್ಷಣೆ ಒದಗಿಸಲು ನ್ಯಾಯಾಂಗ ಸದಾ ಸಿದ್ಧವಿದೆ. ಆದರೆ ಮಹಿಳೆಯರು ನ್ಯಾಯಾಲಯಕ್ಕೆ ಬರಲು ಹಿಂಜರಿಯುವುದರಿಂದ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಗೆ ವ್ಯವಸ್ಥೆಯೇ ಕಾರಣವಾಗಿದ್ದು, ಇದರನ್ನು ಸರಿಪಡಿಸಲು ಮಹಿಳೆಯರೇ ಮುಂದಾಗಬೇಕೆಂದು ಸಲಹೆ ನೀಡಿದರು.

      ಇಎಸ್‍ಐ ಆಸ್ಪತ್ರೆಯ ಹಿರಿಯ ತಜ್ಞೆ ಡಾ.ಸಂಧ್ಯಾ ರಾಣಿ ಮಾತನಾಡಿ, ನಮಗೆ ನಾನೇ ಗೌರವ ಕೊಟ್ಟುಕೊಳ್ಳದಿದ್ದರೇ, ಬೇರೆಯವರೂ ಸಹ ಕೊಡುವುದಿಲ್ಲ. ಆದ್ದರಿಂದ ಮೊದಲು ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು. ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಸ್ವಚ್ಛತೆ, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ.ಶಂಕರ್ ಆರ್.ಶೀಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ವೀರೇಶ್, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ಭಜಂತ್ರಿ, ಸಹಾಯಕ ಪ್ರಾಧ್ಯಾಪಕರಾದ ಗೌರಮ್ಮ, ಪ್ರೊ.ಎಂ.ಎಲ್.ತ್ರಿವೇಣಿ, ಪ್ರೊ.ಜಿ.ಟಿ.ಶಶಿಕಲಾ, ಎಸ್.ಎಂ.ಲತಾ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link