ಆಯುಷ್ ಪದ್ದತಿಗಳ ಅರಿವು ವಿಶೇಷ ಕಾರ್ಯಕ್ರಮ

ಚಿತ್ರದುರ್ಗ

     ಸಾರ್ವಜನಿಕರಿಗೆ ಆಯುಷ್ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲು ಉಪನ್ಯಾಸ,ಚಿಕಿತ್ಸಾ ಶಿಬಿರ, ಮನೆ ಮದ್ದುಗಳ ತಿಳುವಳಿಕೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಕೆ.ಎಲ್.ವಿಶ್ವನಾಥ್ ತಿಳಿಸಿದರು.

     ಜಿಲ್ಲಾ ಆಯುಷ್ ಇಲಾಖೆ, ವತಿಯಿಂದ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಯೋಜಿಸಲಾಗಿದ್ದ ಒಂದು ದಿನದ ಆಯುಷ್ ಪದ್ಧತಿಗಳ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಂದು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಈ ಉಪನ್ಯಾಸವನ್ನು ಆಯೋಜಿಸಲಾಗಿದೆ, ಆಯುಷ್ ಪದ್ಧತಿಗಳ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳಾದ ತಾವು ತಿಳಿದುಕೊಂಡು ಇದನ್ನು ಸಾರ್ವಜನಿಕರಿಗೆ ತಲುಪಿಸಿದಲ್ಲು ಕಾರ್ಯಕ್ರಮ ಯಶಸ್ವಿಯಾದಂತೆ. ಜಿಲ್ಲೆಯಾದ್ಯಂತ 36 ಆಯುರ್ವೇದ ಚಿಕಿತ್ಸಾಲಯಗಳಿದ್ದು ಸಾರ್ವಜನಿಕರು ಇವುಗಳ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು

     ವೈದ್ಯಾದಿಕಾರಿ ಡಾ.ಶಿವಕುಮಾರ್ ಆಯುಷ್ ಎಂದರೆ ಆಯುರ್ವೇದ, ಯೋಗ,ಯುನಾನಿ, ಸಿದ್ಧ,ಹೋಮಿಯೋಪತಿ ಹಾಗು ಸಿದ್ಧ ಪದ್ದತಿಗಳನ್ನು ಸೂಚಿಸುವ ಪದವಾಗಿದೆ. ಈ ಆಯುಷ್ ಪದ್ಧತಿಗಳು ಕೇವಲ ಚಿಕಿತ್ಸೆ ನೀಡುವ ಪದ್ಧತಿಗಳಲ್ಲ, ರೋಗ ಬರದಂತೆ ತಡೆಗಟ್ಟಿ ಆರೋಗ್ಯನೀಡುವ ಪದ್ದತಿಗಳಾಗಿವೆ, ಇವು ಭಾರತಿಯ ಮೂಲದ ನಮ್ಮದೇ ಪದ್ಧತಿಗಳು, ಇಂದು ಪ್ರಪಂಚದಾದ್ಯಂತ ಹೆಚ್ಚು ಬೇಡಿಕೆ ಬರುತ್ತಿದ್ದು ನಾವೆಲ್ಲ ಕೈಜೋಡಿಸಿ ಈ ಪದ್ದತಿಗಳನ್ನು ಜನರಿಗೆ ತಲುಪಿಸೊಣ ಈ ಉದ್ದೇಶಕ್ಕಾಗಿ ಈ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು

      ಅಮೃತ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ವಜಾûತ್ ನರ್ಸಿಂಗ್ ವೃತ್ತಿಯಲ್ಲಿರುವವರಿಗೆ ಎಲ್ಲಾ ವೈದ್ಯ ಪದ್ದತಿಗಳ ಪರಿಚಯವಿರುವುದು ಅತ್ಯಾವಶ್ಯಕ ಇಲ್ಲಿರುವ ಶಿಬಿರಾರ್ಥಿಗಳು ಆಯುರ್ವೇದ ವನ್ನು ಕಲಿತು ತಮ್ಮ ವೃತ್ತಿಜೀವನದಲ್ಲಿ ಸಮಾಜಕ್ಕೆ ತಲುಪಿಸಬೇಕೆಂದು ತಿಳಿಸಿದರು.

     ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ.ಪ್ರಶಾಂತ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು .ಸಂಪನ್ಮೂಲ ವ್ಯಕ್ತಿಗಳಾದ ಡಾ.ಚೇತನ್ ಆಯುರ್ವೇದದಲ್ಲಿ ಸೂಕ್ತವಾದ ಚಿಕಿತ್ಸೆನೀಡಿದಲ್ಲಿ ತ್ವರಿತವಾಗಿ ಖಾಯಿಲೆಗಳನ್ನು ಗುಣಪಡಿಸಬಹುದು.ಮನೆಮದ್ದು ಎಂಬುದು ಒಂದು ಪ್ರಥಮಚಿಕಿತ್ಸೆಯಾಗಿದ್ದು ಎಲ್ಲರಿಗೂ ಇದರ ಜ್ಞಾನ ಎಲ್ಲರಿಗೂ ಇರಬೇಕು ಎಂದರು.

    ಕು.ಸಿಂಧು ಪ್ರಾರ್ಥನೆ ನೆರವೇರಿಸಿದರು, ಡಾ.ಉದಯ ಭಾಸ್ಕರ್ ಅವರು ಸ್ವಾಗತ ಕೋರಿದರು, ಡಾ.ಪ್ರಶಾಂತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು,ಡಾ.ಶಂಕರ್.ಸಿ.ಕೊಟ್ರಿ ಅವರು ವಂದನಾರ್ಪಣೆ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಡಾ.ಕುಮಾರಸ್ವಾಮಿ,ಡಾ.ರಘುವೀರ್ ಅವರು ಹಾಜರಿದ್ದರು, ಸಂಪನ್ಮೂಲವ್ಯಕ್ತಿಗಳಾದ ಡಾ.ಗಿರಿಜಾ ಅವರು, ಡಾ.ಗಂಗಾಧರ್ ವರ್ಮ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link