ತಿಪಟೂರು :
ಹಣ್ಣು-ತರಕಾರಿಗಳನ್ನು ಕೊಳ್ಳಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಜನರು ಕೊರೊನಾ ಸೋಂಕನ್ನು ತಮ್ಮ ಮನೆಗೆ ಕರೆದುಕೊಂಡು ಹೋಗದೆ ಇರಲಿ ಎಂದು ಸೋಂಕು ನಿವಾರಣೆ ಸಿಂಪಡಿಸುವ ಘಟಕವನ್ನು ಸ್ಥಾಪಿಸಿರುವುದು ಎ.ಪಿ.ಎಂ.ಸಿಯ ಉತ್ತಮ ಕಾರ್ಯವಾಗಿದೆ ಎಂದು ಹಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸತೀಶ್ ಎಸ್.ಟಿ. ತಿಳಿಸಿದರು
ಸೋಂಕು ನಿವಾರಕ ಸಿಂಪಡಿಸುವ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿದೆ. ಸಾರ್ವಜನಿಕರು ಮಾರುಕಟ್ಟೆಗೆ ಬಂದ ನಂತರ ಇಲ್ಲಿ ವ್ಯಾಪಾರವನ್ನು ಮುಗಿಸಿ ಮನೆಗೆ ಹೋಗುವಾಗ ಯಾವುದೇ ತರಹದ ವೈರಾಣುವನ್ನು ಕೊಂಡೊಯ್ಯಬಾರದು ಎಂಬ ಉದ್ದೇಶದಿಂದ ಮತ್ತು ಜನಸಂದಣಿ ಹೆಚ್ಚಾಗಿರುವ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡುವುದು ಅತ್ಯವಶ್ಯಕ, ಕೆಲವು ಸಾರಿ ಅಚಾನಕ್ಕಾಗಿ ಹತ್ತಿರ ನಿಂತು ಕೊಳ್ಳಬೇಕಾಗುತ್ತದೆ, ಇದರಿಂದಾಗಿ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಂತಹ ಘಟಕದಲ್ಲಿ ಹಾದು ಹೋಗುವುದರಿಂದ ಕರೋನಾವನ್ನು ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಕರೋನಾ ಸೋಂಕು ನಿವಾರಕ ಸಿಂಪಡಿಸುವ ಘಟಕವನ್ನು ಸ್ಥಾಪನೆ ಮಾಡಿವೆ ಇದರಿಂದ ಕರೋನಾ ವೈರಸ್ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದನ್ನು ಸಾರ್ವಜನಿಕರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ.
ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಕೊಬ್ಬರಿ ಮಾರುಕಟ್ಟೆಯಲ್ಲಿ ದ್ವಿಚಕ್ರವಾಹನವು ಸಾಗುವಂತೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಉದ್ಘಾಟನೆಯ ಸದಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಷಡಕ್ಷರಿ, ಡಿ.ವೈ.ಎಸ್ಪಿ, ತಹಸೀಲ್ದಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ