ಅಪ್ಪ ಆಧಾರ್ ಗೆ, ಅಮ್ಮ ಆಯುಷ್ಮಾನ್‍ಗೆ ಮಗ ಪಹಣಿಗೆ ..!!

ತಿಪಟೂರು :

     ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿಸಲ್ಲಿಸಲು ಬರುವವರು ಒಂದಿಲ್ಲೊಂದು ಯೋಜನೆಗಳಿಗೆ ಸಾರತಿಸಾಲಿನಲ್ಲಿ ನಿಲ್ಲುವುದು ಸಾಮಾನ್ಯ ಆದರೆ ಕುಟುಂಬದಲ್ಲಿರುವವರೆಲ್ಲ ಒಂದೊದು ಸರತಿಸಾಲಿನಲ್ಲಿ ನಿಲ್ಲವಂತೆ ಮಾಡುತ್ತಿದ್ದು ಇದರ ಮಧ್ಯೆ ಸರ್ವರ್ ಇಲ್ಲ ಎಂಬಂತಾಗಿದ್ದು ಜನರು ದಿನನಿತ್ಯ ಕಛೇರಿಗಳಿಗೆ ಅಲೆಯುವುದು ಮಾತ್ರ ತಪ್ಪುತ್ತಿಲ್ಲ.

      ಆಯುಷ್ಮಾನ್‍ಗೆ ಕೇವಲ ದಿನಕ್ಕೆ 30 ಟೋಕನ್ : ಸಾರ್ವಜನಿಕರ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್‍ಮಾಡಿಸಲು ದಿನಕ್ಕೆ 30 ಟೋಕನ್‍ಗಳನ್ನು ವಿತರಿಸಲಾಗುತ್ತದೆ ಎಂದು ಸೂಚನಾಫಲಕವನ್ನು ಹಾಕಿದ್ದು ಅದರಂತೆ ಜನರು ಬೆಳಗಿನ ಜಾವವೇ ಬಂದು ಸರತಿಸಾಲಿನಲ್ಲಿ ನಿಲ್ಲುತ್ತಿದ್ದು ನಾಮುಂದು ತಾ ಮುಂದು ಎಂದು ಟೋಕನ್ ಪಡೆದು ಆಯುಷ್ಮಾನ್ ಕಾರ್ಡ್ ಮಾಡಿಸುತ್ತಿದ್ದಾರೆ.

      ದಿನಕ್ಕೆ 30 ಟೋಕನ್ ನಂತೆ ಎಂದರೆ ತಾಲ್ಲೂಕಿನಲ್ಲಿ ಸುಮಾರು 50,000 ಪಡಿತರ ಚೀಟಿಗಳಿದ್ದು ಅವರುಗಳಿಗೆ ಕಾರ್ಡ್ ಮಾಡಬೇಕೆಂದರೆ 1800 ದಿನಗಳಾಗುತ್ತಿದ್ದು ಅಂದರೆ ಸುಮಾರು 3 ವರ್ಷಗಳಾಗುತ್ತದೆ ಅವರಿಗೆಲ್ಲಾ ಆಯುಷ್ಮಾನ್ ಕಾರ್ಡ್‍ಗಳು ದೊರೆಯುವುದು ಯಾವಾಗ ಜನರ ಸರತಿಸಾಲು ಮುಗಿಯುವುದು ಯಾವಾಗ ಎಂಬುದು ತಿಳಿಯದಾಗಿದೆ.

ಆಧಾರ್, ಆಧಾರ್ ಆಧಾರ್ :

      ಇನ್ನು ಬಹು ಮುಖ್ಯವಾಗಿ ಎಲ್ಲವಕ್ಕೂ ಆಧಾರ್ ಕಾರ್ಡ್‍ಯೇ ಆಧಾರವಾಗಿದ್ದು ಇದನ್ನು ಸರಿಪಡಿಸಲು, ಹೊಸದಾಗಿ ಮಾಡಿಸಲು, ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು ಇಲ್ಲೂ ದಿನಕ್ಕೆ ಅದು ಕಸಬಾ ಹೋಬಳಿಯವರಿಗೆ ಮಾತ್ರವೇ 30 ಟೋಕನ್‍ಗಳನ್ನು ಕೊಡುತ್ತಿದ್ದು ಈ 30 ಟೋಕನ್ ಮುಗಿಯಲು ಸಂಜೆಯಾಗುತ್ತದೆ ಇಲ್ಲಿ ಅಂಗವಿಕಲರು, ಗರ್ಭಿಣಿ-ಬಾಣಂತಿಯರು, ಅಜ್ಜ-ಅಜ್ಜಿಯರು, ಮಕ್ಕಳು ಮೊಮ್ಮಕ್ಕಳು ಎಂಬ ಯಾವುದೇ ಬೇದಭಾವವಿಲ್ಲದೇ ಆಧಾರ್‍ಗೆ ಎಲ್ಲರೂ ಒಂದೇ ಎಂಬಂತೆ ಕಾಣುತ್ತಿದ್ದು ಮಕ್ಕಳು ಆಟವಾಡುತ್ತಿದ್ದರೆ ವಯಸ್ಸಾದವರು ಅಲ್ಲಿ ಪವಡಿಸುತ್ತಿದ್ದಾರೆ.

ಕಿಸಾನ್ ಸಮ್ಮಾನ್ ನಿಧಿ :

      ಇತ್ತೀಚಿನ 2.0 ಬಿ.ಜೆ.ಪಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಎಲ್ಲಾ ರೈತರಿಗೂ ಅನ್ವಯವಾಗುವಂತೆ ಯೋಜನೆ ರೂಪಿಸಿದ್ದರ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದ ತಾಲ್ಲೂಕು ಆಡಳಿತದಿಂದ ರೈತರ ಬಳಿಯಲ್ಲಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಆನ್‍ಲೈನ್ ಮುಖಾಂತರ ಅಪ್‍ಡೇಟ್ ಮಾಡುವ ಕಾರ್ಯ ಚಾಲ್ತಿಯಲ್ಲಿದೆ. ಸ್ಥಳೀಯ ಮಟ್ಟದಲ್ಲಿ ಅಂದರೆ ಗ್ರಾಮ-ಗ್ರಾಮಗಳ ಮಟ್ಟಕ್ಕೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರುಗಳನ್ನು ಕಳುಹಿಸಿ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇಲ್ಲು ಅದೇ ಸರತಿ ಸಾಲು.

ಬೆಳೆವಿಮೆಗೆ ಪಹಣಿ :

       ಇನ್ನು ಈಗ ಪಹಣಿ ಸಮಸ್ಯೆಯನ್ನು ಬಗೆ ಹರಿಸಲು ಭೂಮಿ ವೆಬ್‍ಸೈಟ್ ಮುಖಾಂತರ ರೈತರೆ ಪಹಣಿಯನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದ್ದು, ನಾಡ ಕಛೇರಿಗಳಲ್ಲಿ ಒಂದು ಪಹಣಿಗೆ 15 ರೂ ಪಡೆದರೆ ಖಾಸಗಿಯಲ್ಲಿ ಒಂದು ಪಹಣಿಗೆ 20-30 ರೂ ಪಡೆಯುತ್ತಿದ್ದಾರೆ. ಆದರೂ ಭೂಮಿ ವೆಬ್‍ಸೈಟ್‍ಗೆ ಅಗತ್ಯವಿರುವ ತ್ವರಿತ ಬ್ಯಾಕ್‍ಅಪ್ ನೀಡದೇ ಇರುವುದರಿಂದ ಎಲ್ಲರೂ ಒಂದೇ ವೈಬ್‍ಸೌಟ್ ಬಳಸುವುದರಿಂದರಿಂದ ತಾಂತ್ರಿಕ ಸಮಸ್ಯೆ ಉಂಟಾಗಿ ಸರ್ವರ್ ಡೌನ್ ಆಗಿ ಯಾರಿಗೂ ಪಹಣಿಯೇ ದೊರೆಯದ ಪರಿಸ್ಥಿತಿ ಉಂಟಾಗಿದೆ.

        ಒಂದು ಪಹಣಿ ಪಡೆಯಲು ಬೆಳಗಿನಿಂದ ಸಂಜೆಯವರಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಬಂದು ಕಾಯುತ್ತಿರುವ ರೈತರು ಹೈರಾಣಾಗಿ ಹೋಗಿದ್ದಾರೆ. ಉನ್ನತ ಮಟ್ಟದಲ್ಲಿಯೇ ಸಮಸ್ಯೆಯನ್ನು ಬಗೆ ಹರಿಸಲು ಭೂಮಿ ವೆಬ್‍ಸೈಟ್‍ಗೆ ಹೆಚ್ಚಿನ ಸರ್ವರ್ ಬ್ಯಾಕ್‍ಅಫ್ ನೀಡಿದರೆ ಎಷ್ಟೇ ಜನ ಬಳಸಿದರೂ ಸರ್ವರ್ ಡೌನ್ ಆಗುವುದಿಲ್ಲ.

        ಪ್ರಸ್ತುತ ಎಲ್ಲಾ ತಾಲ್ಲೂಕು ಆಡಳಿತಗಳು ಜೂನ್ 30ರವರಗೆ ಅರ್ಜಿಗಳನ್ನು ಪಡೆದು ಅಪ್‍ಡೇಟ್ ಮಾಡುತ್ತಿದ್ದು, ರೈತರು ಕಂಗಾಲಾಗುವ ಸನ್ನಿವೇಶವೇ ಇಲ್ಲ. ಅಲ್ಲದೇ ಸ್ಥಳೀಯ ಮಟ್ಟಕ್ಕೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಬಂದು ಅರ್ಜಿಯನ್ನು ಪಡೆದುಕೊಳ್ಳುತ್ತಿದ್ದು ರೈತರು ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರೆ ಉತ್ತಮವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap