ಕೆಡವಿದ ಶಾಲಾ ಗೋಡೆ ಕಟ್ಟಿಸಲು ಆಗ್ರಹ

ಹುಳಿಯಾರು:

      ಮರ ಕಡಿಯುವ ವೇಳೆ ಕೆಡವಿದ ಕಾಂಪೌಂಡ್ ಗೋಡೆಯನ್ನು ಅನ್ನು ಶೀಘ್ರ ಪುನಃ ಕಟ್ಟಿಕೊಡುವಂತೆ ಹುಳಿಯಾರು ಎಂಪಿಎಸ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಅವರು ಆಗ್ರಹಿಸಿದ್ದಾರೆ.

       ಹುಳಿಯಾರು ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ರಸ್ತೆ ಕಾಮಗಾರಿಗೆ ರಸ್ತೆ ವಿಸ್ತರಣೆಗಾಗಿ ಸರಿಸುಮಾರು 30 ವರ್ಷಗಳಿಂದ ಬೆಳೆದಿದ್ದ ನೀಲಗಿರಿ ಮರಗಳನ್ನು ಕಡಿಯಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿನ ಮರಗಳನ್ನು ಕಡಿಯುವ ನಿಯಮದಂತೆ ಅನುಮತಿ ಪಡೆದು ಮರ ಕಡಿದಿದ್ದಾರೆ. ಆದರೆ ಮರ ಕಡಿಯುವಾಗ ನಿರ್ಲಕ್ಷ್ಯ ವಹಿಸಿದ ಪರಿಣಾಮ ಶಾಲಾ ಕಾಂಪೌಂಡ್ ಮೇಲೆ ಮರ ಬಿದ್ದು ಗೋಡೆಗೆ ಧಕ್ಕೆಯಾಗಿದೆ.

       ಇದೇ ಸಂದರ್ಭದಲ್ಲಿ ಮರಕಡಿಯುತ್ತಿದ್ದವರು, ಕಡಿದ ಮರಗಳನ್ನು ಸಾಗಿಸುತ್ತಿದ್ದವರು ಹೀಗೆ ಇಬ್ಬರನ್ನೂ ಕೆಡವಿದ ಕಾಂಪೌಂಡ್ ಕಟ್ಟಿಕೊಡುವಂತೆ ಕೇಳಿಕೊಳ್ಳಲಾಗಿತ್ತು. ಕಾಂಪೌಂಡ್ ಕಟ್ಟದ ವಿನಃ ಉಳಿದ ಮರಗಳನ್ನು ಕೆಡವಬಾರದೆಂದು ಪಟ್ಟು ಹಿಡಿದಿದ್ದೆವು. ಆದರೆ ಇನ್ನೆರಡು ದಿನಗಳಲ್ಲಿ ಕಾಂಪೌಂಡ್ ಕಟ್ಟಿಕೊಡುತ್ತೇನೆ. ಕೂಲಿಕಾರರು ಸಿಗುವುದಿಲ್ಲ ಸಹಕರಿಸಿ ಎಂದು ಮನವಿ ಮಾಡಿದ ಮೇರೆಗೆ ಅವರ ಮೇಲೆ ನಂಬಿಕೆಯಿಟ್ಟು ಸುಮ್ಮನಾಗಲಾಗಿತ್ತು.

       ಆದರೆ ಮರ ಕಡಿದುಕೊಂಡು ಹೋಗಿ ಹದಿನೈದು ದಿನಗಳೇ ಕಳೆದರೂ ಕಾಂಪೌಂಡ್ ಕಟ್ಟಲು ಇನ್ನೂ ಮೀನಾಮೇಷ ನೋಡುತ್ತಿದ್ದಾರೆ. ಇನ್ನಾದರೂ ತಕ್ಷಣ ಕಾಂಪೌಂಡ್ ಗೋಡೆ ಕಟ್ಟಿಕೊಡದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಬಿಇಓ ಹಾಗೂ ಹೈವೆ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link