ಬೆಂಗಳೂರು
ಅಲಂಕಾರಿಕ ಮೀನು ಸಾಕಾಣೆ ಮಾಡುವ ಅಕ್ವೇರಿಯಂ ಅಂಗಡಿ ಮಾಲೀಕ ಸೈಯದ್ ಇಫ್ರಾನ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಭೀಕರ ಘಟನೆ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಅಕ್ವೇರಿಯಂ ಅಂಗಡಿ ಮಾಲೀಕ ಶಿವಾಜಿನಗರದ ಸೈಯದ್ ಇಫ್ರಾನ್ (25)ನನ್ನು ಸೇಂಟ್ ಜೋಸಫ್ ಸ್ಕೂಲ್ ಬಳಿ ರಾತ್ರಿ 12.30ರ ವೇಳೆ ಕರೆತಂದು ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಮಾಂಸ ಕತ್ತರಿಸುವ ಮಚ್ಚು, ಇನ್ನಿತರ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಫ್ರಾನ್‍ನನ್ನು ಸ್ಥಳೀಯರು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ 2.30ರ ವೇಳೆ ಮೃತಪಟ್ಟಿದ್ದಾರೆ.
ಶಿವಾಜಿನಗರದಲ್ಲಿ ಅಕ್ವೇರಿಯಂ ಅಂಗಡಿ ನಡೆಸುತ್ತಿದ್ದ ಇಫ್ರಾನ್‍ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆಯಿದ್ದು, ಪ್ರಕರಣ ದಾಖಲಿಸಿರುವ ಶಿವಾಜಿನಗರ ಪೆಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ರಾಹುಲ್‍ಕುಮಾರ್ ಶಹಪುರವಾಡ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
