ಬಿಜೆಪಿಯವರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳ? : ಡಿಕೆಶಿ

ಬೆಂಗಳೂರು

       ವಿವಾದಾಸ್ಪದ ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಲ್ಲ ಎಂದು ವ್ಯಂಗ್ಯವಾಡಿದ್ದಾರೆ.

       ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು . ಆದರೆ ಸಿದ್ದರಾಮಯ್ಯನವರ ಜಾಗದಲ್ಲಿ ನಾನಿದ್ದಿದ್ದರೆ ಯೋಜನೆಗೆ ಕೆಲ ಬದಲಾವಣೆ ತಂದು ಜಾರಿಗೊಳಿಸುತ್ತಿದ್ದೆ. ಬಿಜೆಪಿಯವರ ಈಗಲೂ ಏನು ಬೇಕಾದರೂ ಮಾಡಿಕೊಳ್ಳಿ,ಯಾರು ಎಷ್ಟು ಹರಿಶ್ಚಂದ್ರರ ಮೊಮ್ಮಕ್ಕಳು ಎಂದು ಗೊತ್ತಿದೆ ಎಂದರು.

       ಸ್ಟೀಲ್ ಬ್ರಿಡ್ಜ್ ಸಂಬಂಧ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಹಣ ಸಂಗ್ರಹಣೆ ಮಾಡಿದ್ದಾರೆಂದು ಬಿಜೆಪಿಯವರು ಈ ಹಿಂದೆ ಆರೋಪ ಮಾಡಿದ್ದರು. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಲೋಪದೋಷಗಳಿದ್ದರೆ ವಿಪಕ್ಷದವರು ಸೂಕ್ತ ಸಲಹೆ,ಸೂಚನೆ ನೀಡಲಿ ಅದನ್ನು ಸ್ವಿಕರಿಸುತ್ತೇವೆ. ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚು ಶತ್ರುಗಳಿರುತ್ತಾರೆ. ಗಟ್ಟಿಯಾದಷ್ಟು ಹೆಚ್ಚೆಚ್ಚು ದೊಡ್ಡ ಶತ್ರುಗಳ ಹುಟ್ಟುಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

        ವಿಪಕ್ಷ ನಾಯಕ ಯಡಿಯೂರಪ್ಪ ಅವರು ದೊಡ್ಡ ದೊಡ್ಡ ಆಸೆಗಳನ್ನು ಹೊಂದಿರಲಿ,ಅದೇ ರೀತಿ ಆಪರೇಷನ್ ಕಮಲ ನಡೆಸುತ್ತಲೇ ಇರಲಿ ಎಂದು ಶುಭಕೋರಿದರು.

        ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯವರು ಶಾಸಕರ ಖರೀದಿಗೆ 20 ರಿಂದಿ 30 ಕೋಟಿ ಹಣ ನೀಡಲು ಮುಂದಾಗಿದ್ದಾರೆಂದು ಹಣದ ವ್ಯವಹಾರದ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಸಮಗ್ರ ತನಿಖೆಯಾಗಬೇಕು.ಅಷ್ಟೇ ಏಕೆ ದೆಹಲಿಯಲ್ಲಿ ಬಿಜೆಪಿಯವರು ಅತೃಪ್ತ ಶಾಸಕರೊಂದಿಗೆ ಎಲ್ಲಿ ಸಭೆ ಮಾಡಿದ್ದಾರೆ, ಮುಂಬೈನಲ್ಲಿ ಎಲ್ಲಿ ಮೀಟಿಂಗ್ ಮಾಡುತ್ತಿದ್ದಾರೆಂಬ ಬಗ್ಗೆ ಸರ್ಕಾರಕ್ಕೆಮಾಹಿತಿ ಇದೆ. ಬಿಜೆಪಿಯವರು ಏನೂ ಮಾಡುತ್ತಾರೋ ಮಾಡಿಕೊಳ್ಳಲಿ ಅವರಿಗೆ ಹೊಸ ವರ್ಷದ ಶುಭಾಶಯ ಕೋರುತ್ತೇನೆ ಎಂದರು.

        ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಯಡಿಯೂರಪ್ಪ ಅವರನ್ನು ಕೇಳಿ. ಅವರಿಗೆ ಎಲ್ಲಾ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

        ನಿನ್ನೆ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ.ಆದರೆ ಶ್ರೀರಾಮುಲು, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಸರ್ಕಾರ ರಚನೆಗೆ ತಯಾರಿ ನಡೆಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ, ಗೂಟ ಹೊಡೆದುಕೊಂಡು ಕುಳಿತುಕೊಳ್ಳಲ್ಲ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ಈಗಲೇ ವಿಧಾನಸೌಧಕ್ಕೆ ಹೋಗಿ ಕುಳಿತುಕೊಳ್ಳಲಿ. ವಿಧಾನ ಸೌಧದ ಬಾಗಿಲು ಮುರಿದು ಕುಳಿತುಕೊಳ್ಳಬಹುದು ಎಂದು ಬಿಜೆಪಿ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಚೇಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link