ಹಿರಿಯೂರು :
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ವಿಶೇಷ ಜಾಗೃತಿ ಅಭಿಯಾನ ನಡೆಸುತ್ತಿದ್ದು. ಮತದಾರರು ಇದಕ್ಕೆ ಸ್ಪಂದಿಸಬೇಕು. ಕೆಲಸಗಳನ್ನು ಬದಿಗಿಟ್ಟು ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮ್‍ಕುಮಾರ್ ಹೇಳಿದರು.ತಾಲ್ಲೂಕು ಸ್ವೀಪ್ ಸಮಿತಿ ನೇತೃತ್ವದಲ್ಲಿ ಅಗವಿಕಲರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನದ ದಿನಾಂಕದಂದು ತಪ್ಪದೆ ಮತಗಟ್ಟೆಗೆ ಹೋಗಿ ನಿರ್ಭೀತಿಯಿಂದ ಮತ ಚಲಾಯಿಸುತ್ತೇನೆ. ನನ್ನ ಮತವನ್ನು ಹಣ, ಕೊಡುಗೆಗಳಿಗೆ ಮಾರಿಕೊಳ್ಳುವುದಿಲ್ಲ ಮತ ಚಲಾಯಿಸುವುದು ನನ್ನ ಸಂವಿಧಾನದತ್ತ ಹಕ್ಕು ಎಂದು ಭಾವಿಸಿದ್ದೇನೆ ಎಂದು ರಾಮ್‍ಕುಮಾರ್ ಹೇಳಿಕೊಟ್ಟ ಪ್ರತಿಜ್ಞಾ ವಿಧಿಯನ್ನು ಅಂಗವಿಕಲರು ಸ್ವೀಕರಿಸಿದರು.ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಅಶ್ವತ್ಥಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
