ಹೊಳಲ್ಕೆರೆ
ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ಆರಿದ್ರಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಾಡುತ್ತಿರುವ ಬೆಳೆಗಳಲ್ಲಿ ಜೀವಕಳೆ ತಂದಿದೆ. ಅಡಿಕೆ, ತೆಂಗು, ಬಾಳೆ ತೋಟಗಳಲ್ಲಿ ನೀರು ನಿಂತಿದ್ದು, ಜಮೀನುಗಳಲ್ಲಿ ಹಾಕಲಾಗಿದ್ದ ಬದುಗಳು ಹೊಡೆದು ಹೋಗಿವೆ. ಕೆಲವೆಡೆ ಹಳ್ಳಗಳಲ್ಲಿ ನೀರು ಹರಿಯುತಿದ್ದು, ಈ ವರ್ಷದ ಮೊದಲ ಮಳೆ ಇದಾಗಿದೆ.
ತಾಲೂಕಿನ ಗಂಗಸಮುದ್ರ ಕೆರೆ ಭಾಗದಿಂದ ತಾಳಕಟ್ಟ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಪೈಪ್‍ಲೈನ್ ರಸ್ತೆ ಕ್ರಾಸ್ ಮಾಡಲು ಅರ್ದಕ್ಕೆ ನಿಲ್ಲಿಸಲಾಗಿದೆ. ಇದರಲ್ಲಿ ನೀರು ಹುಕ್ಕಿ ಹರಿಯುತಿದ್ದು, ನೀರಿನ ರಭಸಕ್ಕೆ ರಸ್ತೆ ಕಿತ್ತು ಹೋಗಿದ್ದು, ಈ ಭಾಗದ ಜಮೀನುಗಳಿಗೆ ತೆರಳುವ ರೈತರಿಗೆ ಸಮಸ್ಯೆ ಉಂಟಾಗಿದೆ. ತಾಳಕಟ್ಟ ಗ್ರಾಮದ ರೈತರು ನೀರು ಹುಕ್ಕುತ್ತಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸುತಿದ್ದಾರೆ. ಇನ್ನು ರಾಮಗಿರಿಯಿಂದ ಗುಂಡೇರಿ ಮೂಲಕ ಹೊಳಲ್ಕೆರೆಗೆ ಹಾದು ಹೋಗುವ ರಸ್ತೆಯಲ್ಲಿ ಭದ್ರಾ ಮೇಲ್ದಂಡೆ ಪೈಪ್‍ಲೈನ್ ಕಾಮಗಾರಿ ನಡೆದಿದ್ದು, ರಾತ್ರಿ ಸುರಿದ ಮಳೆಗೆ ಕುಸಿದು ಹೋಗಿರುವ ಕಾರಣ ರಸ್ತೆ ಬಂದ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ