ಕೋಟೆನಾಡಿನಲ್ಲಿ ಕಲಾವಿದರ ಸಮಾವೇಶ ನಡೆಯಲಿ

ಚಿತ್ರದುರ್ಗ:

          ವೈರುದ್ಯಗಳ ನಡುವೆ ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿರುವುದರಿಂದಿ ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಕಲಾವಿದರ ಬೃಹತ್ ಸಮಾವೇಶ ನಡೆಯಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಡಾ.ಬಿ.ಎಂ.ಗುರುನಾಥ ಸಲಹೆ ನೀಡಿದರು.

            ಚಂದ್ರೋದಯ ಸಾಂಸ್ಕತಿಕ ಕಲಾ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ತ . ರಾ  . ಸು . ರಂಗಮಂದಿರದಲ್ಲಿ ನಡೆದ ಜಾನಪದ ಜಗಲಿ ಕಾರ್ಯಕ್ರಮದ ಎರಡನೆ ವಿಚಾರಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾವಿದರು ಯಾರು ಶ್ರೀಮಂತರಲ್ಲ.

          ಮಾನಸಿಕ ಸ್ಥಿಮಿತೆಯನ್ನು ಕಾಪಾಡಿಕೊಳ್ಳಲು ಕಲೆ ಬೇಕು.ಕಲಾವಿದರ ಬದುಕು ಸುಧಾರಣೆಯಾಗಬೇಕಾದರೆ ಸರ್ಕಾರ ಕಲಾವಿದರತ್ತ ಗಮನಿಸಬೇಕು. ತಳವರ್ಗದಿಂದ ಹುಟ್ಟಿದ ಜನಪದ ಕಲೆಗಾರರ ಬದುಕು ಕಷ್ಟದಲ್ಲಿದೆ. ಹಂಪಿ ಉತ್ಸವ, ಮೈಸೂರು ದಸರಾ ಮಾಡುವ ಬದಲು ಕಲಾವಿದರಿಗೆ ಮಾಶಾಸನ ಕೊಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

         ಜನಪದ ಕಲೆಗಳು, ಕಲಾವಿದರು ಹಾಗೂ ಪ್ರಸ್ತುತತೆ ಕುರಿತು ವಿಚಾರವಾದಿ ನಿರಂಜನ ದೇವರಮನೆ ಮಾತನಾಡಿ ಸಂಸ್ಕತಿಯ ಪ್ರತೀಕವಾಗಿರುವ ಜನಪದ ಅಸ್ಮಿತೆಯನ್ನು ಉಳಿಸಿ ಬೆಳೆಸಬೇಕಾಗಿದೆ. ನಿಜವಾದ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

          ಶಿಕ್ಷಕ ಹಾಗೂ ಜಾನಪದ ವಿಚಾರವಾದಿ ಸಿ.ರಂಗನಾಯಕ್ ಜಾನಪದ ಸಾಹಿತ್ಯ ಮತ್ತು ಬುಡಕಟ್ಟು ಸಂಸ್ಕತಿ ಕುರಿತು ಉಪನ್ಯಾಸ ನೀಡಿ ಬುಡಕಟ್ಟು ಸಂಸ್ಕತಿ ಉಳಿಸಿ ಕಾಡಿನ ಕುಡಿಯನ್ನು ಬೆಳೆಸುವ ಮೂಲಕ ಅನಾದಿ ಕಾಲದಿಂದ ಬಂದಿರುವ ಜಾನಪದವನ್ನು ಸಂರಕ್ಷಿಸಬೇಕು ಎಂದರು.

         ಸಾಹಿತಿ ಹಾಗೂ ರಂಗವಿಮರ್ಶಕ ಡಾ.ವಿ.ಬಸವರಾಜ್ ಜನಪದ ಮತ್ತು ರಂಗಭೂಮಿ ಕುರಿತು ಮಾತನಾಡುತ್ತ ಜನಪದ ಕಲೆ ನಶಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕಾಲ್ಕೆರೆ ಚಂದ್ರಪ್ಪ ಜಿಲ್ಲೆಯ ಕಲಾವಿದರನ್ನು ಕರೆಸಿ ಜಾನಪದ ಜಗಲಿ ಕಾರ್ಯಕ್ರಮ ನಡೆಸುತ್ತಿರುವುದು ಸುಲಭದ ಕೆಲಸವಲ್ಲ. ಇದರಿಂದ ಜಾನಪದಕ್ಕೆ ಮರುಜೀವ ಬಂದಂತಾಗಿದೆ. ಭಾಷಣಕ್ಕಿಂತ ಕಲೆಗಳನ್ನು ಪ್ರದರ್ಶಿಸಿ ಕಲಾವಿದರನ್ನು ಗೌರವಿಸುವುದು ಮುಖ್ಯ ಎಂದು ಹೇಳಿದರು.

         ರಂಗಭೂಮಿ ಹುಟ್ಟಿಕೊಂಡಿದ್ದೆ ಜಾನಪದ ಕಲೆಯಿಂದ. ರಂಗಭೂಮಿಯನ್ನು ಜನಪದ ಕಲೆಯನ್ನು ಬೆರೆಸಿಕೊಂಡರೆ ರಂಗಭೂಮಿಗೆ ಹೆಚ್ಚು ಶಕ್ತಿ ಬರುತ್ತದೆ. ಬಯಲಾಟಕ್ಕೆ ಜನಪದ ಕಲೆಯ ಇತಿಹಾಸವಿದೆ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link