ಚಿತ್ರದುರ್ಗ:
ಇಪ್ಪತ್ತೈದು ಬಾರಿ ರಕ್ತದಾನ ಮಾಡಿರುವ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಖಜಾಂಚಿ ಚಿತ್ರದುರ್ಗ ಸಮೀಪವಿರುವ ಮಾಳಪ್ಪನಹಟ್ಟಿಯ ಅರುಣ್‍ಕುಮಾರ್‍ಗೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ಹನ್ನೆರಡು ವರ್ಷಗಳಿಂದಲೂ ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ರಕ್ತದಾನ ಮಾಡಿರುವುದಲ್ಲದೆ ಬೇರೆಯವರಿಗೂ ರಕ್ತದಾನ ಮಾಡುವಂತೆ ಪ್ರೇರೇಪಿಸಿರುವ ಅರುಣ್‍ಕುಮಾರ್ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸಿ ಅಮೂಲ್ಯವಾದ ಜೀವ ಉಳಿಸುವಲ್ಲಿ ಶ್ರಮಿಸಿರುವ ಇವರ ಕಾಳಜಿಯನ್ನು ಗುರುತಿಸಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡಿ.ಸಿ.ಪಿ. ರವಿ ಡಿ.ಚನ್ನಣ್ಣನವರ್ ಸನ್ಮಾನಿಸಿದರು.
ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಬಿ.ಎಲ್.ಸುಜಾತ ರಾಥೋಡ್, ಕಮಾಂಡೆಂಟ್ ಮೇಜರ್ ಜನರಲ್ ಎನ್.ಜೆ.ಜಾರ್ಜ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚೇರ್ಮನ್ ಎಸ್.ನಾಗಣ್ಣ, ಉಪಾಧ್ಯಕ್ಷ ಡಾ.ಎಂ.ಕೆ.ಶ್ರೀಧರ್ ಸನ್ಮಾನ ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
