ಅಸಮಾನ್ಯರಿಂದ ಪರಂಪರೆ ಸೃಷ್ಟಿ

ತುಮಕೂರು:

       ವೀರಾಪುರ ಎಂಬ ಕುಗ್ರಾಮದಲ್ಲಿ ಜನಿಸಿ ಶಿವಸ್ವರೂಪಿಯಾಗಿ ಬೆಳೆದು ಗಾಂಧೀಜಿಯ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ನನಸಾಗಿಸಲು ಗ್ರಾಮಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದರ ಮೂಲಕ ‘’ಬೌಧಿಕ ಕ್ರಾಂತಿ’’ ಯನ್ನು ಮಾಡಿದವರು ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಎಂದು ಸಂಶೋಧಕರು ಶರಣತತ್ವ ಚಿಂತಕರು ಆದ ಡಾ.ಡಿ.ಎನ್.ಯೋಗೀಶ್ವರಪ್ಪನವರು ತಿಳಿಸಿದರು. ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ, ಸ್ಫೂರ್ತಿ, ಎನ್.ಎಸ್.ಎಸ್, ಕ್ರೀಡೆ ಮತ್ತು ಯುವ ರೆಡ್‍ಕ್ರಾಸ್ ಚಟುವಟಿಕೆಗಳ ಸಮಾರೂಪ ಸಮಾರಂಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ಪರಮಪೂಜ್ಯರನ್ನು ಕುರಿತು ಮಾತನಾಡುತ್ತಾ ಹೇಳಿದರು.

     ಪುಸ್ತಕಗಳನ್ನು ಪುಸ್ತಕದಲ್ಲಿ ತುಂಬಿದರೆ ಸಾಲದು, ವಿದ್ಯಾರ್ಥಿಗಳಲ್ಲಿರುವ ಅದ್ಭುತವಾದ ಶಕ್ತಿಯನ್ನು ಶಿಸ್ತುಬದ್ದವಾದ ವರ್ತನೆಯನ್ನು ರೂಢಿಸುವುದರ ಮೂಲಕ ಅವರ ವ್ಯಕ್ತಿತ್ವ ನಿರ್ಮಾಣವಾಗಬೇಕೆಂದು ಖ್ಯಾತ ಅಂತರರಾಷ್ಟ್ರಿಯ ಕ್ರೀಡಾಪಟು ಹಾಗೂ ವ್ಯಕ್ತಿತ್ವ ವಿಕಾಸನ ತರಬೇತಿದಾರರಾದ ಅರ್ಜುನ್ ದೇವಯ್ಯರವರು ತಿಳಿಸಿದರು.

     ಜೀವನದ ಯಾವುದೇ ಹಂತದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಭರವಸೆಯ ಹಾದಿಯಲ್ಲಿ ಸಾಗುತ್ತಾ ಇತರರ ಜೀವನಕ್ಕೆ ದಾರಿದೀಪವಾಗಬೇಕು ಎಂದು ತಮ್ಮ ಬದುಕಿನ ನಿದರ್ಶನದ ಮೂಲಕ ಬೆಳಗಾವಿಯ ಆಶ್ರಯ ಫೌಂಡೇಶನ್‍ನ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ರಾಮೇಗೌಡರವರು ತಿಳಿಸಿದರು.

      ವಿದ್ಯಾರ್ಥಿನಿಯರಲ್ಲಿರುವ ಅತ್ಯುತ್ತಮವಾದ ಪ್ರತಿಭೆಗಳು ಹೊರ ಹೊಮ್ಮುವುದಕ್ಕೆ ಕಾಲೇಜಿನ ಸ್ಫೂರ್ತಿ ವೇದಿಕೆ ಸದಾ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತಿದೆ. ನಮ್ಮೆಲ್ಲರ ಕಾರ್ಯ ಚಟುವಟಿಕೆಗೆ ಪರಮಪೂಜ್ಯರ ಹರಕೆ ಆಶೀರ್ವಾದ ಸದಾ ಇರುತ್ತದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ಕೆ.ಸಿ.ಜಯಸ್ವಾಮಿಯವರು ತಿಳಿಸಿದರು. ನಂತರ ಸಾಂಸ್ಕೃತಿಕ ಮತ್ತು ಕ್ರೀಡೆ ಇತರ ಎಲ್ಲಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು.

       ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಶಕುಂತಲಾ.ಸಿ.ವಿ ಸ್ವಾಗತಿಸಿದರು, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಪಾವನ.ಬಿ.ಎಸ್ ಕಾಲೇಜು ವರದಿ ವಾಚಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ರಾಜೇಶ್.ಎಸ್ ವಂದಿಸಿದರು, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಕು.ನಯನ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link