ಬೆಂಗಳೂರು
ಕುಡಿದ ಅಮಲಿನಲ್ಲಿ ಜಗಳ ಮಾಡಿ ಆಶಾ ಕಾರ್ಯಕರ್ತೆಯಾಗಿದ್ದ ಪತ್ನಿಯನ್ನು ಪತಿಯೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸಪ್ಪನಕಟ್ಟೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.ಬಸಪ್ಪನಕಟ್ಟೆಯ ಸರಸ್ವತಿ ( 36)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಕೊಲೆಗೈದ ಪತಿ ಮಲ್ಲಿಕಾರ್ಜುನ (40)ನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದ ಸರಸ್ವತಿಗೆ 13 ವರ್ಷದ ಹೆಣ್ಣು ಹಾಗೂ 9 ವರ್ಷದ ಗಂಡು ಸೇರಿ ಇಬ್ಬರು ಮಕ್ಕಳಿವೆ. ಕಳೆದೊಂದು ವರ್ಷದಿಂದ ಕುಡಿತದ ಚಟ ಅಂಟಿಸಿಕೊಂಡಿದ್ದ ಮಲ್ಲಿಕಾರ್ಜುನ ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ
ಗಂಡನ ವರ್ತನೆಯಿಂದ ಬೇಸತ್ತ ಸರಸ್ವತಿ ಕುಟುಂಬ ನಿಭಾಯಿಸಲು ಆಶಾ ಕಾರ್ಯಕರ್ತೆಯಾಗಿ ಕೆಲಸಕ್ಕೆ ಹೋಗುತ್ತಿದ್ದರು ಕುಡಿತ ಬಿಡುವಂತೆ ಪತಿಗೆ ಹಲವು ಬಾರಿ ಬುದ್ದಿ ಹೇಳಿದರೂ ಆತನ ವರ್ತನೆ ಸರಿಯಾಗಿರಲಿಲ್ಲ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಾ ಗಲಾಟೆ ಮಾಡುತ್ತಿದ್ದ.
ಇದರಿಂದ ಬೇಸತ್ತ ಆಕೆ ಬಸಪ್ಪನಕಟ್ಟೆಯ ತವರುಮನೆ ಸೇರಿಕೊಂಡಿದ್ದು 6 ತಿಂಗಳ ಹಿಂದೆ ಕುಟುಂಬದ ಹಿರಿಯರೆಲ್ಲಾ ಸೇರಿ ಮಲ್ಲಿಕಾರ್ಜುನನಿಗೆ ಬುದ್ದಿ ಹೇಳಿ ರಾಜಿ ಪಂಚಾಯ್ತಿ ನಡೆಸಿದ್ದರು ಕೆಲದಿನಗಳು ಸುಮ್ಮನಿದ್ದ ಆತ ಮತ್ತ ಹಳೆ ಚಾಳಿ ಮುಂದು ವರೆಸಿದ್ದ.ನಿನ್ನೆ ರಾತ್ರಿ ಕೂಡ ಕುಡಿದು ಬಂದು ಹಣಕ್ಕಾಗಿ ಪತ್ನಿಯನ್ನು ಪೀಡಿಸಿದ್ದರಿಂದ ದಂಪತಿಯ ನಡುವೆ ಜಗಳ ಉಂಟಾಗಿ ಮಧ್ಯರಾತ್ರಿಯವರೆಗೆ ಮುಂದುವರೆದಿದೆ.ಎರಡನೇ ಮಹಡಿಯಲ್ಲಿ ಕೊಲೆ ನಡೆದಿದ್ದು ಅಜ್ಜಿ ತಾತನ ಜೊತೆ ಕೆಳಗಿನ ಮಹಡಿಯಲ್ಲಿದ್ದ ಮಕ್ಕಳು ಬೆಳಿಗ್ಗೆ 7ರವೇಳೆ ಎರಡನೇ ಮಹಡಿಗೆ ಹೋಗಿದಾಗ ಬಾಗಿಲ ತೆಗೆದಿದ್ದು ತಾಯಿ ಕೊಲೆಯಾಗಿದ್ದರು ಕೂಡಲೇ ಅಜ್ಜಿ ತಾತನಿಗೆ ವಿಷಯ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಪತಿ ಮಲ್ಲಿಕಾರ್ಜುನ್ನನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
