ದಾವಣಗೆರೆ:
2014ರ ಚುನಾವಣೆ ಪೂರ್ವದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ ಆಶ್ವಾಸನೆಯನ್ನು ಈಡೇರಿಸದ ವಚನ ಭ್ರಷ್ಟ ಬಿಜೆಪಿಯನ್ನು ಈ ಬಾರಿ ತಿರಸ್ಕರಿಸಬೇಕೆಂದು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯವಕ್ತಾರ ಜಸ್ಟಿನ್ ಜಯಕುಮಾರ್ ಮನವಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ವಿದೇಶದಿಂದ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಜಮೆ ಮಾಡುವುದು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ದರ ಕಡಿತ ಮಾಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಆದರೆ, ಅವರು ನೀಡಿರುವ ಭರವಸೆಯಲ್ಲಿ ಒಂದೇವೊಂದು ಭರವಸೆ ಸಹ ಈಡೇರಿಲ್ಲ ಎಂದು ಆರೋಪಿಸಿದರು.
15 ವರ್ಷಗಳ ಕಾಲ ಕ್ಷೇತ್ರದ ಸಂಸದರಾಗಿರುವ ಜಿ.ಎಂ.ಸಿದೇಶ್ವರ್ ಅವರ ಸಾಧನೆ ಶೂನ್ಯವಾಗಿದೆ. ಕೇಂದ್ರದಿಂದ 10 ಸಾವಿರ ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಮಾಡಿರುವುದಾಗಿ ಹೇಳಿದ್ದ ಸಂಸದರೇ, ಸಭೆಯೊಂದರಲ್ಲಿ ಅಧಿಕಾರಿಗಳಿಗೆ ನೀವು ಶೇ.100 ರಲ್ಲಿ 25 ರಷ್ಟು ಹಣ ತಿಂದರೂ ಪರವಾಗಿಲ್ಲ. ಇನ್ನುಳಿದ ಹಣದಲ್ಲಾದರೂ ಕೆಲಸ ಮಾಡಿ ಎಂಬುದಾಗಿ ಹೇಳಿದ್ದರು. ಇವರು ಹೇಳುವಂತೆ 10 ಸಾವಿರ ಕೋಟಿಯಲ್ಲಿ ಶೇ. 25 ರಷ್ಟು ಅಂದರೆ ಸುಮಾರು 2.500 ಕೋಟಿ ರೂ ಲೂಟಿಯಾಗುತ್ತದೆ. ಹಾಗಿದ್ದರೆ ಸಂಸದರ ಪಾಲು ಎಷ್ಟು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಜನವಿರೋಧಿ, ವಚನ ಭ್ರಷ್ಟತೆ, ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡಿರುವ ಬಿಜೆಪಿಯ ನಿಜ ಬಣ್ಣ ಜನತೆಗೆ ಗೊತ್ತಾಗಿದೆ. ದೇಶದ ಪ್ರಜ್ಞಾವಂತ ಮತದಾರರು ಬಿಜೆಪಿಯ ಸುಳ್ಳು ಮಾತಿಗೆ ಬಲಿಯಾಗದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ನವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ದಾದಾಪೀರ್, ಅಕ್ಬರ್, ಸುನೀಲ್ ಕುಮಾರ್, ಪೀಟರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








