ಕೊರಟಗೆರೆ
ಸುಳ್ಳು ವದಂತಿ ಹಬ್ಬಿಸುವ ಜ್ಯೋತಿಷಿಗಳಿಂದ ಇಂದಿನ ರಾಜಕೀಯ ಪರಿಸ್ಥಿತಿ ವಿನಾಶಕ್ಕೆ ತಲುಪಿದೆ. ಕುಟುಂಬದಲ್ಲಿ ಬಿರುಕು ಸೃಷ್ಟಿಯಾಗಿ ಅಶಾಂತಿಯ ವಾತವರಣದಿಂದ ನೆಮ್ಮದಿಯ ಸಂಸಾರಗಳು ಒಡೆದು ಹೋಗುತ್ತೀವೆ ಎಂದು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾನಾಯಕ್ ವಿಷಾಧ ವ್ಯಕ್ತಪಡಿಸಿದರು.
ತಾಲೂಕಿನ ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಹೊಲತಾಳು ಗ್ರಾಮದ ಅಬೇತೋ ಸಂಸ್ಥೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಮಹಿಳೆಯರ ಓದುವ ಹವ್ಯಾಸ ಕಾರ್ಯಕ್ರಮವನ್ನು ಸಸಿ ನೇಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ನಾವು ನಮ್ಮ ಕುಟುಂಬ ಬದಲಾವಣೆ ಆಗಲು ಸಾಧ್ಯ. ವೈಜ್ಞಾನಿಕವಾಗಿ ನಮ್ಮ ದೇಶ ಸಾಕಷ್ಟು ಮುಂದುವರೆದಿದೆ. ತಂತ್ರಜ್ಞಾನ ನಮ್ಮನ್ನು ಸಾಕಷ್ಟು ಬದಲಾವಣೆ ಮಾಡಿದೆ. ಮನುಷ್ಯನ ಶಾಂತಿ ಮತ್ತು ಏಕಾಗ್ರತೆಗೆ ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು. ಪ್ರಕೃತಿ ನಿನಾಶದಿಂದ ಬಿಸಿಲಿನ ತಾಪ ಹೆಚ್ಚಾಗಿ ಕಳೆದ ಐದಾರು ವರ್ಷದಿಂದ ಮಳೆಯು ಕುಂಠಿತವಾಗಿ ಅಂತರ್ಜಲ ಮಟ್ಟ ಕುಸಿತವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ ಮುದ್ರಣ ಮತ್ತು ತಂತ್ರಜ್ಞಾನದಲ್ಲಿ ದೇಶ ಸಾಕಷ್ಟು ಮುಂದುವರೆದಿದೆ. ಪ್ರತಿ ಮನೆಯಲ್ಲಿ ಕನ್ನಡದ ನೂರು ಪುಸ್ತಕದ ಗ್ರಂಥಾಲಯದ ವ್ಯವಸ್ಥೆ ಇರುವ ಸೌಲಭ್ಯ ಸೀಗಬೇಕು. ಮನುಷ್ಯನ ವ್ಯಕ್ತಿ ವಿಕಸನಕ್ಕಾಗಿ ಪುಸ್ತಕ ಅತಿಮುಖ್ಯವಾಗಿದೆ. ಪ್ರಕಾಶಕ, ಲೇಖಕ ಮತ್ತು ಓದುಗರ ನಡುವಿನ ಭಾಗವಾಗಿ ಪ್ರಾಧಿಕಾರ ಕೆಲಸ ಮಾಡುತ್ತೀದೆ. ದೇಶದ ಸಮಗ್ರ ಅಭಿವೃದ್ದಿಗೆ ಉತ್ತಮ ಗುಣಮಟ್ಟದ ಪುಸ್ತಕಗಳು ಸಹ ಸಹಕಾರಿ ಆಗಿವೆ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ಟಿವಿ, ಮೊಬೈಲ್, ಕಂಪ್ಯೂಟರ್ ಮತ್ತು ದಾರವಾಹಿಯಿಂದ ಮಕ್ಕಳ ಓದುವ ಹವ್ಯಾಸ ಕಡಿಮೆ ಆಗಿದೆ. ನಮ್ಮ ಸುತ್ತಮುತ್ತಲಿನ ಸುಂದರ ಪರಿಸರ ಮನುಷ್ಯನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸಿನಿಮಾ ನೋಡಿದರೇ ಗ್ರಹಿಕೆಗಳು ಹೆಚ್ಚಾಗುತ್ತದೆ. ಆದರೇ ಪುಸ್ತಕ ಓದಿದರೇ ನಮ್ಮ ಕಲ್ಪನೇ ವಿಸ್ತಾರ ಆಗಲಿದೆ. ಪುಸ್ತಕವೇ ನಮ್ಮ ನಿಜವಾದ ಸ್ನೇಹಿತ ಎಂದು ತಿಳಿಸಿದರು.
ಮುಖ್ಯ ಅತಿಥಿ ಹೆಸರಾಂತ ಲೇಖಕ ನಟರಾಜ ಬೂದಾಳ್ ಮಾತನಾಡಿ ಮಹಿಳೆಯೇ ನಮ್ಮ ಸೃಷ್ಟಿಯ ಪಿತಾಮಹ. ಬಹಳಷ್ಟು ಸಾಧನೆ ಮಾಡಿರುವ ಸಾಕಷ್ಟು ಮಹಿಳೆಯರ ಧ್ವನಿಗಳು ಇಂದಿಗೂ ಮರೆಯಾಗಿವೆ. ಪುರುಷನ ಸ್ವಾರ್ಥಕ್ಕಾಗಿ ಮಹಿಳೆಯರ ಸಾಧನೆ ಕಣ್ಮರೆ ಆಗುತ್ತಿದೆ. ಆಡು, ತತ್ವ ಮತ್ತು ಚೈತನ್ಯ ಮಹಿಳೆಯ ಅಂತರಂಗದಲ್ಲಿ ಅಡಗಿದೆ. ಪುಸ್ತಕ ತೆರೆದಿಟ್ಟಿರುವ ಜ್ಞಾನ ಅದನ್ನು ಕಲಿಸಿದವರು ಹೆಣ್ಣುಮಗಳು ಎಂಬುದನ್ನು ನಾವು ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ತುಮಕೂರು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ, ಹೊಲತಾಳು ಸಿದ್ದಗಂಗಯ್ಯ, ಅನ್ನಪೂರ್ಣ, ವೆಂಕಟನಂಜಪ್ಪ, ಪ್ರೇಮಾ, ಮಲ್ಲಣ್ಣ, ಸುಗುಣಾದೇವಿ, ಸುನಂದಮ್ಮ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
