ಅಸ್ವಭಾವಿಕ ಸಾವು ಪ್ರಕರಣದ ತನಿಖೆಗೆ ಆಗ್ರಹ

ದಾವಣಗೆರೆ:

          ಯುಜಿಡಿ ಕಾಮಗಾರಿಯ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕರೊಬ್ಬರೂ ಅಸ್ವಭಾವಿಕ ಸಾವಿಗೆ ತುತ್ತಾಗಿರುವ ಪ್ರಕರಣವನ್ನು ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸಬೇಕೆಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಮಿತಿ ರಾಜ್ಯಾಧ್ಯಕ್ಷ ಪ.ಯ. ಗಣೇಶ್ ಆಗ್ರಹಿಸಿದರು.

         ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ನಗರಸಭೆಯಿಂದ ಯುಜಿಡಿ ಪೈಪ್‍ಲೈನ್ ಕಾಮಗಾಯ ಸಂದರ್ಭದಲ್ಲಿ ಕಾರ್ಮಿಕ ಎಸ್.ಪಿ. ಗಜೇಂದ್ರ ಎಂಬುವರು ಅಸ್ವಭಾವಿಕ ಸಾವಿಗೀಡಾಗಿದ್ದು, ಈ ಪ್ರಕರಣದ ಬಗ್ಗೆ ಪೊಲೀಸರು ನ್ಯಾಯುತ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಕಂಡು ಹಿಡಿಯಬೇಕೆಂದು ಒತ್ತಾಯಿಸಿದರು.

           ಸಾವಿಗೀಡಾಗಿರುವ ವ್ಯಕ್ತಿಯು ಎಸ್.ಪಿ.ಗಜೇಂದ್ರ ನನ್ನ ಅಣ್ಣನಾಗಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಹರಿಹರ ಪೊಲೀಸರು ಇದನ್ನು ಮುಚ್ಚಿ ಹಾಕಿದ್ದಾರೆ. ಆದ್ದರಿಂದ ಹಿರಿಯ ಅಧಿಕಾರಿಯೊಬ್ಬರಿಂದ ಪುನಃ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

          ಎಸ್.ಪಿ. ಗಜೇಂದ್ರ ಸಾವಿನ ವಿಷಯದಲ್ಲಿ ಭ್ರಷ್ಟಾಚಾರ ಎಸಗಿದ ಹರಿಹರ ಸಬ್ ಇನ್ಸ್‍ಪೆಕ್ಟರ್ ಶ್ರೀಧರ, ಪೊಲೀಸ್ ಪೇದೆ ಫಕೃದ್ದೀನ್, ಮಹಿಳೆ ಪೇದೆ ಜೊತೆಗೆ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಲಂಚ ಪಡೆದ ನರ್ಸ್, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥೆ ಅವರನ್ನು ಅಮಾನತಿನಲ್ಲಿಟ್ಟು, ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

          ಸುದ್ದಿಗೋಷ್ಠಿಯಲ್ಲಿ ಸಮಿತಿ ಖಜಾಂಚಿ ಪಿ. ಸುಬ್ರಮಣ್ಯಂ, ಉಪಾಧ್ಯಕ್ಷ ಪಿ. ಅಂಜಿನಿ, ಜಂಟಿ ಕಾರ್ಯದರ್ಶಿ ದಲ್ಲಾಳಿ ಹುಸೇನ್ ಮೌಲ, ಸಂಘಟನಾ ಕಾರ್ಯದರ್ಶಿ ಅಶ್ವಥ್ ನಾರಾಯಣ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link