ಚಿತ್ರದುರ್ಗ
ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ರಸ್ತೆ ಅಗಲಿಕರಣಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರಸ್ತೆ ಅಗಲಿಕರಣಕ್ಕೆ ಸರ್ಕಾರದಿಂದ 19 ಕೋಟಿ ರೂ ಬಿಡುಗಡೆ ಆಗಿದೆ. ಚಳ್ಳಕೆರೆ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಸದ್ಯ ರಸ್ತೆ ಅಗಲಿಕರಣ ಅಗಲಿದೆ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಈ ಹಿಂದೆಯೇ ಅನುದಾನ ಬಿಡುಗಡೆಯಾಗಿದ್ದು ಅನುಷ್ಠಾನವಾಗಿರಲಿಲ್ಲ. ಈಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಶಿವರಾತ್ರಿಯಿಂದಲೇ ರಸ್ತೆಕಾಮಗಾರಿ ಆರಂಭವಾಗಲಿದೆಎಂದರು.
ರಸ್ತೆ ಮಧ್ಯದಿಂದ 13.5 ಮೀಟರ್ ಅಗಲಿಕರಣ ಕಾಮಗಾರಿ ನಡೆಯಲಿದೆ.ಅತೀ ಶೀಘ್ರದಲ್ಲೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ರಸ್ತೆ ವಿಭಜಕ ಸೇರಿ ಪಾದಚಾರಿಗಳಿಗೆ ಓಡಾಡಲು ಸಹ ಎರಡು ಬದಿ ಎರಡು ಮೀಟರ್ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಉತ್ತಮ ಗುಣಮಟ್ಟದಲ್ಲಿಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆಎಂದರು.
ಲೋಕಸಭಾ ಚುನಾವಣೆ ಘೊಷಣೆ ಆದರೆ ಮತ್ತೆ ಮೂರು ತಿಂಗಳು ಮುಂದೆ ಹೊಗಲಿರುವುದರಿಂದ ಇಂದೇ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿ ಜನತೆ ಇದಕ್ಕೆ ಸಹಕಾರ ನೀಡಿ, ರಸ್ತೆ ಅಗಲಿಕರಣಕ್ಕೆ ಮುಂದಾಗ ನಗರ ಸೌಂದರೀಕರಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಚಳ್ಳಕೆರೆ ಗೇಟ್ ಸಮೀಪವಿರುವ ಪೆಟ್ರೋಲ್ ಬಂಕ್‍ರಸ್ತೆಗೆ ಹೊಂದಿಕೊಂಡುಇರುವುದರಿಂದಇಲ್ಲಿಗೆ ಅನೇಕ ಅದಿರುತುಂಬಿದ ಲಾರಿಗಳು ಇಂಧನ ಭರಿಸಲುಬರುವುದರಿಂದ ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗಲಿದೆ.ಇದರಿಂದಶಾಲಾ, ಕಾಲೇಜಿನ ವಾಹನಗಳು, ವಿದ್ಯಾರ್ಥಿಗಳಿಗೆ ತೊಂದರೆಗಳಾಗಲಿವೆ. ಆದ್ದರಿಂದ ನಗರದೊಳಗೆ ಯಾವುದೇ ಅದಿರು ಲಾರಿಗಳು ಸೇರಿದಂತೆ ಭಾರಿವಾಹನಗಳು ಆಗಮಿಸದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚಿಸಿ ಇದನ್ನು ಮೀರಿ ಲಾರಿಗಳು ನಗರದ ಒಳಗಡೆ ಬಂದರೆ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಚಿತ್ರದುರ್ಗ ನಗರದ ಮುಖ್ಯರಸ್ತೆ ಅಗಲೀಕರಣ ಮಾಡಬೇಕೆಂದು ಬಹುದಿನಗಳ ಬೇಡಿಕೆಯಾಗಿದ್ದು ಇದನ್ನುಈಡೇರಿಸಲಾಗಿದೆ. ಚಳ್ಳಕೆರೆ ಗೇಟ್ ನಿಂದ ಪ್ರವಾಸಿ ಮಂದಿರದವರಗೆ ಹಾಗೂ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದಿಂದ ಮಾಳಪ್ಪನಹಟ್ಟಿ ರಸ್ತೆಯವರೆಗೆ 18 ಕೋಟಿ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ.ಇದನ್ನು ಸಹ ಮುಂದಿನ ಕೆಲವೇ ತಿಂಗಳಲ್ಲಿ ರಸ್ತೆಅಗಲೀಕರಣ ಮಾಡಿ ಸಿ.ಸಿ.ರಸ್ತೆ ನಿರ್ಮಿಸಲಾಗುತ್ತದೆಎಂದರು.
ಅಗಲೀಕರಣದ ವೇಳೆ ಕೆಲವು ಬಿಲ್ಡಿಂಗ್‍ಗಳನ್ನು ತೆರವು ಮಾಡಬೇಕಾಗಿದ್ದು ಈಗಾಗಲೇ ವರ್ತಕರ ಜೊತೆ ಚರ್ಚಿಸಲಾಗಿದೆ. ಅನೇಕ ಜನರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಹಾಗೂ ಸಹಕಾರ ನೀಡಲು ಒಪ್ಪಿದ್ದಾರೆ. ನಿಯಮದನ್ವಯ ಹೆದ್ದಾರಿರಸ್ತೆ ಇದಾಗಿದ್ದು ರಸ್ತೆಯ ಜಾಗವನ್ನು ತೆರವು ಮಾಡಬೇಕಾಗುತ್ತದೆ. ರಸ್ತೆಯ ಬದಿ ಪಾದಚಾರಿ ಮಾರ್ಗ ಸೇರಿದಂತೆ ವಿಭಜಕಗಳನ್ನು ನಿರ್ಮಿಸಿ ಆಕರ್ಷಕವಾದ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ ಎಂದರು.
ರಸ್ತೆ ಅಗಲಿಕರಣಕ್ಕೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ನ್ಯಾಯಾಲಯಕ್ಕೆ ಹೊದರು ಸಹ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ತಡೆಯಾಜ್ಞೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನತೆಯು ಸ್ವಯಂ ಪ್ರೇರಿತರಾಗಿ ರಸ್ತೆ ಅಗಲಿಕರಣಕ್ಕೆ ನೇರವಾಗುವಂತೆ ಮನವಿ ಮಾಡಿದರು.
ಸಂಸದರಾದ ಬಿ.ಎನ್.ಚಂದ್ರಪ್ಪನವರು ಮಾತನಾಡಿ ಈ ಹಿಂದಿನ ಸರ್ಕಾರ ನಗರದ ರಸ್ತೆ ಅಭಿವೃದ್ದಿಗೆ ಅನುದಾನ ನೀಡಿದ್ದರಿಂದ ಅಗಲೀಕರಣಕ್ಕೆ ಸಹಕಾರಿಯಾಗಿದೆ. ಇದಕ್ಕಾಗಿ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯ್ಯಮ್ಮ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾರಕ್ಷಣಾಧಿಕಾರಿ ಡಾ; ಅರುಣ್.ಕೆ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸತೀಶ್‍ಬಾಬು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಫಾತ್ಯರಾಜನ್ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.