ವಿಶ್ವದ ಇತಿಹಾಸದಲ್ಲಿ ಕಪ್ಪುಚುಕ್ಕಿ ಇಲ್ಲದ ಹಿರಿಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ

ಚಳ್ಳಕೆರೆ

        ವಿಶ್ವದ ಇತಿಹಾಸದಲ್ಲಿ ಸಜ್ಜನ, ಮೌಲ್ಯಯುತ ರಾಜಕಾರಣಿ ಎಂದು ಖ್ಯಾತರಾದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿರವರು. ಸುಧೀರ್ಘಕಾಲ ರಾಜಕೀಯ ಜೀವನದಲ್ಲಿ ವೈರಿಗಳನ್ನೇ ಕಾಣದಂತಹ ಅಪರೂಪದ ರಾಜಕಾರಣಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮೂರು ಬಾರಿ ರಾಷ್ಟ್ರದ ಪ್ರಧಾನಿಯಾಗಿ ಆಡಳಿತ ನಿರ್ವಹಿಸಿದವರು. ಇಂತಹ ಶ್ರೇಷ್ಠ ರಾಜಕಾರಣಿಯನ್ನು ಜೀವನದಲ್ಲಿ ಎಂದಿಗೂ ಕಾಣಲು ಸಾಧ್ಯವಿಲ್ಲವೆಂದು ಬಿಜೆಪಿ ಹಿರಿಯ ಸಹಕಾರಿ ದುರೀಣ ಸಿ.ಬಿ.ಆದಿಬಾಸ್ಕರ ಶೆಟ್ಟಿ ತಿಳಿಸಿದರು.

          ಅವರು, ಮಂಗಳವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿರವರ 94ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರದವೇ ಅಚ್ಚರಿ ಪಡುವಂತಹ ಚತ್ಪುರ್ಪದ ರಸ್ತೆ ಗ್ರಾಮೀಣ ಭಾಗದ ಅಟಲ್ ಬಿಹಾರಿ ಸಡಕ್ ಯೋಜನೆಯ ಗ್ರಾಮೀಣ ರಸ್ತೆಗಳು, ರಾಷ್ಟ್ರದ ರಕ್ಷಣೆಗಾಗಿ ಅಣ್ವಸ್ತ್ರ ಪ್ರಯೋಗ, ವಾಜಪೇಯಿರವರ ಆಡಳಿತದ ಮೈಲಿಗಲ್ಲು.

        ಅಧಿಕಾರಕ್ಕಾಗಿ ಎಂದಿಗೂ ತತ್ವ ಸಿದ್ದಾಂತಗಳನ್ನು ಬಿಟ್ಟುಕೊಡದೆ ಕೇವಲ ಒಂದೇ ಒಂದು ಮತದಿಂದ ಅಧಿಕಾರವನ್ನು ಕಳೆದುಕೊಟ್ಟರು. ರಾಷ್ಟ್ರದ ರಾಜಕಾರಣದಲ್ಲಿ ಭೀಷ್ಮರಾಗಿ ಹೆಸರು ಪಡೆದವರು. ನದಿ ಜೋಡಣೆಯ ಅವರ ಮಹದಾಸೆ ಈಡೇರಲೇ ಇಲ್ಲ. ಸುಮಾರು 5 ದಶಕಗಳ ಕಾಲ ರಾಷ್ಟ್ರದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಮಹಾನ್‍ನಾಯಕ ಎಂದರು.

           ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಶಿವಕುಮಾರ್(ವೆಂಕಟೇಶ್), ತಾಲ್ಲೂಕು ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ಹೊಟ್ಟೆಪ್ಪನಹಳ್ಳಿ ಮಂಜುನಾಥ, ದಿನೇಶ್‍ರೆಡ್ಡಿ, ಬೋರನಾಯಕ, ಜಗದಾಂಭ, ಇಂದುಮತಿ, ಟಿ.ಮಂಜುನಾಥ, ಈಶ್ವರನಾಯಕ, ಸಂತೋಷ ಕುಮಾರ್, ಚಿದಾನಂದ, ಕಾಟಯ್ಯ ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link