ಬರಗೂರು
ಮಕ್ಕಳಲ್ಲಗಲಿ ಹಾಗೂ ಹಿರಿಯರಲ್ಲಗಲಿ ಅತಿಸಾರ ಬೇಧಿ ಉಂಟಾದಾಗ ಪ್ರಥಮ ಚಿಕಿತ್ಸೆಯಾದ ಓಆರ್‍ಎಸ್‍ನ್ನು ಕುಡಿಸುವ ಮೂಲಕ ತಹಬಂಧಿಗೆ ತಂದು ನಂತರ ವೈಧ್ಯರ ಬಳಿ ಪರೀಕ್ಷೆಸುವುದು ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಬರಗೂರು ಸ.ಪ್ರಾ.ಆ.ಕೇ.ವೈದ್ಯಾಧಿಕಾರಿ ಡಾ.ನಂದೀಶ್ ಸಲಹೆ ನೀಡಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಯೋಜಿಸಿದ್ದ ಅತಿಸಾರಬೇಧಿ ತಡೆಗಟ್ಟುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆಯಲ್ಲಿ ಬಿಸಿನೀರಿನ ಜೋತೆ ಚಾಮಚ ಸಕ್ಕರೆ ಜೋತೆಗೆ ಉಪ್ಪು ಕಲಕಿ ಕುಡಿಸುವುದು ಮುಂದಾಗುವ ತೋಂದರೆಯನ್ನು ತಡೆಗಟ್ಟಲು ಸಾಧ್ಯವಾಗುವುದು, ಬೇಧಿಯಾಗುವಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಜಾಗೃತಿ ವಹಿಸುವುದು. ಇಂತಹ ತೋಂದರೆಗಳು ತೀವ್ರವಾಗಿ ರೋಗ ನಿರೋಧಕ ಕಡಿಮೆ ಇರುವ ಮಕ್ಕಳಲ್ಲಿ ಕಂಡುಬರುತ್ತಿದ್ದು ಸಾಕಷ್ಟು ಮಕ್ಕಳು ತೊಂದರೆಗೆ ಒಳಗಾಗುವುವು ಎಂದರು.
ಡಾ.ರಾಜು.ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಕೆ.ಎನ್‍ರಮೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಭೀಮಣ್ಣ, ಕಿರಿಯ ಮಹಿಳ ಅರೋಗ್ಯ ಸಹಾಯಕಿ ಲತಾ, ತ್ರೀವೇಣಿ, ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಕೆಎನ್ ಮನುಕಿರಣ್, ಪ್ರೇಮ ಗ್ರಾಮಸ್ಥರು ಹಾಜಾರಿದ್ದರು.