ಅತಿಸಾರ ಬೇದಿಯಿಂದ ಮರಣಗಳು ಸಂಭವಿಸುತ್ತವೆ

ಹೊಸದುರ್ಗ:

        ಅತಿಸಾರ ಬೇದಿಯಿಂದದೇಶದಲ್ಲಿ ಸಾಕಷ್ಟು 5 ವರ್ಷದೊಳಗಿನ ಮಕ್ಕಳ ಮರಣಗಳು ಸಂಭವಿಸುದಿದ್ದು ಈ ಸಾವಿನ ಪ್ರಮಾಣವನ್ನುಕಡಿಮೆ ಮಾಡುವದೃಷ್ಟಿಯಿಂದಅತಿಸಾರ ಬೇದಿಯ ಕಾರಣಗಳು,ದುಷ್ಪರಿಣಾಮಗಳು ಮತ್ತುತಡೆಗಟ್ಟುವ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿಅರಿವು ಮೂಡಿಸುವ ಕಾರ್ಯಕ್ರಮಗಳನ್ನು ದೇಶಾದ್ಯಂತ ಮಾಡಬೇಕುಎಂದುಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಅದ್ಯಕ್ಷರಾದಡಾ. ಕೆ.ಅನಂತ್ ತಿಳಿಸಿದರು.

      ತಾಲ್ಲೂಕಿನಬಾಗೂರು.ಗ್ರಾಮದಪ್ರಾಥಮಿಕಆರೋಗ್ಯಕೇಂದ್ರದಲ್ಲಿಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ,ತಾಲ್ಲೋಕುಆರೋಗ್ಯ ಇಲಾಖೆ ಹೊಸದುರ್ಗ ಮತ್ತು ಪ್ರಾಥಮಿಕಆರೋಗ್ಯಕೇಂದ್ರ ಬಾಗೂರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿನಡೆದರಾಷ್ಟ್ರೀಯಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕಾಚರಣೆಯಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ದಿನಾಂಕ:03-06-2019 ರಿಂದ 17-06-2019 ರವರೆಗೆರಾಷ್ಟ್ರೀಯಅತಿಸಾರ ನಿಯಂತ್ರಣ ಪಾಕ್ಷಿಕವಗಿಆಚರಿಸಲಾಗುತ್ತಿದೆ. ಅತಿಸಾರ ಬೇದಿಗೆ ಕಲುಷಿತ ನೀರು,ಕಲುಷಿತಆಹಾರಕಾರಣವಾಗುವುದರಿಂದ ಪರಿಸರ ಸ್ವಚ್ಚತೆಕಾಪಡಿಕೊಂಡು ಶುದ್ದ ನೀರು ಕುಡಿಯುವುದರಿಂದ ರೋಗವನ್ನು ತಡೆಗಟ್ಟಬಹುದು ಎಂದರು . ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಶುದ್ದ ನೀರಿನ ಘಟಕಗಳು ಕಾರ್ಯನಿರ್ವಯಿಸುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.

      ಟಿಎಚ್‍ಓ ಡಾ.ಚಂದ್ರಶೇಕರ ಕಂಬಾಳಿಮಠ್ ಅದ್ಯಕ್ಷತೆ ವಯಿಸಿ ಮಾತನಾಡಿ ಜೂನ್-3 ರಿಂದ 17 ರವರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಅತಿಸಾರ ನಿಯಂತ್ರಣ ಮಾಡುವ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಗಳನ್ನು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗು ನೀಡಿ ಅವುಗಳನ್ನು ಉಪಯೋಗಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡುತ್ತಿದ್ದು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ.

     ಊಟಕ್ಕೆ ಮೊದಲು,ಶೌಚಾಲಯಕ್ಕೆ ಹೊಗಿ ಬಂದ ನಂತರ,ಅಡುಗೆ ತಯಾರಿಸುವ ಮೊದಲು ಮತ್ತು ಮಕ್ಕಳಿಗೆ ತಿನ್ನಿಸುವ ಮೊದಲು ಸಾಬೂನಿನಿಂದ ಕೈತೊಳೆದು ಕೊಳ್ಳುವುದರಿಂದ ಅತಿಸಾರ ಬೇದಿ ಮತ್ತುಇತರೆ ರೋಗಗಳನ್ನು ತಡೆಗಟ್ಟಬಹುದು ಎಂದರು.ಕೈ ತೊಳೆಯುವ ವಿಧಾನವನ್ನು ವಿದ್ಯಾರ್ಥಿಗಳು ಪ್ರತ್ಯಕ್ಷಿಕೆಯ ಮೂಲಕ ತೊರಿಸಿದರು.

      ಇದೇ ವೇಳೆ ಬಾಗೂರು ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಲೋಹಿತ್,ವೈದ್ಯಾಧಿಕಾರಿಗಳಾದ ಪರಶುರಾಮ್,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೆಂದ್ರ ಪಾಟೀಲ್,ನಿವೃತ್ತ ಹಿರಿಯ ಪಾರ್ಮಾಸಿಸ್ಟ್ ಎಂ.ಅರ್.ಸಿ.ಮೂರ್ತಿ.ಪರಪ್ಪ ಸ್ವಾಮಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆರೋಗ್ಯಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಅಂಗನವಾಡಿಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap