ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ದಾವಣಗೆರೆ:

        ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅವರ ಮೇಲೆ ಅತ್ಯಚಾರ ನಡೆಸಿ, ಹತ್ಯೆ ಗೈದಿರುವ ಪೈಶಾಚಿಕ ಕೃತ್ಯ ಖಂಡಿಸಿ ಎಐಡಿಎಸ್‍ಒ, ಎಐಡಿವೈಒ ಹಾಗೂ ಎಐಎಂಎಸ್‍ಎಸ್ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

        ಮಧು ಪತ್ತಾರ್ ಅವರ ಮೇಲೆ ನಡೆದಿರುವ ದೌರ್ಜನ್ಯವು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ದುಷ್ಕøತ್ಯವಾಗಿದ್ದು, ಈ ಘಟನೆ ನಡೆದು ವಾರ ಕಳೆದರೂ ಮಾಧ್ಯಮದಲ್ಲೂ ಮಾಹಿತಿ ನೀಡದಿರುವುದು ವಿದ್ಯಾರ್ಥಿಗಳಲ್ಲಿ ಆಕ್ರೋಷವನ್ನು ಉಂಟು ಮಾಡಿದೆ. ಮೊದಲು ಈ ಘಟನೆಯನ್ನು ಮರೆಮಾಚಲು ಎಲ್ಲಾ ತರಹದ ಪಿತೂರಿಗಳು ನಡೆದಿವೆ ಎಂದು ಆರೋಪಿಸಿದರು.

       ಇದು ಆತ್ಮಹತ್ಯೆಯಲ್ಲ, ಗುಂಪು ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂದು ಈಗಾಗಲೇ ಅನುಮಾನಾಸ್ಪದವಾಗಿ ಕಂಡುಬಂದ ಸುದರ್ಶನ್ ಯಾದವ್ ಅವರನ್ನು ಬಂಧಿಸಿದ್ದಾರೆ. ನಾಲ್ಕು ಜನರ ಗುಂಪು ಸೇರಿ ಮಧು ಪತ್ತಾರಳ ಮೇಲೆ ಗುಂಪು ಅತ್ಯಾಚಾರವೆಸಗಿರ ಬಹುದೆಂದು ಸುದ್ದಿ, ಬಲತ್ಕಾರದಿಂದ ನಾನು ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆಯಿಸಿ ನಂತರ ಆಕೆಯನ್ನು ಅರ್ಧಸುಟ್ಟು ಒಂದು ಮರಕ್ಕೆ ನೇಣು ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಒಟ್ಟಾರೆಯಾಗಿ ಈ ಪ್ರಕರಣ ಮನ ಕಲಕುವಂತದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಅತ್ಯಾಚಾರ, ಗುಂಪು ಅತ್ಯಾಚಾರವೆಸಗಿ ಸುಟ್ಟು ನೇಣಿಗೆ ಹಾಕುವಂತಹ ಕೊಲೆ ಮಾಡುವಂತಹ ಪ್ರಕರಣಗಳು ದೇಶದಲ್ಲೆಡೆ ಹೆಚ್ಚಾಗುತ್ತಿವೆ. ವಿದ್ಯಾರ್ಥಿ-ಯುವಜನರ ನೈತಿಕ ಮೌಲ್ಯವನ್ನು ಕೆಳಗಿಳಿಸುತ್ತಿರುವ ನಮ್ಮ ಮಾಧ್ಯಮಗಳು, ಅಶ್ಲೀಲ ಸಿನಿಮಾ ಸಾಹಿತ್ಯಗಳು, ಕಾಮ-ಕ್ರೋಧವನ್ನು ಬೆಳಸುವ ಚಲನಚಿತ್ರಗಳು ಎಲ್ಲೆಡೆ ಹೆಚ್ಚಾಗಿ ಹರಿದಾಡುತ್ತಿವೆ ಇದಕ್ಕೆ ನಮ್ಮನ್ನಾಳುವಂತಹ ಎಲ್ಲಾ ಸರ್ಕಾರಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿದರು.

        ಇಲ್ಲಿ ಜೀವಗಳಿಗಿಂತ ಚುನಾವಣೆಗಳೇ ಮುಖ್ಯವಾಗಿದೆ. ನಮ್ಮ ದೇಶದಲ್ಲಿ ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ಮಾಡಿಕೊಂಡು ಆಕೆಯನ್ನು 2ನೇ ದರ್ಜೆಯ ಪ್ರಜೆಯಾಗಿ ಬಿಂಬಿಸುತ್ತಿದ್ದಾರೆ. ಹೆಣ್ಣು ಕಾಮಕ್ಕೆ ಮಾತ್ರ ಸೀಮಿತ ಎಂಬ ವಿಚಾರವನ್ನು ಮಾಧ್ಯಮಗಳ ಮುಖೇನ ಸಾಮಾಜಿಕ ಜಾಲತಾಣಗಳ ಮುಖೇನ ಎಲ್ಲರ ಮನಸ್ಸುಗಳಲ್ಲಿ ಅಚ್ಚು ಹೊಡೆದು ಪರೋಕ್ಷವಾಗಿ ಕಾರಣರಾಗಿದ್ದಾರೆ. ಮದು ಪತ್ತಾರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದಿರುವ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸೌಮ್ಯ, ನಾಗಜ್ಯೋತಿ, ಪರಶುರಾಮ್, ಜ್ಯೋತಿ ಕುಕ್ಕುವಾಡ, ಭಾರತಿ ಪೂಜಾ, ವಸಂತ, ಭವಾನಿರಾವ್, ಕಾವ್ಯ, ಪುಷ್ಪ, ಸ್ವಪ್ನ ಮಂಜುನಾಥ್, ತ್ರಿವೇಣಿ, ಸತೀಶ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap