ಈ ಬಾರಿಯಾದರು ತುಂಬುತ್ತವೆಯೇ ತಾಲ್ಲೂಕಿನ ಕೆರೆಗಳು?

ತಿಪಟೂರು
  ಈ ಬಾರಿಯು ನಾಡಿಗೆ ಹೇಮಾವತಿ ಜಲಾಶಯದಿಂದ ನೀರನ್ನು ವರಮಹಾಲಕ್ಷ್ಮಿ ಹಬ್ಬದಂದು ತಾಯಿ ಮಾಹಾಲಕ್ಷ್ಮೀ ಹರಿದುಬಂದಂತೆ ಕಾಣುತ್ತಿದ್ದು ಈ ಬಾರಿಯಾದರು ಕರುಣೆತೋರಿ ನಮ್ಮ ಜನಪ್ರತಿನಿಧಿಗಳು ಕೆರೆಯನ್ನು ತುಂಬಿಸುತ್ತಾರೆಯೇ ಎಂದು ಕಾಯ್ದು ನೋಡಬೇಕಿದೆ.
  ಕಳೆದಬಾರಿ ಈ ಹೊತ್ತಿಗೆ ತಾಲ್ಲೂಕಿನ ಈಚನೂರು ಕೆರೆ ತುಂಬಿ ಶಾಸಕರು ಬಾಗಿನವನ್ನು ಅರ್ಪಿಸಿದ್ದರು. ಆದರೆ ಈ ಬಾರಿ ತಡವಾಗಿಯಾದರೂ ಮಳೆಯಾಗಿ ಹೇಮಾವತಿ ಜಲಾಶಯದಿಂದ ನಾಲೆಗೆ ನೀರು ಬಿಟ್ಟಿದ್ದಾರೆ. ಈ ಬಾರಿಯಾದರು ಬಂದ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಸೂಕ್ತ ರೀತಿಯಲ್ಲಿ ಯಾವುದೇ ಗೊಂದಲಗಳಿಲ್ಲದೆ ತಾಲ್ಲೂಕಿನ ಕೆರೆಗಳನ್ನು ತುಂಬಿಸುವತ್ತ ತಾಲ್ಲೂಕು ಆಡಳಿತ ಮತ್ತು ಶಾಸಕರು ಗಮನಹರಿಸಬೇಕಿದೆ.
   ಈ ಬಾರಿಯೂ ಪೊಲೀಸರ ಸರ್ಪಗಾವಲಿರುತ್ತದೋ? : 2017-18ನೇ ಸಾಲಿನಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಎಲ್ಲಾ ತೂಬುಗಳನ್ನು ಮುಚ್ಚಿ ನಾಲೆಯ ಕೊನೆಯ ಭಾಗದವರೆಗೂ ನೀರನ್ನು ಹರಿಸಿದ್ದರು. ಆದರೆ ಈ ಬಾರಿಯು ಇದೇ ರೀತಿ ಪೊಲೀಸರ ಸರ್ಪಗಾಲಿರುತ್ತದೋ ಇಲ್ಲ ನಮಗೆ ತಿಳಿಯುತ್ತಿಲ್ಲ. ಅವರು ನೀರು ತೆಗೆದುಕೊಂಡು ಹೋಗಲು ನಮಗೇನು ಅಭ್ಯಂತರವಿಲ್ಲ. ನಮಗೂ ಸ್ವಲ್ಪಕೊಡಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
 
  ಆದರೂ ಸಹ ಏರ್‍ಪೈಪ್ ಮುಖಾಂತರ ಮತ್ತು ಇರುವ ನಾಲೆಯನ್ನು ಸ್ವಂತ ಖರ್ಚಿನಲ್ಲಿ ಕೆಲವು ರೈತರು, ಯುವಕರು ಸೇರಿ ತಮ್ಮ ಕೆರೆಗಳನ್ನು ತುಂಬಿಸಿಕೊಳ್ಳುವ ಪ್ರಾಮಾಣಿಕ ಯತ್ನವನ್ನು ಮಾಡಿಕೊಂಡು ಬರಗಾಲದಲ್ಲಿ ಸ್ವಲ್ಪ ನೀರಿನ ಒರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ನಾಲೆಯದ್ದು ಮತ್ತದೇ ಗೋಳು :
   ಸಾಮಥ್ರ್ಯಕ್ಕೆ ತಕ್ಕಂತೆ ನಿರುಹರಿಯುವುದು ಈ ಬಾರಿಯೂ ಅನುಮಾನ. ರಸ್ತೆಗೆ ಹತ್ತಿರವಿರುವ ಕಡೆ ಮಾತ್ರ ನಾಲೆಯನ್ನು ಸ್ವಲ್ಪಮಟ್ಟಿಗೆ ಪಕ್ಕದಲ್ಲಿನ ಗಿಡಗಳನ್ನು ಕತ್ತರಿಸಿದ್ದು ಬಿಟ್ಟರೆ ನಾಲೆಯಲ್ಲಿರುವ ಶಿಲ್ಟ್‍ಅನ್ನು ತೆಗೆಯುವ ಗೋಜಿಗೆ ಹೋಗಿಲ್ಲ. ಇನ್ನೆಲ್ಲಿ ಸಂಪೂರ್ಣ ಪ್ರಮಾಣದ ನೀರು ಹರಿಯಲು ಸಾಧ್ಯವೆಂಬುದು ರೈತರ ಪ್ರಶ್ನೆಯಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link