ಐನಾತಿ ಎಟಿಎಂ ಕಳ್ಳರ ಬಂಧನ..!

ಬೆಂಗಳೂರು

    ಸರಳ ಉಪಾಯ ಬಳಸಿ ಎಟಿಎಂಗಳಿಂದ ಹಣ ದೋಚಿ ದೇಶದ ಮಹಾನಗರಗಳಿಗೆ ವಿಮಾನ ಪ್ರಯಾಣ ಮಾಡುತ್ತ ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಮೋಜು ಮಾಡುತ್ತಿದ್ದ ಹರಿಯಾಣ ಗ್ಯಾಂಗ್‌ನ ಇಬ್ಬರು ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಯಶವಂತಪುರ ಪೊಲೀಸರು ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

    ಹರಿಯಾಣದ ನೂಹಾ ತಾಲ್ಲೂಕಿನ ಬಿಬಿಪುರದ ಶಹಜಾದ್(28)ಹಾಗೂ ಶಾಹೀದ್(23)ನನ್ನು ಬಂಧಿಸಿ ಇವರಿಬ್ಬರ ಗ್ಯಾಂಗ್‌ನಲ್ಲಿದ್ದ ಮತ್ತಿಬ್ಬರ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಬಂಧಿತರಿಂದ ವಿವಿಧ ಬ್ಯಾಂಕ್‌ಗಳ 25 ಎಟಿಎಂ ಕಾರ್ಡುಗಳು, ಮೊಬೈಲ್‌ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    ಆರೋಪಿಗಳು ಮೊದಲಿಗೆ ಸೆಕ್ಯೂರಿಟಿಗಾರ್ಡ್‌ಗಳಿಲ್ಲದ ಎಟಿಎಂಗಳನ್ನು ಗುರುತಿಸುತ್ತಿದ್ದರು. ನಂತರ ಒಬ್ಬ ಒಳ ಹೋಗಿ ಸಿಸಿಟಿವಿಯನ್ನು ಬೇರೆಡೆ ತಿರುಗಿಸುತ್ತಿದ್ದು, ತದನಂತರ ಮತ್ತೊಬ್ಬ ಆರೋಪಿ ಹೋಗಿ ಎಟಿಎಂ ಕಾರ್ಡನ್ನು ಯಂತ್ರದಲ್ಲಿ ಹಾಕಿ ಹಣ ತೆಗೆದುಕೊಳ್ಳಲು ಮುಂದಾಗುತ್ತಿದ್ದ.

    ಹಣವು ಎಟಿಎಂ ಯಂತ್ರದಿಂದ ಹೊರಬರುವಾಗ 5 ರಿಂದ 10 ಸೆಕೆಂಡ್‌ಗಳಲ್ಲಿ ಹಣ ತೆಗೆದುಕೊಳ್ಳಲು ಬೀಬ್ ಸೌಂಡ್ ಬರುತ್ತದೆ. ಆಗ ಹಣವನ್ನು ತೆಗೆದುಕೊಳ್ಳದೆ ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದ. ಇದೇ ಸಮಯಕ್ಕೆ ಮತ್ತೊಬ್ಬ ಆರೋಪಿ ಎಟಿಎಂ ಮಿಷನ್‌ನ ಎಲಕ್ಟ್ರಿಕ್ ಬಟನ್ ಸ್ವಿಚ್ ಆಫ್ ಮಾಡುತ್ತಾನೆ.

   ಕೂಡಲೇ ಎಟಿಎಂ ಯಂತ್ರವು ತನ್ನ ಪ್ರಕ್ರಿಯೆಯನ್ನು ನಿಲ್ಲಿಸಿದಾಗ ಹಣವನ್ನು ತೆಗೆದುಕೊಳ್ಳುತ್ತಿದ್ದು. ತಕ್ಷಣವೇ ಆರೋಪಿಗಳು ಬ್ಯಾಂಕ್‌ನ ಕಾಲ್‌ಸೆಂಟರ್‌ಗೆ ಕರೆ ಮಾಡಿ ಹಣ ಬಂದಿಲ್ಲವೆಂದು ತಿಳಿಸಿ ಬ್ಯಾಂಕ್‌ಗಳಿಂದ ಡ್ರಾ ಮಾಡಿದ್ದ ಅಷ್ಟು ಹಣವನ್ನು ವಾಪಸ್ ತೆಗೆದುಕೊಂಡು ಪರಾರಿಯಾಗುತ್ತಿದ್ದರು.

    ದೇಶದ ಪ್ರಮುಖ ನಗರಗಳಲ್ಲಿ ಆರೋಪಿಗಳು ಈ ಕೃತ್ಯ ಮಾಡುತ್ತಿದ್ದು, ನಗರದಲ್ಲಿ ಇದೇ ರೀತಿ ಹಲವೆಡೆ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಇವರಿಬ್ಬರ ಜತೆ ಇನ್ನಿಬ್ಬರು ಕೈಜೋಡಿಸಿದ್ದು, ತಲೆಮರೆಸಿಕೊಂಡಿರುವ ಅವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ

    ಆರೋಪಿಗಳು ಕುಟುಂಬದ ಸದಸ್ಯರು, ಸಂಬಂಧಿಕರುಗಳು, ಸ್ನೇಹಿತರ ಹೆಸರುಗಳಲ್ಲಿ ಎಸ್‌ಬಿಆ, ಸೆಂಟ್ರಲ್ ಬ್ಯಾಂಕ್, ಆಕ್ಸಿಕ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಇನ್ನಿತರ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಎಟಿಎಂ ಕಾರ್ಡ್‌ಗಳನ್ನು ಪಡೆದು ದೆಹಲಿ, ಕೊಲ್ಕತ್ತ, ಮುಂಬೈ, ಚೆನ್ನೆ ನಗರಗಳಿಗೆ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದರು.

    ಪ್ರಯಾಣಿಸಿದ ಸ್ಥಳಗಳ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಂಡು ಈ ಕೃತ್ಯ ನಡೆಸುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

    ದೆಹಲಿ ಮೂಲದ ಟ್ರಾನ್ಸೆಕ್ಷನ್, ಸಲ್ಯೂಷನ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏರಿಯಾ ಮ್ಯಾನೇಜರ್ ಕುದ್ಹಾ ಭಕಾಷ್ ಖಾನ್ ಕಂಪನಿಯು ದೇಶಾದ್ಯಂತ ಸುಮಾರು ವಿವಿಧ ಬ್ಯಾಂಕುಗಳ 14 ಸಾವಿರ ಎಟಿಎಂ ಸೆಂಟ್ರಲ್‌ಗಳನ್ನು ನಿರ್ವಹಿಸುತ್ತಿದ್ದು, ಎಟಿಎಂಗಳಲ್ಲಿ ವಿವಿಧ ಕಾರ್ಡುಗಳನ್ನು ಬಳಸಿಕೊಂಡು ಹಣ ತೆಗೆದುಕೊಳ್ಳುವಾಗ ಎಟಿಎಂ ಮಿಷನ್‌ನ ಎಲೆಕ್ಟ್ರಿಕ್ ಬಟನ್ ಆಫ್ ಮಾಡಿಹಣ ಪಡೆದುಕೊಂಡು ಮೋಸ ಮಾಡುತ್ತಿರುವ ಬಗ್ಗೆ ನೀಡಿದ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

    ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ನಗರದಲ್ಲಿನ ವಿವಿಧ ಎಟಿಎಂ ಸೆಂಟರ್‌ಗಳಲ್ಲಿ ಲಕ್ಷಾಂತರ ರೂಗಳ ಹಣವನ್ನು ಮೋಸದಿಂದ ಡ್ರಾ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ಯಶವಂತಪುರ ಪೊಲೀಸ್ ಇನ್ಸ್‌ಪೆಕ್ಟರ್ ಮೊಹ್ಮದ್ ಮುಕಾರಾಂ ಅವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link