ಬೆಂಗಳೂರು
ವಿಜಯನಗರದ ಮುಖ್ಯ ರಸ್ತೆಯ ಬಳಿ ಗಾಂಜಾ ಅಮಲಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಪಾನಿಪುರಿ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.ಕಳೆದ ಜೂ.30 ರಂದು ನಡೆದಿರುವ ಈ ಕೃತ್ಯವು ತಡವಾಗಿ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.
ವಿಜಯನಗರದ ಮುಖ್ಯ ರಸ್ತೆಯಲ್ಲಿನ ಪಾನಿ ಪುರಿ ಅಂಗಡಿ ಬಳಿ ಜೂ.30ರಂದು ರಾತ್ರಿ ಬಂದಿರುವ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಪಕ್ಕದ ಅಂಗಡಿಗಳ ವಸ್ತುಗಳ ಮೇಲೂ ಮಚ್ಚಿನಿಂದ ಹಾನಿ ಗೊಳಿಸಿದ್ದಾರೆ ಮಚ್ಚು ಬೀಸುವುದನ್ನ ನೋಡಿ ಪಾನಿಪೂರಿ ಅಂಗಡಿಯ ಮಾಲೀಕ ಹಾಗೂ ಅಲ್ಲಿದ್ದ ಸ್ಥಳೀಯರು ಭಯಬೀತರಾಗಿ ಓಡಿಹೊಗಿದ್ದಾರೆ.
ಅಲ್ಲಿಂದ ದುಷ್ಕರ್ಮಿಗಳು ಬ್ಯಾಡರಹಳ್ಳಿಗೆ ಹೋಗಿ ಅಲ್ಲಿದ್ದ ಇಬ್ಬರು ಅಮಾಯಕರಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಅಂಗಡಿ ಬಳಿ ದುಷ್ಕರ್ಮಿಗಳು ನಡೆಸಿದ ಪುಂಡಾಟಿಕೆಯು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ ಈ ಸಂಬಂಧ ವಿಜಯನಗರ ಪೆÇಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.