ಮಲೇಬೆನ್ನೂರು
ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ದಾಖಲೆ ಸಮೇತ ಆರೋಪಸಿದ್ದಕ್ಕಾಗಿ ಮಸೀದಿ ಹಾಗೂ ಕಮಿಟಿ ಅಧ್ಯಕ್ಷ ಮಹಮ್ಮದ್ ರೋಷನ್ ಹಾಗೂ ಆತನ ಸಂಬಂಧಿಕರು ಮಸೀದಿಯಲ್ಲೇ ತಮ್ಮನ್ನು ಸೇರಿದಂತೆ ನಾಲ್ಕೈದು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸೈಯದ್ ಖಾಲೀದ್ ಆರೋಪಿಸಿ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಗುರುವಾರ ಸೈಯದ್ ಖಾಲೀದ್ ಸೇರಿದಂತೆ ಮಹಮ್ಮದ್ ಫಾಜಿಲ್ ಶೌಕತ್ ಅಲಿ ನಿಸಾರ್ ಅಹ್ಮದ್ ಮತ್ತಿತರರು ಜಾಮೀಯಾ ಮಸೀದಿಯಲ್ಲಿ ಅಲ್ಲಿನ ಅಧ್ಯಕ್ಷ ಮಹಮ್ಮದ್ ರೋಷನ್ ಭ್ರಷ್ಟಚಾರ ನಡೆಸುತ್ತಿದ್ದಾರೆ ಹಣ ದುರುಪಯೋಗ ನಪಡಿಸಿಕೊಳ್ಳುತ್ತಿದ್ದಾರೆ ಎಂದು ದಾಖಲೆ ಸಮೇತ ಆಪಾದನೆ ಮಾಡಿದ್ದರು.
ಹಲ್ಲೆಗೊಳಗಾದ ಸೈಯದ್ ಖಾಲೀದ್ ಪೋಲೀಸ್ ದೂರಿನಲ್ಲಿ ತಾವು ಈ ಬಗ್ಗೆ ಮಹಮ್ಮದ್ ರೋಷನ್ ಭ್ರಷ್ಟಚಾರ ನಡೆಸುತ್ತಿದ್ದಾರೆ ಎಂದು ತಾವು ಬೆಂಗಳೂರಿನ ವಕ್ಷ್ ಮಂಡಳಿಗೆ ದೂರು ನೀಡಿದ್ದು ಇದರಿಂದ ಅವರು ಗುರುವಾರ ರಾತ್ರಿ ಮಸೀದಿಗೆ ಪ್ರಾರ್ಥನೆಗೆಂದು ತೆರಳಿದ ಸಂದರ್ಭದಲ್ಲಿ ತಮ್ಮನ್ನು ಸೇರಿದಂತೆ ಶೌಕತ್ ಅಲಿ ಅವರ ಪುತ್ರ ಷಾಬಾಜ್ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ಷಬಾಜ್ ಆತನ ಜೊತೆಗಿದ್ದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು ಎಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
