ಬೆಂಗಳೂರು
ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ ಲಾರಿ ಚಾಲಕ ಕೇಶವ್ ಕೊಲೆಗಾರ ಅಭಿಷೇಕ್‍ಗೆ ಸೋಮವಾರ ಮಧ್ಯರಾತ್ರಿ ಹೆಣ್ಣೂರು ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಹಾರಿಸಿದ ಗುಂಡು ತಗುಲಿ ಬಲಗಾಲಿಗೆ ಗಾಯಗೊಂಡಿರುವ ವಡ್ಡರಪಾಳ್ಯದ ಅಭಿಷೇಕ್(19)ಬೌರಿಂಗ್‍ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಆರೋಪಿ ಅಭಿಷೇಕ್ ಚಾಕುವಿನಿಂದ ಇರಿದಿದ್ದರಿಂದ ಗಾಯಗೊಂಡಿರುವ ಹೆಣ್ಣೂರು ಠಾಣೆಯ ಪೇದೆ ಸಂತೋಷ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಡಿಸಿಪಿ ರಾಹುಲ್‍ಕುಮಾರ್ ಶಹಪೂರವಾಡ ತಿಳಿಸಿದ್ದಾರೆ.
ಘಟನೆ ವಿವರ
ಕಳೆದ ಶುಕ್ರವಾರ ರಾತ್ರಿ ಲಾರಿ ಚಾಲಕ ಕೇಶವ್‍ನನ್ನು ಇತರ ನಾಲ್ವರ ಜೊತೆ ಸೇರಿ ಕೊಲೆ ಮಾಡಿದ್ದ ಅಭಿಷೇಕ್ ಅಂದಿನಿಂದ ಹಾಕಿದ್ದ ಬಟ್ಟೆಯಲ್ಲಿಯೇ ಇದ್ದು ಮನೆಗೆ ಬಂದು ಬಟ್ಟೆ ಬದಲಿಸಿ ನಾಲ್ಕೂದು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಪರಾರಿಯಾಗಲು ರಾತ್ರಿ 1.45ರ ವೇಳೆ ಮನೆಗೆ ಬಟ್ಟೆ ಬದಲಿಸಲು ಬರುತ್ತಿರುವ ಖಚಿತ ಮಾಹಿತಿ ಆಧರಿಸಿ ಹೆಣ್ಣೂರು ಬಂಡೆ ಬಳಿ ಪೊಲೀಸ್ ಇನ್ಸ್‍ಪೆಕ್ಟರ್ ಹೆಚ್.ಡಿ.ಕುಲಕರ್ಣಿ ಮತ್ತವರ ತಂಡ ಕಾದು ಕುಳಿತಿತ್ತು.
ಅಭಿಷೇಕ್ ಬರುತ್ತಿರುವುದನ್ನು ಕಂಡ ಪೊಲೀಸ್ ಸಿಬ್ಬಂದಿ ಸಂತೋಷ್ ಬೆನ್ನಟ್ಟಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿದ್ದಾನೆ ಕೂಡಲೇ ಕುಲಕರ್ಣಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಬೆನ್ನಟ್ಟಿ ಹೇಳಿದರೂ ಮತ್ತೆ ಚಾಕು ಹಿಡಿದು ನುಗ್ಗಿದ್ದರಿಂದ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದಾರೆ.
ಅಭಿಷೇಕ್ ಕಾಲಿಗೆ ಆ ಗುಂಡು ತಗುಲಿ ಸ್ಥಳದಲ್ಲಿಯೇ ಆತ ಕುಸಿದು ಬಿದ್ದಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಕೊತ್ತನೂರಿನಲ್ಲಿ ಅಭಿಷೇಕ್ ವಿರುದ್ದ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು 9ನೇ ತರಗತಿಗೆ ಶಾಲೆ ಬಿಟ್ಟು ಅಪರಾಧ ಕೃತ್ಯಕ್ಕೆ ಇಳಿದಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
