ಮಂಗಳೂರು
ಕೈಕಂಬದ ಹಿಂದೂ ಸಂಘಟನೆಯ ಮುಖಂಡನ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸೂರಲ್ಪಾಡಿಯಲ್ಲಿ ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆಗೆ ವಿ ಹೆಚ್ ಪಿ ಮುಖಂಡ ಪೊಳಲಿಯ ಹರೀಶ್ ಶೆಟ್ಟಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು .ಪ್ರಕರಣಕ್ಕೆ ಅನಪೇಕ್ಷಿತ ತಿರುವು ಸಿಕ್ಕಿದ್ದು ದುಷ್ಕರ್ಮಿಗಳು ಹಲ್ಲೆಯ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಮತ್ತು ನಡೆದ ಘಟನೆಯಲ್ಲಿ ಹರೀಶ್ ಶೆಟ್ಟಿ ಗಂಭೀರವಾಗಿ ಗಾಯಗಳಾದ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರೀಶ್ ಶೆಟ್ಟಿ ಅವರು ಕೈಕಂಬದಲ್ಲಿ ಖಾಸಗಿ ಬಸ್ ಟೈಂ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಹರೀಶ್ ಅವರು ರಸ್ತೆ ಬದಿ ನಿಂತಿದ್ದ ಸಂದರ್ಭದಲ್ಲಿ 2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಪಣಂಬೂರು ಠಾಣೆಯ ರೌಡಿ ನಿಗ್ರಹ ದಳದ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ದ ಕಲಾಯಿ ನಿವಾಸಿ ಮಹಮ್ಮದ್ ಶರೀಫ್ ಯಾನೆ ಕಲಾಯಿ ಶರೀಫ್, ಬಜಪೆ ನಿವಾಸಿಗಳಾದ ಮಹಮ್ಮದ್ ಶಿಫಾಜ್ ಹಾಗೂ ಮಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ .
ವಿಚಾರಣೆ ಮುಂದುವರಿಸಿದಾಗ ಆರೋಪಿಗಳು ಇಮ್ತಿಯಾಜ್ ಮೇಲಿನ ಹಲ್ಲೆಗೆ ಪ್ರತೀಕಾರವಾಗಿಯೇ ಹರೀಶ್ ಶೆಟ್ಟಿ ಅವರ ಮೇಲೆ ತಲವಾರು ದಾಳಿ ನಡೆಸಲಾಗಿದೆ ಎಂದು ಹೇಳೀದ್ದಾರೆ . ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಬಂಧಿತ ಆರೋಪಿಗಳ ಪೈಕಿ ಕಲಾಯಿ ಶರೀಫ 2017 ರ ಜೂನ್ 21 ರಂದು ಬಂಟ್ವಾಳದಲ್ಲಿ ಹತ್ಯೆಗೀಡಾಗಿದ್ದ ಆಶ್ರಫ್ ಕಲಾಯಿ ಅವರ ಸಹೋದರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








