ಪ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಗಮಂದಾರ ಸೀಜನ್ 3 ಆಡಿಷನ್

ಗುಬ್ಬಿ:

       ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಪ್ರಗತಿ ಟಿ.ವಿ.ವಾಹಿನಿಯು ರಾಗ ಮಂದಾರ ಅಡಿಷನ್ ಕಾರ್ಯಕ್ರಮವನ್ನು ಜಿಲ್ಲೆಯಧ್ಯಂತ ನಡೆಸಲಾಗುತ್ತಿದ್ದು ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಗತಿ ಟಿ.ವಿ.ವಾಹಿನಿಯ ಸಿ.ಇ.ಓ ಶಿಲ್ಪಾ ಸಂಜಯ್ ಕರೆನೀಡಿದರು.

       ಪಟ್ಟಣದ ಪ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಗತಿ ಟಿ.ವಿ.ವಾಹಿನಿ ಹಮ್ಮಿಕೊಂಡಿದ್ದ ಸ್ವರಗಳ ಜೊತೆ ಮನಸ್ಸನ್ನು ಮಿಡಿಸುವ ರಾಗಮಂದಾರ ಸೀಜನ್ 3 ಯ ರಿಯಾಲಿಟಿ ಶೋ ಕಾರ್ಯಕ್ರಮದ ಅಡಿಷನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ತಿಳಿಸಿದರು.

      ತಹಸಿಲ್ದಾರ್ ಜಿ.ವಿ.ಮೋಹನ್‍ಕುಮಾರ್ ಮಾತನಾಡಿ ಹಲವು ಪ್ರತಿಭಾವಂತ ಮಕ್ಕಳಿಗೆ ಸೂಕ್ತವಾದ ವೇದಿಕೆ ದೊರೆಯದೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗದೆ ಇರುವಂತಹ ಸಂದರ್ಭದಲ್ಲಿ ಪ್ರಗತಿ ಟಿ.ವಿ.ವಾಹಿನಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಅವರಿಗೆ ವಾಹಿನಿಗಳಲ್ಲಿ ಹಾಡುವಂತಹ ಉತ್ತಮ ಅವಕಾಶ ಕಲ್ಪಿಸುವಂತಹ ಮಹತ್ವದ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹವಾದುದಾಗಿದ್ದು ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿಗಳಾಗುವಂತೆ ಕರೆನೀಡಿದರು.

     ಅಕ್ಷರ ದಾಸೋಹ ಸಹಾಯಕ ನಿರ್ಧೇಶಕ ಯೊಗಾನಂದ್ ಮಾತನಾಡಿ ಮಕ್ಕಳ ಪ್ರತಿಬೆಯನ್ನು ಗುರುತಿಸಿ ವಾಹಿನಿಗಳಲ್ಲಿ ಹಾಡಲು ಅನುಕೂಲವಾಗವಂತಹ ಅವಕಾಶವನ್ನು ಪ್ರಗತಿ ವಾಹಿನಿ ಕಲ್ಪಿಸಿರುವುದು ಅಭಿನಂದನಾರ್ಹವಾದುದಾಗಿದ್ದು ಮಕ್ಕಳು ಇಂತಹ ಸದಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಹಾಡುಗಾರರಾಗುವಂತೆ ಕರೆನೀಡಿದರು.

      ಪ್ರಗತಿ ಟಿ.ವಿ.ವಾಹಿನಿಯ ಸ್ವರಗಳ ಜೊತೆ ಮನಸ್ಸನ್ನು ಮಿಡಿಸುವ ರಾಗಮಂದಾರ ಸೀಜನ್ 3 ಯ ರಿಯಾಲಿಟಿ ಶೋ ಕಾರ್ಯಕ್ರಮದ ಅಡಿಷನ್‍ಗೆ ತಾಲ್ಲೂಕಿನ ಹಲವು ಶಾಲೆಗಳಿಂದ ಪೋಷಕರೊಂದಿಗೆ ಆಗಮಿಸಿದ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಕರಿಯಮ್ಮ, ಜಿ.ಹೆಚ್.ವಿ.ಎಸ್.ಟ್ರಸ್ಟ್ ಅಧ್ಯಕ್ಷೆ ಉಮಾ, ಶಿಕ್ಷಣ ಸಂಯೋಜಕ ವಾಗೀಶ್, ಸಂಗೀತ ನಿರ್ಧೇಶಕ ಶ್ರೀನಿವಾಸ್, ಮೀಡಿಯಾ ಭ್ಯಾಕ್ ಆಪೀಸ್ ಮುಖ್ಯಸ್ಥರಾದ ರಘು, ಪ್ರಿಯಾ ಆಂಗ್ಲ ಶಾಲೆಯ ಮುಖ್ಯಸ್ಥ ಪಂಚಾಕ್ಷರಯ್ಯ, ಸಂಜೀವಯ್ಯ, ಕೆ.ಸಂಜಯ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link