ಶಾಲೆಗಳ ಸಬಲೀಕರಣಕ್ಕಾಗಿ ಪ್ರತಿಯೊಂದು ಶಾಲೆಯೂ ಕನಸನ್ನು ಹೊಂದಬೇಕು.

ಹೊಸದುರ್ಗ:

      ಶಾಲೆಗಳ ಸಬಲೀಕರಣಕ್ಕಾಗಿ ಪ್ರತಿಯೊಂದು ಶಾಲೆಯೂಕನಸನ್ನು ಹೊಂದಬೇಕು ಮತ್ತು ಸರಕಾರಿ ಶಾಲೆಗಳ ಬಗ್ಗೆ ಸಮುದಾಯದಲ್ಲಿಇರುವತಾತ್ಸಾರ ಮನೋಭಾವನೆಯನ್ನು ಹೊಗಲಾಡಿಸಿ ಸರಕಾರಿ ಶಾಲೆಗಳು ಸಮುದಾಯದ ಹೆಮ್ಮೆಯ ಶಾಲೆಗಳನ್ನಾಗಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಪ್ರಯತ್ನಿಸಬೇಕುಎಂದು ಬಿಇಒ ಎಲ್‍ ಜಯಪ್ಪ ತಿಳಿಸಿದರು.

       ತಾಲೂಕಿನ ಮಾಡದಕೆರೆಗ್ರಾಮದಲ್ಲಿ ಈಚೇಗೆ ಏರ್ಪಡಿಸಲಾಗಿದ್ದ ಶಿಕ್ಷಕರ ತರಬೇತಿಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದರು.

       ಸರಕಾರಿ ಶಾಲೆಗಳ ಸಬಲೀಕರಣ ಹಾಗೂ ಶಿಕ್ಷಕರಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಸಬಲೀಕರಣ ವಿಷನ್ 2019-20 ಎನ್ನುವ ವಿನೂತನಕಾರ್ಯಕ್ರಮವನ್ನುಆಯೋಜಿಸಲಾಗಿದ್ದು, ಕ್ಲಸ್ಟರ್ ಹಂತದಲ್ಲಿ 9 ತಂಡಗಳನ್ನು ರಚಿಸಿ 2-3 ಕ್ಲಸ್ಟರ್ ನ ಶಿಕ್ಷಕರುಗಳನ್ನು ಒಂದೆಡೆ ಸೇರಿಸುವ ಮೂಲಕ 2019-20ನೇ ಶೈಕ್ಷಣಿಕ ವರ್ಷವನ್ನು ಪರಿಣಾಮಾಕಾರಿಯಾಗಿರೂಪಿಸುವ ನಿಟ್ಟಿನಲ್ಲಿ 30 ಅಂಶಗಳ ಬಗ್ಗೆ ಸುೀರ್ಘವಾದ ಮತ್ತು ಪ್ರೇರಣಾತ್ಮಕವಾದತರಬೇತಿಯನ್ನು ನೀಡಲಾಗುತ್ತಿದೆಎಂದರು.

      2019ರ ಶೈಕ್ಷಣಿಕ ಪ್ರಾರಂಭೋತ್ಸವವನ್ನುಎಲ್ಲಾ ಶಾಲೆಗಳಲ್ಲಿಯೂ ಶೇ ನೂರರಷ್ಠು ಪೋಷಕರು, ವಿದ್ಯಾರ್ಥಿಗಳು, ಎಸ್‍ಡಿಎಂಸಿಯವರು ಭಾಗವಹಿಸುವಂತೆಜವಬ್ದಾರಿಯನ್ನು ಶಿಕ್ಷಕರು ತೆಗೆದುಕೊಳ್ಳಬೇಕು.ಈ ನಿಟ್ಟಿನಲ್ಲಿ ಶಿಕ್ಷರಿಗೆ ಬೇಕಾದತರಬೇತಿ, ಪ್ರೋತ್ಸಾಹ, ಪ್ರೇರಣೆಯನ್ನುಕಾರ್ಯಾಗಾರದಲ್ಲಿ ನೀಡಲಾಗುತ್ತಿದೆ.

         ಇದಕ್ಕೆ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮೂಡಿ ಬರುತ್ತಿದೆ.ಆದರಾಚೆ ಸಮುದಾಯದ ಸಹಭಾಗಿತ್ವ, ಪರಿಣಾಮಕಾರಿ ಪೋಷಕ ಸಭೆಗಳು, ಶಾಲೆಗಳಲ್ಲಿ ಪ್ರತಿವಾರ ವಿವಿಧ ಸ್ಪರ್ಧೆಗಳ ಆಯೋಜನೆ, ಕನ್ನಡ -ಇಂಗ್ಲೀಷ್ ಪತ್ರಿಕೆಗಳ ವಾಚನ, ಗ್ರಂಥಾಲಯಗಳ ಸದ್ಬಳÀಕೆಗೆ ಪುಸ್ತಕ ಓದಿ ಬಹುಮಾನಗೆಲ್ಲಿಕಾರ್ಯಕ್ರಮ, ಪ್ರಯೋಗಶಾಲೆಗಳ ಬಳಕೆ, ಪಾರದರ್ಶಕ ಆಡಳಿತ, ಆಯ್ದ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಪ್ರಾರಂಭ, ಹಿರಿಯ ವಿದ್ಯಾರ್ಥಿ ಸಂಘಗಳ ಸ್ಥಾಪನೆ, ಅರ್ಥಪೂರ್ಣ ಶಾಲಾವಾರ್ಷಿಕೋತ್ಸವ, ವಿನೋದಗಣಿತ, ಸಮಯಪಾಲನೆ, ಉತ್ತಮ ಶಾಲಾ ಪರಿಸರ, ದಾನಿಗಳಿಂದ ಶಾಲೆಗಳಿಗೆ ಮೂಲಭೂತ ಸೌಕರ್ಯಕಲ್ಪಿಸುವಿಕೆ, ಪ್ರತಿಭಾ ಪುರಸ್ಕಾರಕ್ಕೆ ಸ್ಥಿರ ನಿ ಸ್ಥಾಪನೆ, ಬಾಲ ಕವಿ ಮೇಳ ಮೊದಲಾದ ಅಂಶಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.ಕಾರ್ಯಾಗಾರದಲ್ಲಿ ಬಿಆರ್‍ಸಿ ಮೌನೇಶ್, ಶಿಕ್ಷಣ ಸಂಯೋಜಕರು, ಇಸಿಓ ಈಶ್ವರಪ್ಪ, ಸಿಆರ್‍ಪಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap