ಹದಿಹರಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಹುಳಿಯಾರು:

     ಆರೋಗ್ಯ ಇಲಾಖೆ, ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹುಳಿಯಾರಿನ ಬಿ ಅಂಗನವಾಡಿ ಕೇಂದ್ರದಲ್ಲಿ ಹದಿಹರಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

   ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯರಾದ ಡಾ.ಚಂದನಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹದಿಹರಯದ ಹೆಣ್ಣುಮಕ್ಕಳಿಗೆ 11 ರಿಂದ 18 ನೇ ವಯಸ್ಸಿನ ತನಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಆಗುತ್ತದೆ. ಈ ಬೆಳವಣಿಗೆ ಸರಿಯಾಗಿ ಆಗಬೇಕಾದರೆ ಪೌಷ್ಠಿಕ ಆಹಾರ ಅವಶ್ಯಕವಾಗಿರುವುದರಿಂದ ಪ್ರೋಟಿನ್ ಮತ್ತು ಮಿಟಮಿನ್ ಯುಕ್ತ ಆಹಾರ ಅಗತ್ಯ ಎಂದರು.
ಹಿರಿಯ ಪುರುಷ ಆರೋಗ್ಯ ಸಹಾಯಕ ವೆಂಕಟರಾಮಯ್ಯ ಅವರು ಮಾತನಾಡಿ ಶುಚಿ ಪ್ಯಾಡ್‍ಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುತ್ತದೆ. ಈ ಪ್ಯಾಡ್‍ಗಳನ್ನು ಬಳಸಿದ ನಂತರ ಎಲ್ಲೆಂದರಲ್ಲಿ ಹಾಕದೆ ಸುಟ್ಟು ಹಾಕಬೇಕು ಎಂದರಲ್ಲದೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು ಇಲ್ಲವಾದಲ್ಲಿ ಜನನೇಂದ್ರಿಯ ಸೋಂಕು ಹರಡುತ್ತದೆ ಎಂದರು.

     ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಮ್ಮ ಅವರು ಮಾತನಾಡಿ ಇಚ್ಚೀಚಿನ ದಿನಗಳಲ್ಲಿ ಮಕ್ಕಳು ಕುರುಕುರೆ, ಲೇಸು, ಗೋಬ ಮಂಚುರಿ, ಫಿಜಾ ಬರ್ಗರ್ ಸೇವನೆ ಹೆಚ್ಚಾಗಿದ್ದು ಇದರಿಂದಾಗಿಯೇ 10 ವರ್ಷಕ್ಕೆ ಹಣ್ಣು ಮಕ್ಕಳು ರುತುಮತಿಗಳಾಗುತ್ತಿದ್ದಾರೆ. ಬಾಲ್ಯದಲ್ಲೇ ರುತುಮತಿಗಳಾಗುವುದನ್ನು ತಡೆಯಲು ಮಕ್ಕಳನ್ನು ಜಂಕ್ ಫುಡ್‍ಗಳಿಂದ ದೂರವಿಟ್ಟು ಚಿನಕುರುಳಿ, ಶೇಂಗಾಬೀಜ, ಕಡ್ಲೆ ಮಿಠಾಯಿ, ಎಳ್ಳು ಕೊಡಬೇಕು ಎಂದು ಸಲಹೆ ನೀಡಿದರು.

      ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ವೀಣಾ, ಅಂಗನವಾಡಿ ಕಾರ್ಯಕರ್ತೆಯರಾದ ಶಬನಾ ಯಾಸ್ಮೀನ್, ಆಶಾ ಕಾರ್ಯಕರ್ತೆ ಪುಷ್ಪ, ಅಬಿದಾಬೀ, ಮಹಬೂಬ್ ಜಾನ್, ಯಶೋಧ, ಶಿಕ್ಷಕರಾದ ಸಬಹ್ ಬಾನು, ರತ್ನಮಾಲಾ, ಸಲ್ಮಾ, ಮಂಜುಳಾಬಾಯಿ, ಭೂಮಿ ಸಂಜಿವಿನಿಯ ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link