ಎಸ್‍ಬಿಐ ಗ್ರಾಹಕರಿಗೆ ಜಾಗೃತಿ ಶಿಬಿರ

ತೋವಿನಕೆರೆ

        ತೋವಿನಕೆರೆ ಗ್ರಾಮದ ಎಸ್‍ಬಿಐ ಬ್ಯಾಂಕ್‍ನ ಗ್ರಾಹಕ ಸೇವಾ ಕೇಂದ್ರವಾದ ಧಮ್ಮಪದ ಇನ್ಫ್ಪೋಟೆಕ್‍ನಲ್ಲಿ ಸಾರ್ವಜನಿಕರಿಗೆ ಜಾಗೃತಿ ಶಿಬಿರ ಬುಧವಾರದಂದು ಏರ್ಪಡಿಸಲಾಗಿತ್ತು.

       ಗ್ರಾಹಕ ಸೇವಾ ಕೇಂದ್ರದಲ್ಲಿ ಎಸ್‍ಬಿಐ ಆರ್ಥಿಕ ಸಾಕ್ಷರತಾ ಅಧಿಕಾರಿಯವರು ಸಾರ್ವಜನಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಭಾರತೀಯ ಡೆಬಿಟ್ ಕಾರ್ಡ್ ರುಪೆ ಕಾರ್ಡ್ ಬಗ್ಗೆ ಸವಿವರವಾಗಿ ವಿಚಾರ ನೀಡುತ್ತಾ ಸಾರ್ವಜನಿಕರು, ಯುವಪೀಳಿಗೆ ಈ ಮೇಲ್ಕಂಡ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು.

        ಇಳಿವಯಸ್ಸಿನಲ್ಲಿ ಅನುಕೂಲವಾಗುವಂತಹ ಕೂಲಿಕಾರ್ಮಿಕರಿಗೆ, ಬೀಡಿಕಟ್ಟುವ ಕಾರ್ಮಿಕರಿಗೆ ರಿಕ್ಷಾ, ಜೀಪ್ ಮತ್ತು ಎಲ್ಲಾ ಡ್ರೈವರ್‍ಗಳಿಗೆ, ಟೈಲರ್‍ಗಳಿಗೆ ಎಲ್ಲಾ ಖಾಸಗಿ ಉದ್ಯೋಗಿಗಳಿಗೆ ಸ್ವಯಂ ಉದ್ಯೋಗಸ್ಥ್ತರಿಗೆ, ಖಾಸಗಿ ಶಿಕ್ಷಕ ಶಿಕ್ಷಕಿಯರಿಗೆ ಮತ್ತು ಎಲ್ಲಾ ಕೃಷಿ ಕಾರ್ಮಿಕರಿಗೆ ಹಾಗೇಯೆ ಎಲ್ಲಾ ವಲಯದ ಕೆಲಸ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಈ ಯೋಜನೆಗಳು ಅನುಕೂಲವಾಗಲಿವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಎಸ್‍ಬಿಐ ಆರ್ಥಿಕ ಸಾಕ್ಷರತಾ ಅಧಿಕಾರಿ ಶಿವಕುಮಾರ್ ತಿಳಿಸಿದರು.

       ರುಪೇ ಕಾರ್ಡ್‍ನ್ನು ಉಪಯೋಗಿಸಿ 2 ಲಕ್ಷದವರೆಗೆ ವಿಮೆಯನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಬ್ಯಾಂಕ್‍ನ ಇತರೆ ಸೇವೆಗಳಾದ ಪ್ರಧಾನಮಂತ್ರಿ ಜನ್‍ಧನ್ ಉಳಿತಾಯ ಖಾತೆ, ಮುದ್ರ್ರಾಯೋಜನೆಯ ಬಗ್ಗೆಯು ವಿವರಿಸಿದರು. ಎಸ್‍ಬಿಐ ಗ್ರಾಹಕ ಸೇವಾ ಕೇಂದ್ರವು ಉತ್ತಮ ಸೇವೆಯನ್ನು ನೀಡುತ್ತಿದೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಗ್ರಾಹಕ ಸೇವಾ ಕೇಂದ್ರದ ಬ್ಯಾಂಕ್ ಮಿತ್ರೆ ಗಿರಿಜಮ್ಮ, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕರಾದ ಶಾಮಚಂದ್, ಮಂಜುನಾಥ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link