ಬೆಂಗಳೂರು
ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಉತ್ತಮ ಕೊಡುಗೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀ ಪಾದ್ ಯೆಸ್ಸೋ ನಾಯಕ್ ಹೇಳಿದ್ದಾರೆ. ನಗರದಲ್ಲಿಂದು ನಡೆದ ರಾಷ್ಟ್ರೀಯ ಆರೋಗ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪದ್ದತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಲು 14 ರಾಷ್ಟ್ರಗಳು ಭಾರತದ ಜೊತೆ ಸಂಶೋಧನೆಗೆ ಕೈಜೋಡಿಸಿವೆ ಎಂದರು.
ಭಾರತೀಯ ಪುರಾತನ ವೈದ್ಯಕೀಯ ಪರಂಪರೆಗಳಾದ ಆಯುರ್ವೇದ ಸಿದ್ದ ಯೂನಾನಿ ಪದ್ಧತಿಗಳಿಗೆ ವಿದೇಶಿಯರು ಮಾರುಹೋಗುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ 160 ಕಾಲೇಜುಗಳ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮೇಳವನ್ನು ಆಯೋಜನೆ ಮಾಡಿರುವುಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಯುರ್ವೇದ ನಮ್ಮ ಋಷಿಮುನಿಗಳಿಂದ ಬಂದ ಕೊಡುಗೆಯಾಗಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ಮೇಲೆ ಭಾರತೀಯ ಆಯುರ್ವೇದ ಪದ್ಧತಿ ಜಗತ್ತಿನೆಲ್ಲೆಡೆ ವಿಸ್ತರಣೆಯಾಗಿದೆ. ಇದರ ಫಲವಾಗಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ನಮ್ಮ ಋಷಿಮುನಿಗಳು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಉತ್ತಮ ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಈಗ ಜಗತ್ತಿನ 14 ರಾಷ್ಟ್ರಗಳು ಭಾರತದ ಸಂಶೋಧನೆಗೆ ನೆರವಾಗಿ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಹಕರಿಸುತ್ತಿವೆ ಎಂದರು. 10 ರಾಷ್ಟ್ರಗಳ ಒಂದು ಸಾವಿರದ 747 ಪ್ರತಿಗಳು, 200 ಮಳಿಗೆಗಳನ್ನು ತೆರೆಯಲಾಗಿತ್ತು. 493 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದ್ದು, 30 ಪ್ರಮುಖ ಭಾಷಣಾಕಾರರು ಐದು ದಿನಗಳ ಕಾಲ ನಡೆದ ಮೇಳದಲ್ಲಿ ಭಾಗಿಯಾಗಿದ್ದರು. ರಾಜ್ಯ ಆಯುಷ್ ಇಲಾಖೆಯ ಆಯುಕೆ ಮೀನಾಕ್ಷಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








