ಬೆಂಗಳೂರು
ಪಾರಂಪರಿಕ ಔಷಧಿಗಳನ್ನು ಅಭಿವೃದ್ದಿ ಪಡಿಸಿ ರೋಗಿಗಳಿಗೆ ಅದರ ಲಾಭ ಸುಲಭವಾಗಿ ದೊರೆಯುವಂತೆ ಮಾಡಲು ಬೆಂಗಳೂರಿನಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಈಗಾಗಲೇ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸÀಲಾಗಲಿದ್ದು ಅದಕ್ಕಿತ ಹೆಚ್ಚಿನ ಸೌಲಭ್ಯವನ್ನು ಹೊಂದಿರುವ ಆಯುರ್ವೇದ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದು ಎಂದರು.
ನಗರದಲ್ಲಿಂದು ಆನಂದ ರಾವ್ ವೃತ್ತದ ಧನ್ವಂತರಿ ರಸ್ತೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯುಷ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ, 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪನೆ ಬಹು ದಿನಗಳ ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು.
ಆಯುರ್ವೇದ ನಮ್ಮ ದೇಶದ ಅತ್ಯಂತ ದೊಡ್ಡ ಕೊಡುಗೆ. ವಿಜ್ಞಾನ ಒಂದೆಡೆ ಮತ್ತೊಂದೆ ಇದು. ಬಹಳ ಸನಾತನ ಕಾಲ ಕ್ರಮೇಣದಲ್ಲಿ ಕಳೆದುಕೊಳ್ಳುವ ಸಂದರ್ಭದಲ್ಲಿ ಮರುಜೀವ ಕೊಡುತ್ತಿರುವುದು ಈ ಇಲಾಖೆ. ಏಕೆಂದರೆ ವಿಜ್ಞಾನ ಮತ್ತು ಆಯುರ್ವೇದಗೆ ವ್ಯತ್ಯಾಸವಿದೆ. ತ್ವರಿತ ವಾಗಿ ರೋಗ ನಿವಾರಣೆ ಜನ ಬಯಸುತ್ತಾರೆ ಎಂದು ತಿಳಿಸಿದರು.
ಯೋಗ ಕೂಡಾ ಆಯುರ್ವೇದದ ಕೊಡುಗೆ ಎಂಬಿಬಿಎಸ್ ವೈದ್ಯರ ಬಗ್ಗೆ ಬಹಳ ಬೇಡಿಕೆ ಇದೆ. ಆಯುರ್ವೇದ ವಿದ್ಯೆ ಪಾರಂಪರಿಕವಾಗಿ ವಿದ್ಯೆ ಹೊಂದಿದ್ದರೆ, ಮನುಷ್ಯ ಇದರ ಒಲವು ತೋರುತ್ತಾರೆ. ಆಯುಷ್ ಇಲಾಖೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಈ ಇಲಾಖೆಗೆ ನಾನು ಅಧಿಕಾರ ವಹಿಸಿಕೊಂಡ ಮೇಲೆ ಆಯುಕ್ತರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಆಯುರ್ವೇದ ದೇಶದ ಸಂಸ್ಕೃತಿ , ಜೀವನ ಶೈಲಿ. ಇದರ ಪ್ರಯೋಜನವಿದೆ. ಬಹಳಷ್ಟು ಜನ ಆಯುರ್ವೇದ ಚಿಕಿತ್ಸೆ ಹೊರ ದೇಶಗಳಿಂದ ಬರುತ್ತಿದ್ದಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಹತ್ತಿರವಾದ್ದದು ಆಯುರ್ವೇದ ಎಂದರು.
ಆದಷ್ಟು ನಾವು ಪ್ರಕೃತಿ ಚಿಕಿತ್ಸೆಗೆ ಮಾರುಹೋಗಬೇಕು. ಆಯುರ್ವೇದ ಶರೀರವನ್ನು ಮಾನಸಿಕ ಮತ್ತು ದೈಹಿಕ ಸದೃಢತೆಗೆ ಉಪಯೋಗಕಾರಿ. ಶರೀರದ ಎಲ್ಲ ಅಂಗಗಳನ್ನುಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಇನ್ನೂ, ಆಯುರ್ವೇದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶವಿದೆ ಎಂದ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ ವರ್ಮಾ, ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ, ವಿವಿಯ ಪ್ರಾಚಾರ್ಯ ಡಾ.ಎಸ್.ಅಹಲ್ಯಾ ಸೇರಿದಂತೆ ಪ್ರಮುಖರಿದ್ದರು.