ಚಿತ್ರದುರ್ಗ:
ಆಯುರ್ವೇದ ಔಷಧಿಗಳಿಂದ ಮನುಷ್ಯನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ|| ಪ್ರಶಾಂತ್ ಹೇಳಿದರು. ದಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ ಮತ್ತು ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ವಿಶೇಷಚೇತನರ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ|| ಪ್ರಶಾಂತ್‍ರವರು, ವೈದ್ಯಕೀಯಕ್ಷೇತ್ರ ಸಾಕಷ್ಟು ಪ್ರಗತಿಯಾಗಿದ್ದು, ಆ ಮಧ್ಯೆಯೂ ಸಹ ಆಯುರ್ವೇದಔಷಧಿಯನ್ನು ಬಳಕೆ ಮಾಡುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದುಎಂದು ಹೇಳಿದರು.ಅಂಗವಿಕಲರು (ವಿಶೇಷಚೇತನರು)ರಿಗೆಆಯುರ್ವೇದ ಔಷಧಿಗಳನ್ನು ಉಪಚರಿಸುವ ಮೂಲಕ ಮಕ್ಕಳಲ್ಲಿರುವ ಸಣ್ಣಪುಟ್ಟ ಕಾಯಿಲೆಗಳನ್ನು ನಿವಾರಣೆ ಮಾಡುವುದರೊಂದಿಗೆಆರೋಗ್ಯವಂತರನ್ನಾಗಿ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬರುಆಯುರ್ವೇದ ಔಷದಿಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾಆಸ್ಪತ್ರೆಯ ಫಿಜಿಯೋತೆರಫಿಡಾ|| ಸಂತೋಷ ಮಾತನಾಡಿ, ವಿಕಲಚೇತನ ಮಕ್ಕಳಿಗೆ ಫಿಜಿಯೋತೆರಪಿಯನ್ನು ಮಾಡುವ ಮೂಲಕ ಆರೋಗ್ಯ ಸುಧಾರಣೆ ಮಾಡಲು ಸಾಧ್ಯವಿದ್ದು, ವೈದ್ಯರು ನೀಡಿದ ಸಲಹೆಯನ್ನು ಪೋಷಕರುಅನುಸರಿಸುವ ಮೂಲಕ ಮಕ್ಕಳಲ್ಲಿನ ಅಂಗವೈಕಲ್ಯತೆಯನ್ನು ನಿವಾರಿಸಬಹುದೆಂದು ಸಲಹೆ ನೀಡಿದರು.
ವಿಮುಕ್ತಿ ವಿದ್ಯಾಸಂಸ್ಥೆಯ ನಿದೇರ್ಶಕರಾದಆರ್. ವಿಶ್ವಸಾಗರ್ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಮನುಷ್ಯ ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಉಂಟಾಗುವಂತಹ ವಿಕಲಚೇತನರನ್ನುಆತ್ಮಸ್ಥೈರ್ಯತುಂಬಿ ಆರೋಗ್ಯವಂತರನ್ನಾಗಿ ಮಾಡಲು ಸಾಧ್ಯವಿದೆ . ಅದರೊಂದಿಗೆ ಮಕ್ಕಳಿಗೆ ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಿ, ಆರೋಗ್ಯಾಧಿಕಾರಿಗಳಿಂದ ಸಲಹೆ ಪಡೆದು, ಆರೋಗ್ಯವನ್ನು ಕಾಪಾಡಿಕೊಂಡರೆ ಮಕ್ಕಳ ಭವಿಷ್ಯವನ್ನುಉತ್ತಮವಾಗಿರೂಪಿಸಬಹುದುಎಂದು ಹೇಳಿದರು.
ಆರೋಗ್ಯತಪಾಸಣೆ ಮತ್ತುಉಚಿತಔಷಧಿ ವಿತರಣಾ ಸಮಾರಂಭದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ, ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್, ಗುರುರಾಜ್, ಜಯಶ್ರೀ, ಕುಮಾರ್ ಮತ್ತು ಬೀರಾವರ, ಕಳ್ಳಿಹಟ್ಟಿ, ಕುರುಬರಹಟ್ಟಿ, ತಮಟಕಲ್ಲು, ಚಿಕ್ಕಗೊಂಡನಹಳ್ಳಿ, ಮಠದಹಟ್ಟಿ, ಮಲ್ಲಾಪುರ ಗ್ರಾಮಗಳಿಂದ ಪೋಷಕರು ಮತ್ತು ವಿಕಲಚೇತನ ಮಕ್ಕಳು ಭಾಗವಹಿಸಿದ್ದರು.