ಚಿತ್ರದುರ್ಗ
ಮಕರ ಸಂಕ್ರಾಂತಿಯ ಅಂಗವಾಗಿ ನಗರದ ಮೇದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನವರು ಸ್ವಾಮಿಗೆ ಧರಿಸುವ ವಿವಿಧ ರೀತಿಯ ಆಭರಣಗಳನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು.
ನಗರದ ಆನೆಬಾಗಿಲು ಗಣಪತಿದೇವಾಲಯದಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಭವ್ಯವಾದ ಆಭರಣ ಮೆರವಣಿಗೆ ಪ್ರಾರಂಭವಾಗಿ ವಾಸವಿ ಮಹಲ್ ರಸ್ತೆ, ಗೋಪಾಲಪುರ ರಸ್ತೆ, ಎನ್ ಹೆಚ್ 4 ಮೆಖಾಂತರ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಯ್ಯಪ್ಪ ಸ್ವಾಮಿ ಮಾಲಾಧರಿಗಳು ಸ್ವಾಮಿಯ ಘೋಷಣೆಗಳನ್ನು ಕೂಗುವುದರ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧಕ್ಷ ಶರಣ್ ಕುಮಾರ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ಕಾರ್ಯದರ್ಶೀ ಎಂ ಪಿ ವೆಂಕಟೇಶ ಐಶ್ವರ್ಯ ಗ್ರೂಪ್ಸ್, ಅರುಣ್ ಕುಮಾರ್ ಉಪಸ್ಥಿತರಿದ್ದರು. ಸಂಜೆ 19ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
