ಚಳ್ಳಕೆರೆ
ಶೈಕ್ಷಣಿಕ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೆಚ್ಚಿನ ಪರಿಶ್ರಮದಿಂದ ಅಭ್ಯಾಸ ನಡೆಸಬೇಕು. ನೀವು ಕಲಿಯುವ ಶಿಕ್ಷಣ ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ಅದ್ದರಿಂದ ಕಲಿಕೆಯ ಹಂತದಲ್ಲಿ ನೀರಾಸಕ್ತಿ ತಾಳದೆ ಸದಾ ಉತ್ಸಾಹದಿಂದ ಶಿಕ್ಷಣವನ್ನು ಕಲಿಯಬೇಕೆಂದು ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಓ.ಬಾಬುಕುಮಾರ್ ತಿಳಿಸಿದರು.
ಅವರು, ಮಂಗಳವಾರ ತಮ್ಮ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಶಿಕ್ಷಣವನ್ನು ಕಲಿತು ಬಿಡುಗಡೆಯಾಗುವ ವಿದ್ಯಾರ್ಥಿಗಳ ಬೀಳ್ಕೊಡಿಯ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ನಿಮಗೆ ಶಿಕ್ಷಣವನ್ನು ನೀಡಿದ್ದೇವೆ. ಶಿಕ್ಷಣ ನೀಡಿದ್ದೇವೆಂಬ ಹೆಮ್ಮೆಗಿಂತ ಮಿಗಿಲಾಗಿ ನೀವು ಶಿಕ್ಷಣದಿಂದ ಗುಣಾತ್ಮಕ ಬದುಕು ರೂಪಿಸಿಕೊಂಡಲ್ಲಿ ನಮ್ಮ ಎಲ್ಲಾ ಪ್ರಾಧ್ಯಾಪಕ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ, ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಎನ್ನದೆ ನಿಮಗೆಲ್ಲಾ ಸ್ನೇಹಿತರು ಎಂಬ ಭಾವನೆಯಿಂದ ನಾವು ಶಿಕ್ಷಣ ನೀಡಿದ್ದೇವೆ. ನಮ್ಮ ಶಿಕ್ಷಣದ ಗೌರವ ಉಳಿಯಬೇಕಾದಲ್ಲಿ ನೀವೆಲ್ಲರೂ ಮುಂದಿನ ನಿಮ್ಮ ಭವಿಷ್ಯವನ್ನು ಹೆಚ್ಚು ಪರಿಶ್ರಮದಿಂದ ಸಾರ್ಥಕಗಳಿಸಿಕೊಂಡಲ್ಲಿ ಮಾತ್ರ. ಕಳೆದ ಮೂರು ವರ್ಷಗಳಿಂದ ನಿವೆಲ್ಲರೂ ಎಲ್ಲಾ ಪ್ರಾಧ್ಯಾಪಕರಿಗೆ ಉತ್ತಮ ಗೌರವವನ್ನು ನೀಡಿ ಶಿಕ್ಷಣ ಪಡೆದಿದ್ದೀರಿ, ಯಾವ ವಿದ್ಯಾರ್ಥಿ ಪರಿಶ್ರಮಕ್ಕೆ ವಿನಯಕ್ಕೆ ಗೌರವವ ನೀಡುತ್ತಾನೋ ಅವನು ಸದಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಾನೆಂದರು.
ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಮಂಜುನಾಥ, ನಮಗೆ ಮೂರು ವರ್ಷಗಳಿಂದ ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಜಾಗೃತಿಗೊಳಿಸಿ ಅಭ್ಯಾಸದಲ್ಲಿ ತೊಡಗುವಂತೆ ಮಾಡುವಲ್ಲಿ ಪ್ರಾಧ್ಯಾಪಕರ ಶ್ರಮ ಮೆಚ್ಚುವಂತಹದ್ದು. ಯಾವುದೇ ಸಂದರ್ಭದಲ್ಲಿ ಯಾವ ವಿಷಯವನ್ನೇ ಕೇಳಲಿ ಸಂಬಂಧಪಟ್ಟ ಪ್ರಾದ್ಯಾಪಕರು ಮಾರ್ಗದರ್ಶನ ನೀಡುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಿ.ಕರಿಯಣ್ಣ, ವಿ.ಚಂದ್ರಶೇಖರ್, ಜೆ.ತಿಪ್ಪೇಸ್ವಾಮಿ, ಎಚ್.ಆರ್.ಮುಜೀಬುಲ್ಲಾ, ಆರ್.ಎಸ್. ಉಮೇಶ್ , ಚಂದ್ರಶೇಖರ್, ಭಾಗ್ಯಲಕ್ಷ್ಮಿ, ಎ.ತಿಪ್ಪೇಸ್ವಾಮಿ, ಮುರಳಿ ಯರ್ರಿಸ್ವಾಮಿ, ಶಬ್ಬಿರ್, ಎಚ್.ಮಹಲಿಂಗಪ್ಪ, ರಾಜೇಶ್ ಮೊದಲಾದವರು ಇದ್ದರು.