ಗಿಡ- ಗಂಟೆ ತುಂಬಿದ ಪುರಾತನ ಕಾಲದ ಬಾಗೂರು ಬಸವನ ಬಾವಿ
ಹೊಸದುರ್ಗ:

ವಿಶೇಷ ವರದಿ: ಚಿಕ್ಕಪ್ಪನಹಳ್ಳಿ ಸೋಮು
ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಹಿಂದೊಮ್ಮೆ ಕುಡಿಯುವ ನೀರು ಒದಗಿಸುತ್ತಿದ್ದ ಪುರಾತನ ಬಾಗೂರು ಬಸವನ ಬಾವಿ ಇಂದು ಗಿಡ-ಗಂಟೆ ತುಂಬಿ ಮದ್ಯಪಾನ ಮಾಡುವವರಿಗೆ ಏಳು ಮಾಡಿಸಿದ ಜಾಗವಾಗಿ ಪರಿಣಾಮಿಸುತ್ತಿದೆ. ಈ ಬಾವಿಯನ್ನು ಅಭಿವೃದ್ದಿ ಮತ್ತು ಪುನಶ್ಚೇತನಗೊಳಿಸಲುಊರಿನ ಗ್ರಾಮಸ್ಥರು ಮಹಾದಾಸೆ ಇಟ್ಟುಕೊಂಡಿದ್ದು ತಾಲ್ಲೂಕು ಆಡಳಿತ ಇತ್ತ ಕಡೆ ಗಮನ ಹರಿಸಬೇಕಾಗಿದೆ.
ಈ ಬಾವಿಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು, ಜಾಲಿ ಮುಳ್ಳುಗಳು ಸುತ್ತಲೂ ಆವರಿಸಿದೆ.ಜನ, ಜಾನುವಾರಗಳ ದಾಹ ತಣಿಸಲು ಅಂತರ್ಜಲ ಮಟ್ಟ ಹೆಚ್ಚಿಸಲು ವಿಗ್ರಹಗಳ ಪೂಜೆಗೆ ಅನುಕೂಲಕ್ಕಾಗಿ ನಮ್ಮ ಹಿರಿಯರು ಬಾವಿಗಳನ್ನು ಮುಂದಿನ ಪೀಳಿಗೆಗೂ ಜಲಕ್ಷಾಮ ಎದುರಾಗದಂತೆ ಬಾವಿ ನಿರ್ಮಿಸಿದ್ದಾರೆ. ಆದರೆ ಇಂದಿನ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೊಳಗಾಗಿ ತಿಪ್ಪೆಗುಂಡಿ ಎನ್ನುವಷ್ಟು ಮಲೀನಗೊಳಿಸಿದೆ.
ಗ್ರಾ.ಪಂ ಹೂಳು ತೆಗೆದಿಲ್ಲ:ನೂರಾರು ವರ್ಷಗಳಷ್ಟು ಹಿಂದಿನ ಈ ಬಾವಿಯು ಸುಮಾರು 20-30 ಅಡಿ ಆಳದಷ್ಟಿದೆ ಎಂದು ಭಾವಿಸಲಾಗಿದ್ದು ಇದರ ಅಂತಿಮ ಆಳದವರೆಗೂ ತುಂಬಿದ ಹೂಳನ್ನು ತೆಗೆಸಿ ಈ ಬಾವಿಗೆ ಪುನರ್ಜೀವ ನೀಡುವ ಕಾಯಕಲ್ಪ ಮಾಡಬೇಕಾಗಿದೆ. ಏಕೆಂದರೆ ಅಂತರ್ಜಲದಿಂದ ನೀರಿನ ಸೆಲೆಯು ಸಾಕಷ್ಟು ಪ್ರಮಾಣದಲ್ಲಿ ಪುಟಿಯುತ್ತಿದೆ. ಎಂತಹ ಬರಗಾಲ ಬಿದ್ದಾಗಲೂ ಈ ಬಾವಿಯು ಬತ್ತಿಯೇ ಇಲ್ಲ. ಇಂತಹ ಸುತ್ತಮುತ್ತ ಬೆಳೆದಿರುವ ಗಿಡಗಳನ್ನು ತೆಗೆಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮಸ್ಥರಾದ ಹಿರಿಯ ಸಾಹಿತಿ ಬಾಗೂರು ನಾಗರಾಜಪ್ಪನವರು.
ಮಳೆ ನೀರು ಕೊಯ್ಲು ಅಳವಡಿಸಿ:ನೀರು ಉಳಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆ ನೀರು ಕೊಯ್ಲು ಅಳವಡಿಸಿ ಎಂದು ಬೊಬ್ಬೆ ಹೊಡೆಯುವ ಆಡಳಿತ ವ್ಯವಸ್ಥೆಯು ಅನಾದಿ ಕಾಲದಿಂದ ಅಂತರ್ಜಲ ಮಟ್ಟ, ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಕಾಳಜಿ ಹೊಂದಿದ ಹಿಂದಿನ ಹಿರಿಯರು ನಿರ್ಮಿಸಿದ ಬಾವಿಯಲ್ಲಿನ ಹೂಳು ತೆಗೆಯಬೇಕಾಗಿದೆ. ಸುತ್ತಲು ಕಟ್ಟಿರುವ ಕಲ್ಲಿನ ಗೋಡೆ ಶಿಥಿಲಾವಸ್ಥೆ ತಲುಪಿದ್ದರೆ, ಮೆಟ್ಟಿಲುಗಳು ಬಿದ್ದುಹೋಗಿದ್ದು ಅವುಗಳನ್ನು ಸರಿಪಡಿಸಿ ಹಿರಿಯರು ಮಾಡಿದ ಶ್ರಮಕ್ಕೆ ಇಂದಿನವರು ತಕ್ಕ ನಿರ್ವಹಣೆ ಮಾಡಬೇಕಾದ ತುರ್ತು ಅಗತ್ಯತೆಯಿದೆ.
ಹೂಳೆತ್ತಲು ಯುವಕರು ಮನವಿ:ಮಧು, ಅನಿಲ್, ದಿನೇಶ್, ಅಕ್ಷಯ್, ಅಂಬೂ, ಸಂಜು ಹೋವಳೆ, ಮುರುಳಿ, ಮಾರುತಿ ಮುಂತಾದವರು ಬಾವಿಯ ಹೂಳು ತೆಗೆಸಬೇಕೆಂದು ಮನವಿ ಮಾಡುತ್ತಿದ್ದಾರೆ. ಕಲ್ಲು ಬಾವಿ ಸುತ್ತಲಿನ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
