ಹುಳಿಯಾರಿನಲ್ಲಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆ

ಹುಳಿಯಾರು

        ರಾಷ್ಟ್ರೀಯ ನಾಟಕೋತ್ಸವ, ರಾಷ್ಟ್ರೀಯ ಜನಪದೋತ್ಸವ ಹೀಗೆ ರಾಷ್ಟ್ರಮಟ್ಟದ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹುಳಿಯಾರು ಸಾಂಸ್ಕತಿಕವಾಗಿ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆಯುತ್ತಿದೆ ಎಂದು ಸಂಸದ ಎಸ್.ಪಿ.ಮುದ್ಧಹನುಮೇಗೌಡ ಅವರು ತಿಳಿಸಿದರು.

        ಹುಳಿಯಾರು ಕೋಡಿಪಾಳ್ಯದ ಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 6 ದಿನಗಳ ಕಾಲದ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕೋತ್ಸವದ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

       ಒಂದು ಊರು ಸಾಂಸ್ಕøತಿಕವಾಗಿ ಬೆಳೆದರೆ ಆ ಊರು ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಶ್ರೀ ಮಾತಾ ಟ್ರಸ್ಟ್‍ನ ಗಂಗಾಧರ್ ಅವರು ಜಿಲ್ಲಾ ಕೇಂದ್ರದಲ್ಲೇ ಇಲ್ಲದ ಭವ್ಯ ರಂಗಮಂದಿರ ಕಟ್ಟಿ ರಾಷ್ಟ್ರದ ನಾನಾ ಜಿಲ್ಲೆಗಳ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಗಂಗಾಧರ್ ಅವರ ಬೆಂಬಲಕ್ಕೆ ನಿಂತೂ ಸ್ಥಳೀಯವಾಗಿಯೂ ಸಹ ರಂಗ, ನೃತ್ಯ, ಸಂಗೀತ ಹೀಗೆ ವಿವಿಧ ಸಾಂಸ್ಕತಿಕ ತಂಡಗಳು ಸಿದ್ಧವಾದರೆ ರಾಷ್ಟ್ರದ ಭೂಪಟದಲ್ಲಿ ಹುಳಿಯಾರು ಅಚ್ಚಳಿಯದೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯರು ಮುಂದಾಗಬೇಕಿದೆ ಎಂದರು.

         ಇಂದಿನ ತಂತ್ರಜ್ಞಾನ, ಮಾನವನ ಮಾನಸಿಕ ಒತ್ತಡ ನೆಮ್ಮದಿಗೆ ಭಂಗ ತರುತ್ತಿದೆ. ಅನಗತ್ಯವಾಗಿ ಬೇರೆ ವಿಷಯಗಳ ಚರ್ಚೆಯಿಂದ ಮನಸ್ಸಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಿಂದಿನ ಕಾಲದಲ್ಲಿ ಕಲೆ, ಸಾಹಿತ್ಯ ವಿಷಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ಜತೆಗೆ ಬಾಳಿಗೆ ದಾರಿದೀಪವಾಗಿದ್ದವು ಎಂದು ಹೇಳಿದರು.

         ಈ ಸಂದರ್ಭದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರ್ ಇದರ ಕರ್ನಾಟಕದ ಪ್ರತಿನಿಧಿ ನಂಜುಂಡಸ್ವಾಮಿ ತೊಟ್ಟವಾಡಿ, ಶ್ರೀಮಾತಾ ಟ್ರಸ್ಟ್‍ನ ಅಧ್ಯಕ್ಷ ಗಂಗಾಧರ್, ರೈತ ಮುಖಂಡ ಕೆಂಕೆರೆ ಸತೀಶ್, ನಾಟಕ ಅಕಾಡೆಮಿ ಸದಸ್ಯ ವಿಠಲ್, ಹಿರಿಯ ರಂಗಕರ್ಮಿ ಜನಾರ್ಧನ್, ಬ್ಯಾಂಕ್ ಮರುಳಪ್ಪ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap