ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

ಕುಣಿಗಲ್

    ಸಮಾಜದಲ್ಲಿ ಬಾಲಕಾರ್ಮಿಕ ಪದ್ದತಿಯಿಂದ ವಿದ್ಯಾರ್ಥಿಗಳು ಎಚ್ಚರವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ರಾಘವೇಂದ್ರ ಅವರು ಕರೆ ನೀಡಿದರು.

    ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಜಾಗೃತಿ ಮತ್ತು ಅರಿವು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, 14 ವರ್ಷಗಳಿಂದ 18 ವರ್ಷದ ಒಳಗಿರುವ ಮಕ್ಕಳು ಶಾಲೆಯನ್ನ ಬಿಟ್ಟು ಗ್ಯಾರೇಜ್,ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳನ್ನ ವಿದ್ಯಾರ್ಥಿಗಳು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ,ಅಂತಹವರ ಮೇಲೆ ಕಠಿಣ ಕಾನೂನು ಜರುಗಿಸಲಾಗುವುದು.

    ವಿದ್ಯಾರ್ಥಿಗಳ ದೆಸೆಯಲ್ಲಿ ಮೋಜು ಮಸ್ತಿ ಮಾಡಲು ಹಣ ಬೇಕಾಗಿರುವುದರಿಂದ,ಇಂತಹ ಸಣ್ಣ-ಪುಟ್ಟ ಕೆಲಸಗಳಿಗೆ ವಿನಿಯೋಗಿಸಿಕೊಳ್ಳುತ್ತಾರೆ.ಈ ಬಗ್ಗೆ ಜಾಗೃತಿ ವಹಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಬೇಕಾಗಿದೆ ಎಂದರು. ಸಿವಿಲ್ ನ್ಯಾಯಾಧೀಶರಾದ ಅನಿತಾ ಒ.ಎ. ಮಾತನಾಡಿ,ದೇಶದಲ್ಲಿ ಸಧೃಡ ಸಮಾಜ ಕಟ್ಟಲು ಬಾಲಕಾರ್ಮಿಕರ ಬಳಕೆಯಾಗುತ್ತಿರುವುದು ವಿರೋಧಿ ನೀತಿಯಾಗಿದ್ದು,ಇವುಗಳ ಬಗ್ಗೆ ಜಾಗೃತಿ ವಹಿಸಿ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ನಿಯೋಜಿಸಬೇಕಾಗಿದೆ ಎಂದರು.

     ತಹಸೀಲ್ದ್ದಾರ್ ವಿಶ್ವನಾಥ್,ವಕೀಲರ ಸಂಘದ ಅಧ್ಯಕ್ಷ ಎಂ.ಹುಚ್ಚೇಗೌಡ,ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಕೃಷ್ಣ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ,ಬಿಇಓ ತಿಮ್ಮರಾಜು,ಕಾರ್ಮಿಕ ನಿರೀಕ್ಷಕರಾದ ಅನುಪಮಾ, ಪಿಎಸ್‍ಐ ಮಂಜು ಸೇರಿದಂತೆ ಅನೇಕ ಶಾಲಾ ಮಕ್ಕಳು ಉಪಸ್ಥಿತರಿದ್ದರು. ನ್ಯಾಯಾಲಯದ ಆವರಣದಿಂದ ವಿವಿಧ ಘೋಷಣೆ ಕೂಗುತ್ತ ಶಾಲಾ ಮಕ್ಕಳು ತಾಲ್ಲೂಕು ಕಚೇರಿಯವರೆ ಮೆರವಣಿಗೆ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap