ಮನಿಪಾಲ್ ಗ್ರೂಪ್ ಗೆ ವಂಚನೆ : ಬಾಲಂಬಾಲ್ ವಿರುದ್ದ ವಾರೆಂಟ್ ಜಾರಿ..!!

ಬೆಂಗಳೂರು

        ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್ (ಎಂಇಎಂಜಿ)ಗೆ 70 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಪ್ರಕರಣದ 7ನೇ ಆರೋಪಿ ಚೆನ್ನೈ ಮೂಲದ ಎಸ್.ಬಾಲಂಬಲ್ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

       ಇದೇ ವೇಳೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ 6ನೇ ಆರೋಪಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಗುರುರಾಜ್ ಸಂಬಂಧಿ ಕಾರ್ತಿಕ್ ಪಾಂಡುರಂಗಿಯನ್ನು ಘೋಷಿತ ಅಪರಾಧಿ ಎಂದು ಆದೇಶಿಸಿದ್ದು ಆತನ ಬಂಧನಕ್ಕೆ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗಿದೆ.

       ಚೆನ್ನೈ ಮೂಲದ ಬಾಲಂಬಲ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಗುರುರಾಜ್ ಆತ್ಮೀಯರಾಗಿದ್ದು , ಎರಡೂವರೆ ಕೋಟಿ ರೂ.ಗಳನ್ನ ಸಂದೀಪ್ ಗುರುರಾಜ್ ಆಕೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ.ಕೃತ್ಯಕ್ಕೂ ಕೆಲ ದಿನಗಳ ಮೊದಲು ಆರೋಪಿ ಗುರುರಾಜ್ ಚೆನ್ನೈನ ರೆಸಾರ್ಟ್ವೊಂದರಲ್ಲಿ ಬಾಲಂಬಲ್ ಹಾಗೂ ಆಕೆಯ ಪತಿಯನ್ನು ಭೇಟಿಯಾಗಿ ಕೆಲ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, ಬೆಂಗಳೂರು ಮತ್ತು ಚೆನ್ನೈನ ಕೆಲವೆಡೆ ಹೂಡಿಕೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.

       7 ನೇ ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ಎಂಇಎಂಜಿಯಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸಂದೀಪ್ ಗುರುರಾಜ್ 70 ಕೋಟಿ ರೂ. ವಂಚನೆ ಮಾಡಿದ್ದ. ಸಂಸ್ಥೆಯ ಲೆಕ್ಕ ಪರಿಶೋಧನೆ ವೇಳೆ ವಂಚನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಡಿ. 26 ರಂದು ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

      ಈ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ಸಂದೀಪ್ ಗುರುರಾಜ್, 2ನೇ ಆರೋಪಿ ಚಾರುಸ್ಮಿತ, ಅಮ್ರಿತಾ ಚಂಗಪ್ಪ ಹಾಗೂ ಮೀರಾ ಚಂಗಪ್ಪರನ್ನು ಬಂಧಿಸಿದ್ದು, ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ದರು. 3ನೇ ಆರೋಪಿ ವಿಶಾಲ್ ಸೋಮಣ್ಣ ತಲೆಮರೆಸಿಕೊಂಡಿದ್ದಾನೆ. ಹೆಚ್ಚಿನ ತನಿಖೆ ವೇಳೆ ಬಾಲಂಬಲ್ ಹಾಗೂ ಕಾರ್ತಿಕ್ ಪಾಂಡುರಂಗಿ ಪಾತ್ರ ಬಯಲಾಗಿತ್ತು ಎಂದು ಪೊಲೀಸರು ಹೇಳಿದ್ದರು.

       ಈ ನಡುವೆ ಆರೋಪಿ ಸಂದೀಪ್ ಗುರುರಾಜ್ ಹತ್ತಿರದ ಸಂಬಂಧಿಕಾರ್ತಿಕ್ ಪಾಂಡುರಂಗಿ ಕೋಟ್ಯಂತರ ರೂ. ಲಾಭ ಪಡೆದುಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವುದು ಖಚಿತವಾಗಿರುವುದರಿಂದ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಕಬ್ಬನ್ಪಾರ್ಕ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link