ಹುಳಿಯಾರು
ಹುಳಿಯಾರಿನ ದೇವಾಂಗ ಮಂಡಳಿ, ಬನದ ಹುಣ್ಣಿಮೆ ದೇವಾಂಗ ಯುವಕ ಸಂಘ, ಬನಶಂಕರಿ ದೇವಸ್ಥಾನ ಸಮಿತಿ ವತಿಯಿಂದ ಬನದ ಹುಣ್ಣಿಮೆ ಕಾರ್ಯಕ್ರಮವು ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
ಬನದ ಹುಣ್ಣಿಮೆ ಅಂಗವಾಗಿ ಇಲ್ಲಿನ ಬಶಂಕರಿ ದೇವಾಲಯವನ್ನು ತಳಿರು ತೋರಣ, ಬಾಳೆಕಂದು, ಬಗೆಬಗೆಯ ಹೂವಿನಿಂದ ಸಿಂಗರಿಸಲಾಗಿತ್ತು. ಶ್ರೀ ಬನಶಂಕರಿ ಅಮ್ಮನವರಿಗೆ ಕುಂಕುಮಾರ್ಚನೆ, ಅಭಿಷೇಕ, ಸಹಸ್ತ್ರನಾಮಾರ್ಚನೆ ಮತ್ತಿತರ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿ ಅಮ್ಮವನರಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಹ ನಡೆಸಲಾಯಿತು.
ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ ಹೋಮ ನಡೆಸಿ ಪಂಚದ್ರವ್ಯಗಳಿಂದ ಅಮ್ಮನವರಿಗೆ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿತ್ತು. ಮುತ್ತೈದೆಯರಿಗೆ ಹಾಗೂ ಪುಟ್ಟ ಹೆಣ್ಣು ಮಗುವಿಗೆ ಬಾಗಿನ ಕೊಟ್ಟು, ಅಮ್ಮನವರಿಗೆ ಆರತಿ ಸೇವೆ, ಮಡಿಲಕ್ಕಿ ಸೇವೆ, ಭಜನೆ ಹಾಗೂ ಉಯ್ಯಾಲೋತ್ಸವವನ್ನು ನಡೆಸಿ ಪ್ರಸಾದ ವಿನಿಮಯ ಮಾಡಿ ಬನದಹುಣ್ಣಿಮೆಗೆ ತೆರೆ ಎಳೆಯಲಾಯಿತು.
ಈ ಸಂದರ್ಭದಲ್ಲಿ ಬನದಹುಣ್ಣಿಮೆ ಸಂಘದ ನವೀನ್, ಶಂಕರ್, ರಂಗನಾಥ್, ದೇವಾಂಗ ಮಂಡಳಿಯ ಅನಂತಕುಮಾರ್, ದಾಸಪ್ಪ, ಲೋಕೇಶ್, ಕೇಶವ ಮೂರ್ತಿ, ಆರ್.ಕೆ.ಕುಮಾರ್, ಬಳೆಕುಮಾರ್, ಜಯಲಕ್ಷಮ್ಮ, ರಾಜಗೋಪಾಲ್, ಬ್ಯಾಂಕ್ ಲಕ್ಷ್ಮೀಕಾಂತ್, ಶೇಖರಣ್ಣ, ಧನಂಜಯ್ಯ, ಪುಟ್ಟರಾಜು, ಎಚ್.ಎಸ್.ಮಂಜುನಾಥ್, ನಾಗರಾಜು ಸೇರಿದಂತೆ ದೇವಾಂಗ ಸಮುದಾಯದವರು ಹಾಗೂ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
