ತಿಪಟೂರು
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಗುಡಿಗೊಂಡನಹಳ್ಳಿಯಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 20ಕ್ಕೂ ಹೆಚ್ಚು ಲೋಡ್ ರಾಗಿ ಸಮೇತ ಹುಲ್ಲು ಮತ್ತು ಒಂದು ದ್ವಿಚಕ್ರವಾಹನ ಸಂಪೂರ್ಣವಾಗಿ ಭಸ್ಮವಾಗಿದ ಘಟನೆ ವರದಿಯಾಗಿದೆ.
ಮಹಾಲಿಂಗಪ್ಪನವರ ಗುಡಿಗೊಂಡನಹಳ್ಳಿ ಸರ್ವೇ ನಂ : 100/3ರಲ್ಲಿ ಬೆಳದ ರಾಗಿಯು ಸುಮಾರು 1.5 ರಿಂದ 2 ಲಕ್ಷ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಟ್ಯಾಂಕರ್ನಲ್ಲಿ ನೀರುತಂದು ಬೆಂಕಿನಂದಿಸಲು ಪ್ರಯತ್ನಿಸಿದ್ದು, ಅಗ್ನಿಶಾಮಕ ವಾಹನವು ಬರುವ ವೇಳೆಗೆ ಬವಣೆ ಭಾಗಶಃ ಭಸ್ಮವಾಗಿದೆ. ಪ್ರಕರಣ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ