ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಿಟ್ಟೂರು ಹೋಬಳಿಯ ಸಾಗಸಂದ್ರ ಗ್ರಾಮದಿಂದ ಬಂಡನಹಳ್ಳಿ ಹೋಗುವ ರಸ್ತೆ ತುಂಬ ಹದ್ದಗೆಟ್ಟಿದೆ. ಸುಮಾರು ದಿನಗಳಿಂದ ಸುರಿದ ಮಳೆಯಿಂದ ಬಂಡನಹಳ್ಳಿ ರಸ್ತೆ ಕೆಸರು ಗದ್ದೆಯಾಗಿ ಪರಿಣಮಿಸಿದೆ .
ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ರಸ್ತೆಯಲ್ಲಿ ಓಡಾಡಲು ತುಂಬ ಕಷ್ಠವಾಗಿದೆ. ಈ ರಸ್ತೆಯಲ್ಲಿ ಸಾಕಷ್ವು ವಾಹನಗಳು, ದ್ವಿಚಕ್ರ ವಾಹನಗಳು ಚಲಿಸುತ್ತೇವೆ ಆದರೆ ಮಳೆಯಿಂದ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಹೋಗಲು ತಲೆನೋವಾಗಿದೆ. ಎಷ್ವು ಸರಿ ಈ ರಸ್ತೆಯ ಕೆಸರಿನಲ್ಲಿ ಬಿದ್ದು ಎದ್ದು ಹೋಗಿರುವು ಘಟನೆಗಳು ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳ ಕಣ್ಣಿಗೆ ಕಂಡರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ,
ದ್ವಿಚಕ್ರ ವಾಹನ ಸವಾರಿಗೆ ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವೆ ಇಲ್ಲದಂತಾಗಿದೆ. ದ್ವಿಚಕ್ರ ವಾಹನಗಳ ಚಕ್ರಕ್ಕೆ ಕೆಸರು ಮಣ್ಣು ತುಂಬಿಕೊಡು ಎಷ್ವು ಜನ ಬಿದ್ದು ಹೋಗಿರುವ ಘಟನೆಗಳು ನಡೆದಿದೆ. ಅಲ್ಲದೆ ಶಾಲಾ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಹೋಗುತ್ತಾರೆ.ಬಂಡನಹಳ್ಳಿ ರಸ್ತೆಯಲ್ಲಿ ಎತ್ತಿನಹೊಳೆ ಕಾಮಾಗಾರಿ ನಡೆಯುತ್ತಿದ್ದು ದೊಡ್ಡ ದೊಡ್ಡ ಲಾರಿಗಳು ಕೂಡ ಈ ರಸ್ತೆಯಲ್ಲಿ ಹೋಗುತ್ತೇವೆ. ಮಳೆಯಿಂದ ಎಷ್ವು ಲಾರಿಗಳು ಈ ರಸ್ತೆಯಲ್ಲಿ ಸಿಕ್ಕಿಕೊಂಡ ಸನ್ನಿವೇಶಗಳು ಕೂಡ ನಡೆದಿದೆ.
ಸಂಬಂಧಪಟ್ಟ ಟಧಿಕಾರಿಗಳು ಕೊಡಲೇ ಈ ರಸ್ತೆಗೆ ಮುಕ್ತಿಯನ್ನು ಕೊಡಬೇಕು ಎಂದು ಸಾಗಸಂದ್ರ ಹಾಗು ಬಂಡನಹಳ್ಳಿ ಗ್ರಾಮಸ್ತರು ಮನವಿ ಮಾಡಿದ್ದಾರೆ. ಇಲ್ಲದಿದ್ದರೇ ಹೋರಾಟ ಮಾಡುತ್ತೇವೆ ಎಮದು ಎಚ್ಚರಿಕೆ ನಿಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ