ಚಿತ್ರದುರ್ಗದಲ್ಲಿ ಬಂಡಾಯ ಸಾಹಿತ್ಯ ಸಂವಾದ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಕುರಿತು ಚಿಂತನ-ಮಂಥನ

ಚಿತ್ರದುರ್ಗ;

    ಬಂಡಾಯ ಸಹಿತ್ಯ ಸಂಘಟನೆಯು ಅಕ್ಟೋಬರ್ 13 ಮತ್ತು 14 ರಂದು ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಹೆಸರಿನಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

    ಬಂಡಾಯ ಸಾಹಿತ್ಯ ಸಂಘಟನೆಯು ತನ್ನ ವಿವಿಧ ಕ್ರಿಯೆಗಳ ಜೊತೆಗೆ ಸಾಹಿತ್ಯ ಸಂವಾದ ಎಂಬ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸುತ್ತಿದೆ. ಒಂದು ನಿರ್ಧಿಷ್ಟ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ಸಂವಾದ ಮೊದಲ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ನಡೆಸಲಿದೆ ಎಂದು ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಲ್ಲಿ ಒಬ್ಬರಾಗಿರುವ ಆರ್.ಜಿ.ಹಳ್ಳಿ ನಾಗರಾಜ್ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

     ಎರಡು ದಿಗಳ ಕಾಲ ಇಲ್ಲಿನ ತ.ರಾ.ಸು.ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಸಾಹಿತ್ಯ ಕುರಿತು ಹಲವಾರು ಚಿಂತಕರು, ಲೇಖಕರು ವಿಷಯ ಮಂಡಿಸುವರು. ಇದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು

       ಅ.13ರಂದು ಬೆಳಗ್ಗೆ 10 ಗಂಟೆಗೆ ಖ್ಯಾತ ಸಾಹಿತಿ, ಬಂಡಾಯ ಸಾಹಿತ್ಯ ಸಂಘಟನೆಯ ರೂವಾರಿ ಬರಗೂರು ರಾಮಚಂದ್ರಪ್ಪ ಅವರು ಈ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿ.ರಾಮಕೃಷ್ಣ ಅಧ್ಯಕ್ಷತೆವಹಿಸಲಿದ್ದು, ಬಾನು ಮುಷ್ತಾಕ್ ಮುಖ್ಯ ಅಥಿತಿಗಳಾಗಿ ಆಗಮಿಸುವರು

      ಮೊದಲ ಗೊಷ್ಠಿಯಲ್ಲಿ ಕನ್ನಡ ಸಾಹಿತ್ಯ ಕುರಿತು ರಾಜಪ್ಪ ದಳವಾಯಿ, ತಮಿಳು ಸಾಹಿತ್ಯ ಕುರಿತು ರಂಗನಾಥ ಅರನಕಟ್ಟೆ, ತೆಲುಗು ಸಾಹಿತ್ಯ ಕುರಿತು ನಗರಗೆರೆ ರಮೇಶ್ ವಿಷಯ ಮಂಡಿಸುವರು. ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆವಹಿಸುವರು

      ಮದ್ಯಾಹ್ನ 2.15ಕ್ಕೆ ನಡೆಯುವ ಎರಡನೇ ಗೋಷ್ಟಿಯಲ್ಲಿ ಮಲೆಯಾಳಿ ಸಾಹಿತ್ಯ ಕುರಿತು ಮೋಹನ್ ಕುಂಟಾರ, ಸಂಸ್ಕøತ ಸಾಹಿತ್ಯ ಕುರಿತು ಬಿ.ಎನ್.ಸುಮಿತ್ರ ಬಾಯಿ, ಕೊಂಕಣಿ ಸಾಹಿತ್ಯ ಕುರಿತು ಗೀತಾ ಶೆಣೈ ಮಾತನಾಡುವರು. ಕೇಶವ ಶರ್ಮ ಅಧ್ಯಕ್ಷತೆವಹಿಸುವರು
ಸಂಜೆ 4.30ಕ್ಕೆ ನಡೆಯುವ ಮೂರನೇ ಗೋಷ್ಟಿಯಲ್ಲಿ ತುಳು ಸಾಹಿತ್ಯ ಕುರಿತು ಶಿವರಾಮ ಶೆಟ್ಟಿ, ಬ್ಯಾರಿ ಸಾಹಿತ್ಯ ಕುರಿತು ಬಿ.ಎಂ.ಹನೀಫ್, ಕೊಡವ ಸಾಹಿತ್ಯ ಕುರಿತು ವಿಜಯ್ ತಮ್ಮಂಡ ಪೂನಚ್ಚ ಮಾತನಾಡುವರು. ಬೋಳುವಾರು ಮಹಮದ್ ಕುಂಇ ಅಧ್ಯಕ್ಷತೆವಹಿಸುವರು

      14ರಂದು ಬೆಳಿಗ್ಗೆ 96-30ಕ್ಕೆ ನಡೆಯುವ ನಾಲ್ಕನೇ ಗೋಷ್ಟಿಯಲ್ಲಿ ಬಂಗಾಳಿ ಸಾಹಿತ್ಯ ಕುರಿತು ತಾರಿಣಿ ಶುಭದಾಯಿನಿ, ಹಿಂದಿ ಸಾಹಿತ್ಯ ಕುರಿತು ಕಾಶೀನಾಥ ಅಂಬಲಿಗೆ ಹಾಗೂ ಗುಜರಾತಿ ಸಾಹಿತ್ಯ ಕುರಿತು ಎಂ.ಜಿ.ಹೆಗಡೆ ಮಾತನಾಡುವರು. ಅಲ್ಲಮಪ್ರಭು ಬೆಟ್ಟದೂರು ಅದ್ಯಕ್ಷತೆವಹಿಸುವರು

       5ನೇ ಗೋಷ್ಟಿಯಲ್ಲಿ ಉರ್ದು ಸಾಹಿತು ಕುರಿತು ಮೆಹರ್ ಮನ್ಸೂರ್, ಅಸ್ಸಾಮಿ ಸಾಹಿತ್ಯ ಕುರಿತು ಭಾಗೀರಥಿ ಭಾಯಿ, ಮರಾಠಿ ಸಾಹಿತ್ಯ ಕುರಿತು ಚಂದ್ರಕಾಂತ ಪೊಕಳೆ ವಿಚಾರ ಮಂಡಿಸುವರು. ಸುಕನ್ಯಾ ಮಾರುತಿ ಅಧ್ಯಕ್ಷತೆವಹಿಸುವರು ಮದ್ಯಾಹ್ನ 2 ಗಂಟೆಗೆ ನಡೆಯುವ ಗೋಷ್ಟಿಯಲ್ಲಿ ಪಂಜಾಬಿ ಸಾಹಿತ್ಯ ಕುರಿತು ಶ್ರೀಪಾದ ಭಟ್, ಕಾಶ್ಮೀರಿ ಸಾಹಿತ್ಯ ಕುರಿತು ಅರುಣ್ ಜೋಳದ ಕೂಡ್ಲಿಗಿ, ಲಂಬಾಣಿ ಸಾಹಿತ್ಯ ಕುರಿತು ಶಾಂತಾನಾಯಕ್ ವಿಚಾರ ಮಂಡಿಸಲಿದ್ದು, ಬಸವಲಿಂಗಯ್ಯ ಅಧ್ಯಕ್ಷತೆವಹಿಸುವರು

      ಸಂಜೆ 4.30ಕ್ಕೆ ನಡಯುವ ಕವಿಗೋಷ್ಟಿಯಲ್ಲಿ ಹಲವಾರು ಕವಿಗಳು ಪಾಲ್ಗೊಳ್ಳುವರು. ಬಿ.ಟಿ.ಲಲಿತಾ ನಾಯಕ್ ಅಧ್ಯಕ್ಷತೆವಹಿಸಲಿದ್ದು, ಚಂದ್ರಶೇಖರ ತಾಳ್ಯ ಆಶಯ ಭಾಷಣ ಮಾಡುವರು. ಲೊಕೇಶ್ ಅಗಸನಕಟ್ಟೆ ಅತಿಥಿಗಳಾಗಿ ಆಗಮಿಸುವರು

        ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡುವರು. ಚಂದ್ರಶೇಖರ ಪಾಟೀಲ್ ಅಧ್ಯಕ್ಷತೆವಹಿಸುವರು. ಕಾಳೇಗೌಡ ನಾಗಾವರ, ಬಿ.ಎಲ್.ವೇಣು ಮುಖ್ಯಅಥಿತಿಗಳಾಗಿ ಆಗಮಿಸುವರು
ಪತ್ರಿಕಾಗೋಷ್ಟಿಯಲ್ಲಿ ಕರಿಯಪ್ಪ ಮಾಳಿಗೆ, ಸಿ.ಶಿವಲಿಂಗಪ್ಪ, ರಾಮಚಂದ್ರಪ್ಪ, ಕೆ.ಎಂ.ವೀರೇಶ್ ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link