ಕೊರೋನಾ : ಹೊಸ ದಾಖಲೆ ಬರೆದ ಬೆಂಗಳೂರು

ಬೆಂಗಳೂರು:

     ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ದಾಖಲೆಯ 3,552 ಕೊರೋನಾ ಸೋಂಕಿತರು ಪತ್ತೆಯಾಗುವುದರೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 1,67,183ಕ್ಕೆ ಏರಿಕೆಯಾಗಿದೆ. ಆ.15ರಂದು ನಗರದಲ್ಲಿ 3,495 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ವರೆಗಿನ ದಾಖಲೆಯಾಗಿತ್ತು. 

    ಸೆ.1ರಿಂದ 12ರವರೆಗೆ ಒಟ್ಟು 7 ಬಾರಿ ಮೂರು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ. ಸತತ 5 ದಿನಗಳಿಂದ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪತ್ತೆಯಾಗಿರುವ ವರದಿಯಾಗಿದೆ. ಇನ್ನು ನಿನ್ನೆ ಒಂದೇ ದಿನ 3,538 ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 1,23,862ಕ್ಕೆ ಏರಿಕೆಯಾಗಿದೆ. ಶನಿವಾರ 21 ಮಂದಿ ಮೃತಪಟ್ಟಿದ್ದು, ಈ ವರೆಗಿನ ಮೃತಪಟ್ಟವರ ಸಂಖಅಯೆ 2,391ಕ್ಕೆ ಏರಿಕೆಯಾಗಿದೆ. 

    ನಗರದಲ್ಲಿ ಇನ್ನೂ 40,929 ಸಕ್ರಿಯ ಪ್ರಕರಣಗಳಿದ್ದು, 278 ಮಂದಿ ಸೋಂಕಿತರು ನಗರದ ವಿವಿಧ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆಱೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap