ಬೆಂಗಳೂರು
ಕಳೆದ ಆರು ತಿಂಗಳ ಅವಧಿಯಲ್ಲಿ ಉತ್ತರ ವಿಭಾಗದ ಪೊಲೀಸರು ದರೋಡೆ, ಸುಲಿಗೆ, ಸರಗಳವು, ಮನೆಗಳವು, ವಾಹನ ಕಳವು ಸೇರಿದಂತೆ ೪೨೫ ಪ್ರಕರಣಗಳನ್ನು ಪತ್ತೆ ಹಚ್ಚಿ ೩೩೪ ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿ ೫ ಕೋಟಿ ೨೮ ಲಕ್ಷ ೮೭ ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಟಿ ನಗರದ ಹೆಚ್ಎಂಟಿ ಮೈದಾನದಲ್ಲಿ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರು ಕಳೆದ ೬ ತಿಂಗಳ ಅವಧಿಯಲ್ಲಿ ೪೨೫ ಪ್ರಕರಣಗಳನ್ನು ಪತ್ತೆ ಹಚ್ಚಿ ೩೩೪ ಮಂದಿ ಆರೋಪಿಗಳನ್ನು ಬಂಧಿಸಿದ ಉತ್ತರ ವಿಭಾಗದ ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದರು.
ಪತ್ತೆ ಹಚ್ಚಿರುವ ೫ ದರೋಡೆ ಪ್ರಕರಣಗಳಲ್ಲಿ ೧೦ ಮಂದಿ ೬೯ ಸುಲಿಗೆ ಪ್ರಕರಣಗಳಲ್ಲಿ ೧೦೧ ಮಂದಿ ೨೩ ಸರಗಳವು ಪ್ರಕರಣಗಳಲ್ಲಿ ೨೫ ಮಂದಿ ೭೧ ಮನೆಗಳವು ಕೃತ್ಯದಲ್ಲಿ ೪೯ ಮಂದಿ, ೨೩೬ ವಾಹನ ಕಳವು ಕೃತ್ಯದಲ್ಲಿ ೧೦೩ ಮಂದಿ, ೨೩ ಇತರೆ ಕಳವುಗಳಲ್ಲಿ ೪೬ ಮಂದಿ ಸೇರಿದಂತೆ ೩೩೪ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿಸಿರುವ ೩೩೪ ಆರೋಪಿಗಳಿಂದ ೧೪ ಲಕ್ಷ ೫೫ ಸಾವಿರ ನಗದು, ೪ ಕೆಜಿ ೯೧೭ ಗ್ರಾಂ ಚಿನ್ನ, ೨೫ ಕೆಜಿ ಬೆಳ್ಳಿ, ೨೩೬ ದ್ವಿಚಕ್ರ ವಾಹನಗಳು, ೧೮ ಆಟೋಗಳು, ೬ ಕಾರುಗಳು, ೨ ಲ್ಯಾಪ್ಟಾಪ್, ೧೧೫ ಮೊಬೈಲ್ಗಳೂ ಸೇರಿ ೫ ಕೋಟಿ ೨೮ ಲಕ್ಷದ ೮೭ ಸಾವಿರದ ೪೩೧ ರೂ.ಗಳ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಶವಂತಪುರದಲ್ಲಿ ೧೭ ಪ್ರಕರಣಗಳನ್ನು ಪತ್ತೆ ಹಚ್ಚಿದ್ದರೆ, ನಂದಿನಿ ಲೇಔಟ್ನಲ್ಲಿ ಅತಿ ಹೆಚ್ಚು ೭೧ ಪ್ರಕರಣಗಳು. ಆರ್ಎಂಸಿಯಾರ್ಡ್ ೨೪, ಮಲ್ಲೇಶ್ವರಂ ೯, ಆರ್ಟಿ ನಗರ ೩೧, ಮಹಾಲಕ್ಷ್ಮಿ ಲೇಔಟ್ ೪೧, ಜೆಸಿ ನಗರ ೧೬, ಪೀಣ್ಯ ೩೧, ಬಾಗಲಕುಂಟೆ ೨೮, ಸುಬ್ರಮಣ್ಯ ನಗರ ೧೫, ಶ್ರೀರಾಮಪುರ ೨೬, ರಾಜಗೋಪಾಲನಗರ ೧೯, ಜಾಲಹಳ್ಳಿ ೨೮, ರಾಜಾಜಿನಗರ ೧೦, ಸಂಜಯ್ ನಗರ ೧೫, ಹೆಬ್ಬಾಳ ೧೮, ಸೋಲದೇವನಹಳ್ಳಿ ೧೪, ಗಂಗಮ್ಮನಗುಡಿ ೧೨ ಪ್ರಕರಣಗಳನ್ನು ಬೇಧಿಸಲಾಗಿದೆ.
ಪ್ರಕರಣ ದಾಖಲಿಸಿ
ಯಾವುದೇ ರೀತಿಯ ದೂರುಗಳು ಬಂದರು ಮೊದಲು ಅವುಗಳನ್ನು ದಾಖಲಿಸಲು ಪೊಲೀಸರು ಮುಂದಾಗಬೇಕು. ಠಾಣೆಯ ವ್ಯಾಪ್ತಿಯನ್ನು ಬದಿಗಿಟ್ಟು ಮೊದಲು ಕೇಸು ದಾಖಲಿಸಿ ನಂತರ ಅವುಗಳನ್ನು ಸಂಬಂಧಿಸಿದ ಠಾಣೆಗೆ ವರ್ಗಾಯಿಸಿ ಪತ್ತೆ ಹಚ್ಚಲು ಕ್ರಮಕೈಗೊಳ್ಳುವಂತೆ ಭಾಸ್ಕರರಾವ್ ಸೂಚಿಸಿದರು.
ನಗರದಲ್ಲಿ ೧ ಕೋಟಿಗೂ ಹೆಚ್ಚಿನ ಜನಸಂಖ್ಯೆಯಿದ್ದು, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮೊದಲ ಆದ್ಯತೆ ನೀಡಬೇಕು. ಆದರೂ ಅಪರಾಧ ನಡೆದ ಪ್ರಕರಣಗಳನ್ನು ದಾಖಲಿಸಿ ಪತ್ತೆಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಸವಾಲಿನ ಕೆಲಸ
ನಗರದಲ್ಲಿ ಸುನಾರು ಒಂದೂವರೆ ಕೋಟಿ ಜನರದಿದ್ದು ಆವರ ರಕ್ಷಣೆ ಸವಾಲಿನ ಕೆಲಸವಾಗಿದೆ ನಗರದಲ್ಲಿ ೧೯ ಸಾವಿರ ಪೊಳೀಸರಿದ್ದು ಅವರಲ್ಲಿ ರಜೆ ಇನ್ನಿತರ ಕೆಲಸ ಕಾರ್ಯಗಳಿಗೆ ಬಳಸಿಕೊಂಡು ಸಿಬ್ಬಂದಿ ಹೋಗಿ ೧೦ ಸಾವಿರ ಮಂದಿ ಇರಲಿದ್ದು ಅವರ ಮೂಲಕವೇ ಕಾನೂನು ಸುವ್ಯವಸ್ಥೆ ಕಾಪಾಡುವುದು ರಕ್ಷಣೆ ನೀಡುವುದು ಕಷ್ಟಕರ ವಾಗಿದೆ ನಮ್ಮೊಂದಿಗೆ ಸಾರ್ವಜನಿಕರ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಉಮೇಶ್ ಕುಮಾರ್, ಡಿಸಿಪಿ ಶಶಿಕುಮಾರ್ ಅವರು ಪಾಲ್ಗೊಂಡಿದ್ದರು.ಈ ವೇಳೆ ವಾರಸುದಾರರಿಗೆ ಕಳವು ಮಾವುಗಳನ್ನು ಹಸ್ತಾಂತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








