ಹೊಸ ವರ್ಷಾಚರಣೆ : ಮಧ್ಯ ಮಾರಾಟದಲ್ಲಿ ಹೊಸ ದಾಖಲೆ

ಬೆಂಗಳೂರು

   ಹೊಸ ವರ್ಷ 2020ರ ಸ್ವಾಗತದ ಸಂಭ್ರಮಾಚರಣೆಯಲ್ಲಿ ಒಂದೇ ದಿನ ಬರೋಬ್ಬರಿ 70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿ ದಾಖಲೆ ಸೃಷ್ಠಿಯಾಗಿದೆ ಹೊಸ ವರ್ಷದ ಸಂಭ್ರಮದಲ್ಲಿ ಮದ್ಯದ ಮಾರಾಟ ಹೆಚ್ಚಾಗಿದ್ದು ಮಂಗಳವಾರ ರಾತ್ರಿ ಒಂದೇ ದಿನ ಮದ್ಯ ಅಧಿಕ ಮಾರಾಟವಾಗಿದೆ ಎಮದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

   ಕಳೆದ ವರ್ಷ ಡಿ. 31ರಂದು ನಡೆದಿದ್ದ 81 ಕೋಟಿ ಮದ್ಯ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆ ಎನ್ನುವಂತೆ ವಹಿವಾಟು ನಡೆದಿದ್ದರೂ ವಿಶೇಷವಾಗಿ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ಕಲಬುರ್ಗಿ ಸೇರಿದಂತೆ ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ಬೇಡಿಕೆ ಬಂದಿತ್ತು. ಹೀಗಾಗಿ, ಈ ಬಾರಿ ಮದ್ಯದ ಮಾರಾಟ ಕಳೆದ ವರ್ಷಕ್ಕಿಂತ ಹೆಚ್ಚಾಗಬಹುದೆಂದು ಅಬಕಾರಿ ಇಲಾಖೆ ಅಧಿಕಾರಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಪ್ರಸ್ತುತ 70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟ ನಡೆದಿರಬಹುದೆಂದು ಅಂದಾಜಿಸಲಾಗಿದ್ದು. ವಹಿವಾಟಿನ ಸ್ಪಷ್ಟ ಲೆಕ್ಕ ಒಂದೆರೆಡು ದಿನಗಳಲ್ಲಿ ಬಹಿರಂಗವಾಗಲಿದೆ.

    ಅಬಕಾರಿ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ 70 ರಿಂದ 75 ಕೋಟಿ ವಹಿವಾಟು ನಡೆದಿದ್ದರೂ ನಿರೀಕ್ಷೆಗೂ ಮೀರಿದ ವಹಿವಾಟು ನಡೆದರೂ ಆಶ್ಚರ್ಯವಿಲ್ಲ. 2017ರ ವರ್ಷಾಂತ್ಯದ 10 ದಿನಗಳಲ್ಲಿ 512 ಕೋಟಿ ರೂ. ವಹಿವಾಟು ನಡೆದರೆ, 2018ರ ಕೊನೆಯ 10 ದಿನಗಳಲ್ಲಿ ಕೇವಲ 481 ಕೋಟಿ ರೂ. ವಹಿವಾಟು ನಡೆದಿತ್ತು. 2019ರಲ್ಲಿ ಡಿ. 30ರವರೆಗೆ ಹಿಂದಿನ 10 ದಿನಗಳಲ್ಲಿ 516 ಕೋಟಿ ರೂ. ವಹಿವಾಟು ನಡೆದಿದೆ. ಹಾಗಾಗಿ, ಮದ್ಯ ಮಾರಾಟದಲ್ಲಿ ಏರಿಳಿತಗಳು ಪ್ರತಿವರ್ಷ ನಡೆಯುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link