ನಕಲಿ ಪಾಸ್ ಪೋರ್ಟ್ ಬಳಕೆ : ಬಾಂಗ್ಲಾ ಪ್ರಜೆ ಬಂಧನ

ಬೆಂಗಳೂರು

    ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಲ್ಕತದಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ನಗರಕ್ಕೆ ಬಂದು ರಷ್ಯಾಗೆ ಪರಾರಿಯಾಗಲು ಯತ್ನಿಸುತ್ತಿದ್ದ ಬಾಂಗ್ಲಾ ಪ್ರಜೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಷ್ಯಾದ ಮಾಸ್ಕೋಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಬಾಂಗ್ಲಾದೇಶದ ಕಮಲ್ ಪಾಲ್ (29) ಬಂಧಿತ ಆರೋಪಿ ಯಾಗಿದ್ದಾನೆ .ಕಳೆದ ನ.2ರಂದು ಅನುಮಾನಾಸ್ಪದ ವರ್ತನೆ ಕಂಡು ವೀಸಾ, ಪಾಸ್‌ಪೋರ್ಟ್ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಬಾಂಗ್ಲಾ ಪ್ರಜೆ ಎಂಬುದು ತಿಳಿದು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

      ಆರೋಪಿ 2012ರಲ್ಲಿ ಬಾಂಗ್ಲಾ ದೇಶದ ಬೇನಾಪೋಲ್ ಗಡಿಯಿಂದ ನುಸುಳಿದ್ದ. ಬಳಿಕ ಕೋಲ್ಕತದ ಚಂದನ್‌ನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು, ಕನೈಲಾಲ್ ಕಾಲನಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.ಈ ವೇಳೆ ತಾನು ವಾಸವಿದ್ದ ಮನೆಯ ಬಾಡಿಗೆ ಕರಾರು ಪತ್ರ ಹಾಗೂ ಕೆಲಸ ಮಾಡುತ್ತಿದ್ದ ಕಂಪನಿಯ ಗುರುತಿನ ಚೀಟಿ ಬಳಸಿ ಬಿಕಾಶ್ ರಾಯ್ ಎಂಬ ಹೆಸರಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್‌ಕಾರ್ಡ್ ಮಾಡಿಸಿಕೊಂಡಿದ್ದ. ಬಳಿಕ ಕೋಲ್ಕತ ಕಚೇರಿಯಿಂದ ಪಾಸ್‌ಪೋರ್ಟ್ ಪಡೆದು, ರಷ್ಯಾದ ಮಾಸ್ಕೋಗೆ ಹೋಗಲು ಕೆಐಎಎಲ್‌ಗೆ ಬಂದಿದ್ದ. ವಿಮಾನ ನಿಲ್ದಾಣದ ಅಧಿಕಾರಿಗಳ ತಪಾಸಣೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link