ಬರಡು ನಾಡನ್ನು ಹಸಿರುಗೊಳಿಸುವ ಯತ್ನಕ್ಕೆ ಎಲ್ಲರೂ ಕೈಜೋಡಿಸಿ : ತಹಶೀಲ್ದಾರ್

ಚಳ್ಳಕೆರೆ

   ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಬೇಕಾದಲ್ಲಿ ನಮ್ಮ ಆರೋಗ್ಯ ಸದೃಢವಾಗಿರಬೇಕು. ಆರೋಗ್ಯ ಸದೃಢವಾಗಬೇಕಾದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಚನ್ನಾಗಿರಬೇಕು. ಪರಿಸರ ಇರಬೇಕಾದಲ್ಲಿ ಗಿಡ ಮರಗಳ ಬೆಳೆವಣಿಗೆಗೆ ಸ್ವಯಂ ಪ್ರೇರಣೆಯಿಂದ ನಾವೆಲ್ಲರೂ ಬೆಳೆಸುಬೇಕೆಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.

      ಅವರು, ಶುಕ್ರವಾರ ಹಿರೇಹಳ್ಳಿಯ ಚಿಂತಾಮಣೇಶ್ವರ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚಮೇವ ಜಯತೆಯ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿನಿತ್ಯವೂ ನಾವು ಹಲವಾರು ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಕ್ರಿಯವಾಗಿದ್ದೇವೆ. ಅದೇ ರೀತಿ ಗಿಡ ಮರಗಳನ್ನು ನೆಟ್ಟು ಪೋಸಿಸುವ ಮೂಲಕ ಸ್ವಚ್ಚಮೇವ ಜಯತೆ ಕಾರ್ಯಕ್ರಮ ಯಶಸ್ಸಿಯಾಗಲು ಸಹಕಾರ ನೀಡಬೇಕಿದೆ.

     ಕೇವಲ ಶಾಲೆಯಲ್ಲಿ ಮಾತ್ರ ಈ ಕಾರ್ಯಕ್ರಮ ಆಚರಿಸಿದರೆ ಸಾಲದು ಬದಲಾಗಿ ಇದೀ ಗ್ರಾಮದ ಜನತೆಯೇ ತಮಗೆ ಲಭ್ಯವಿರುವ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಸಿಸುವ ಸಂಕಲ್ಪ ಮಾಡಬೇಕಿದೆ ಎಂದರು.

       ಹಿರಿಯ ತೋಟಗಾರಿಕೆ ನಿರ್ದೇಶಕರಾದ ಪಿ.ವಿಶ್ವನಾಥ ಮಾತನಾಡಿ, ಇಂತಹ ಕಾರ್ಯಕ್ರಮಗಳ ಆಚರಣೆಯಿಂದ ನಾವೆಲ್ಲರೂ ಪರಿಸರ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಪಡೆಯುತ್ತೇವೆ. ನಮ್ಮೆಲ್ಲರ ಬದುಕು ಸಾರ್ಥಕವೆನ್ನಿಸಬೇಕಾದಲ್ಲಿ ನಾವೆಲ್ಲರೂ ಪರಿಸರ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಿದೆ. ಸ್ವಚ್ಚಮೇವ ಜಯತೆ ಕಾರ್ಯಕ್ರಮ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮದ ಯಶಸ್ಸಿಗಾಗಿ ಹೆಚ್ಚು ಪರಿಶ್ರಮವಹಿಸುತ್ತಿದ್ದಾರೆ. ತಾಲ್ಲೂಕಿನ ಶೇ.50 ಭಾಗ ಶಾಲೆಯಲ್ಲಿ ಈ ಕಾರ್ಯಕ್ರಮ ಈಗಾಗಲೇ ಚಾಲನೆಯನ್ನು ಪಡೆದಿದೆ ಎಂದರು.

     ಕಾರ್ಯಕ್ರಮದಲ್ಲಿ ಉಪಕೃಷಿ ನಿರ್ದೇಶಕಿ ಸುಜಾತರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಟಿ.ಬಸವರಾಜು, ಉಪಾಧ್ಯಕ್ಷ ಎ.ಕೆ.ರಾಜು, ಸದಸ್ಯ ಜಿ.ಎಸ್.ವೆಂಕಟೇಶ್, ಮುಖ್ಯ ಶಿಕ್ಷಕ ಶ್ರೀನಿವಾಸನ್, ಸಿಆರ್‍ಪಿ ಎನ್.ಮಾರಣ್ಣ, ತಿಪ್ಫೇಸ್ವಾಮಿ, ರಶ್ಮಿ, ಪಿ.ಸಂಧ್ಯಾ, ಡಿ.ಟಿ.ತಿಪ್ಪೇಸ್ವಾಮಿ, ಟಿ.ಲೋಕೇಶ್, ಟಿ.ತಿಪ್ಪೇಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link